Site icon Vistara News

video viral: ಎಂಥಾ ಅಡ್ಜಸ್ಟ್‌ಮೆಂಟ್! ಒಂದೇ ಬೈಕಲ್ಲಿ ಆರು ಜನರ ಫ್ಯಾಮಿಲಿ ಟೂರ್‌!

ಬೆಂಗಳೂರು: ದ್ವಿಚಕ್ರ ವಾಹನಗಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತವೆ, ನಾವು ಮಾರುಕಟ್ಟೆಗೆ, ಸಿನಿಮಾಗೆ, ಕಚೇರಿ ಕೆಲಸಗಳಿಗೆ, ಸಮಾರಂಭಕ್ಕೆ, ಮಕ್ಕಳನ್ನು ಶಾಲೆಗೆ ಬಿಡಲು, ಕಾಲೇಜಿಗೆ ಹೋಗಲು ಬೈಕ್‌ನ್ನು ಬಳಸುತ್ತವೆ. ಬೈಕ್‌ ದಿನನಿತ್ಯದ ಬದುಕಿಗೆ ಬೇಕಾಗುವ ಅಗತ್ಯ ವಾಹನ. ಇಂತಹ ದ್ವಿಚಕ್ರ ವಾಹನದಲ್ಲಿ ಸಾಮಾನ್ಯವಾಗಿ ಒಬ್ಬರು, ಇಬ್ಬರು, ಇಲ್ಲಾ ಮೂರು ಜನ ಹೋಗುವುದನ್ನು ನಾವು ನೀವೆಲ್ಲಾ ನೋಡಿರುತ್ತೇವೆ.. ಆದರೆ ಇಲ್ಲೊಬ್ಬರು 6 ಜನರನ್ನು ಹತ್ತಿಸಿಕೊಂಡು ಫ್ಯಾಮಿಲಿ ಟೂರ್‌ ಹೋಗಿದ್ದಾರೆ ಅಂದರೆ ನಂಬುತ್ತಿರಾ? ಆ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

6 ಜನರು ಬೈಕಿನಲ್ಲಿ ಹತ್ತಿ ಹೋಗುತ್ತಿರುವುದು

“ಇಂಡಿಯಾ ಈಸ್‌ ಅಡ್ಜಸ್ಟ್ ಮೆಂಟ್‌ ಕಂಟ್ರಿ” ಅಂತಾ ಹೇಳೋದು ಸುಮ್ಮನೆ ಅಲ್ಲ! ಕೆಲವೊಮ್ಮೆ ಇಂಥ ಭಯಂಕರ ಅಡ್ಜಸ್ಟ್‌ ಮೆಂಟ್‌ಗಳು ಕಣ್ಣಾರೆ ನೋಡಲೂ ಸಿಗುತ್ತವೆ!

ಈಗ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ಒಬ್ಬ ವ್ಯಕ್ತಿ ಮೋಟಾರ್‌ಬೈಕ್‌ನಲ್ಲಿ ಇಬ್ಬರು ಮಕ್ಕಳನ್ನು ಎದುರಿನ ಪೆಟ್ರೋಲ್‌ ಟ್ಯಾಂಕ್‌ ಕೂರಿಸಿದ್ದಾನೆ. ನಂತರ, ಒಬ್ಬ ಮಹಿಳೆ ಕುಳಿತುಕೊಳ್ಳುತ್ತಾಳೆ. ಬಳಿಕ ಎರಡನೇ ಮಗು ಕುಳಿತುಕೊಂಡಿದೆ. ಕೊನೆಗೆ ಬೈಕಿನ ಹಿಂಬದಿಯಲ್ಲಿ ಮತ್ತೊಬ್ಬ ಮಹಿಳೆ ಇನ್ನೊಂದು ಮಗುವಿನೊಂದಿಗೆ ಕುಳಿತಿದ್ದಾಳೆ. ಒಟ್ಟಾರೆ 6 ಜನ ಒಂದೇ ಬೈಕಿನಲ್ಲಿ ಕುಳಿತುಕೊಂಡು ಹೋಗಿದ್ದಾರೆ. ಮೇಲ್ನೋಟಕ್ಕೆ ಅವರೆಲ್ಲ ಅಶಿಕ್ಷಿತರಂತೆ ಕಾಣುತ್ತಿಲ್ಲ. ಚೆನ್ನಾಗಿ ತಿಳುವಳಿಕೆ ಇರುವ, ಸುಸಂಸ್ಕೃತ, ವಿದ್ಯಾವಂತರಂತೆ ಕಾಣುತ್ತಾರೆ. ಈ ಸವಾರಿಯನ್ನು ಇಷ್ಟಪಟ್ಟೇ ಮಾಡಿದ್ದಾರೆ.

ಕಪ್ತಾನ್‌ ಹಿಂದೂಸ್ತಾನ ಅವರು ಈ ವಿಡಿಯೊ ಶೇರ್‌ ಮಾಡಿದ್ದಾರೆ. ಈ ವಿಡಿಯೊಗೆ ʻಫ್ಯಾಮಿಲಿ ಟ್ರಿಪ್‌ʼ ಎಂದು ಟೈಟಲ್‌ ನೀಡಿದ್ದಾರೆ. ಈ ಕುರಿತಂತೆ ಅನೇಕರು ಕಮೆಂಟ್‌ ಮಾಡಿದ್ದಾರೆ. ಇಂತಹ ಬೈಕ್‌ ರೈಡ್ ಡೇಂಜರಸ್‌. ಪ್ರಾಣಗಳ ಜೊತೆಗಿನ ಚೆಲ್ಲಾಟ ಅಂತ ಕೆಲವು ನೆಟ್ಟಿಗರು ಗರಂ ಆಗಿದ್ದಾರೆ. ಕೆಲವರು ತಮಾಷೆಯ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Online Beauty Trend: ವೈರಲ್‌ ಆದ ಹೇರ್‌ ಕಲರ್ ಸ್ಟೈಲ್‌

Exit mobile version