ಇಂಫಾಲ್: ಮಣಿಪುರದ ನೋನಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ, ಇಂಫಾಲ್ನಲ್ಲಿದ್ದ ಭದ್ರತಾ ಕ್ಯಾಂಪ್ ಬಳಿ ಭೂ ಕುಸಿತ ಸಂಭವಿಸಿ 18 ಯೋಧರು ಸೇರಿದಂತೆ 24 ಮಂದಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳದಲ್ಲಿ ಎನ್ಡಿಆರ್ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ. ಈವರೆಗೆ ಮಣ್ಣಿನೊಳಗೆ ಸಿಲುಕಿದ್ದ 13 ಯೋಧರು ಮತ್ತು 5 ಮಂದಿ ನಾಗರಿಕರನ್ನು ರಕ್ಷಣೆ ಮಾಡಲಾಗಿದೆ. ಈಗಲೂ 38 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ| Manipur Landslide: ಮಣಿಪುರ ಭೂಕುಸಿತದ ಸಾವಿನ ಸಂಖ್ಯೆ 14ಕ್ಕೆ ಏರಿಕೆ; ಏಳು ಯೋಧರ ದುರ್ಮರಣ
ಮಣಿಪುರದ ನೋನಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗುತ್ತಿದೆ. ಕಳೆದ ಬುಧವಾರ ರಾತ್ರಿ (ಜೂ.29) ತುಪುಲ್ನಲ್ಲಿರುವ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಯಾರ್ಡ್ ಮತ್ತು ಅಕ್ಕಪಕ್ಕದ ಭದ್ರತಾ ಕ್ಯಾಂಪ್ಗಳಲ್ಲಿ ಕೂಡ ಭೂ ಕುಸಿತ ಉಂಟಾಗಿ ಅದರಡಿ 50ಕ್ಕೂ ಹೆಚ್ಚು ಮಂದಿ ಸಿಲುಕಿದ್ದರು.
ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಸಿಎಂ ಬಿರೆನ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರ ಕುಟುಂಬದವರಿಗೆ 5 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂಪಾಯಿ ನೆರವು ಘೋಷಿಸಿದ್ದಾರೆ.
ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದ್ದ ಯೋಧರು ಹಾಗೂ ನಾಗರಿಕರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ| Land slide: ಮಣಿಪುರದಲ್ಲಿ ಭಾರಿ ಕುಸಿತ, ಏಳು ಸಾವು, 23 ಮಂದಿ ಇನ್ನೂ ಮಣ್ಣಿನೊಳಗೆ