ನವದೆಹಲಿ:ಮಣಿಪುರದಲ್ಲಿ ಕಳೆದ ವರ್ಷ ನಡೆದ ಜನಾಂಗೀಯ ಹಿಂಸಾಚಾರ(Manipur Violence)ಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್(CBI Chargesheet)ನಲ್ಲಿ ಭಯಾನಕ ವಿಚಾರವೊಂದು ಬೆಳಕಿಗೆ ಬಂದಿದೆ. ಮಣಿಪುರದ ಚೂರಚಂದಪುರ(Churchandpur) ಜಿಲ್ಲೆಯಲ್ಲಿ ನಡೆದ ಕುಕ್ಕಿ ಸಮುದಾಯದ ಇಬ್ಬರು ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣಕೆ ಸಂಬಂಧಿಸಿದಂತೆ ಮಹತ್ವದ ವಿಚಾರವೊಂದನ್ನು ಸಿಬಿಐ(CBI) ತಾನು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಇಬ್ಬರು ಮಹಿಳೆಯರ ನಗ್ನ ಮೆರವಣಿಗೆಗೂ ಮುನ್ನ ಆ ಮಹಿಳೆಯರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್ ಜಿಪ್ಸಿಯಲ್ಲಿ ಅಡಗಿಕುಳಿತು ಅಲ್ಲಿಂದ ಪಾರಾಗಲು ಯತ್ನಿಸಿದ್ದರು. ಆದರೆ ಪೊಲೀಸ್ ಜೀಪ್ ಡ್ರೈವರ್ ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ತನ್ನ ಬಳಿ ಗಾಡಿಯ ಕೀ ಇಲ್ಲ ಎಂದು ನೆಪ ಹೇಳಿ ಆ ಮಹಿಳೆಯರನ್ನು ದುಷ್ಕರ್ಮಿಗಳ ತಂಡಕ್ಕೆ ಒಪ್ಪಿಸಿದ್ದರು ಎಂಬ ವಿಚಾರ ಬಯಲಾಗಿದೆ.
ಗಲಭೆ ವೇಳೆ ಪೊಲೀಸ್ ವಾಹನದಲ್ಲಿ ಇಬ್ಬರು ಮಹಿಳೆಯರು ಸೇರಿ ಒಟ್ಟು ನಾಲ್ವರು ರಕ್ಷಣೆಗಾಗಿ ಅಡಗಿ ಕುಳಿತಿದ್ದರು. ಆದರೆ ಅವರನ್ನು ಕೆಳಗಿಳಿಸಿದ್ದ ಪೊಲೀಸರು ಉದ್ರಿಕ್ತ ಜನರ ಗುಂಪಿಗೆ ಒಪ್ಪಿಸಿ ಅಲ್ಲಿಂದ ತೆರಳಿದ್ದರು. ಈ ನಾಲ್ವರನ್ನು ಜೀಪಿನಿಂದ ಹೊರಗೆಳೆದು ಅವರನ್ನು ಚೆನ್ನಾಗಿ ಥಳಿಸಿದ್ದ ಜನ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದರು ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ. ಈ ಘಟನೆ ದೇಶ-ವಿದೇಶಗಳಲ್ಲಿ ಬಹುದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಇನ್ನು ಈ ಬಗ್ಗೆ ಮಣಿಪುರ ಡಿಜಿಪಿ ರಾಜೀವ್ ಸಿಂಗ್ ಪ್ರತಿಕ್ರಿಯಿಸಿದ್ದು, ಆ ಪೊಲೀಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗಿದೆ. ಆತನ ವಿರುದ್ಧ ಕಾನೂನಾತ್ಮಕ ಕ್ರಮದ ಬಗ್ಗೆ ಸಿಬಿಐ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಜರುಗಿಸಲಾಗುತ್ತದೆ ಎಂದು ತಿಳಿಸಿದರು. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಸಂಘಟನೆಗಳು ಮೆರವಣಿಗೆ ಆಯೋಜಿಸಿದ ಬಳಿಕ ಮೇ 3ರಂದು ಹಿಂಸಾಚಾರ ಭುಗಿಲೆದ್ದಿತ್ತು. ಆ ಸಂದರ್ಭದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಇದರ ವಿಡಿಯೋ ವೈರಲ್ ಆಗಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿತ್ತು. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 180ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಭರವಸೆ ನೀಡಿದ್ದರು.
ಇದನ್ನೂ ಓದಿ:Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು, ಬಾಬಾ ರಾಮದೇವ್ ವಿರುದ್ಧ ಬಿತ್ತು ಕೇಸ್
ಗಲಭೆ ಶುರುವಾಗುತ್ತಿದ್ದಂತೆ ಸಂತ್ರಸ್ತ ಕುಟುಂಬ ಪ್ರಾಣ ರಕ್ಷಣೆಗೆ ಅಲ್ಲಿ ಇಲ್ಲಿ ಓಡಲು ಶುರು ಮಾಡಿದ್ದರು. ಕೆಲವರು ಕಾಡಿಗೆ ಓಡಿ ಅಡಗಿ ಕೂರಲು ಯತ್ನಿಸಿದರೆ ಇನ್ನುಳಿದ ನಾಲ್ವರು ಪೊಲೀಸ್ ವಾಹನದಲ್ಲಿ ಅಡಗಿ ಕುಳಿತಿದ್ದರು. ಪೊಲೀಸ್ ವಾಹನದಲ್ಲಿ ಇಬ್ಬರು ಸಮವಸ್ತ್ರ ಧರಿಸದೇ ಇದ್ದ ಪೊಲೀಸರು ಕುಳಿತಿದ್ದರು. ರಕ್ಷಿಸುವಂತೆ ಅವರ ಬಳಿ ಎಷ್ಟೇ ಬೇಡಿಕೊಂಡರೂ ವಾಹನದ ಕೀ ಇಲ್ಲ ಎಂದು ನೆಪ ಹೇಳಿ ಅವರನ್ನು ಜನರಿಗೆ ಒಪ್ಪಿಸಿದ್ದರು. ಚುರಾಚಂದ್‌ಪುರದಲ್ಲಿ ನೀವು ನಮ್ಮನ್ನು (ಮೇಟಿಯ ಜನರು) ಹೇಗೆ ನಡೆಸಿಕೊಂಡಿದ್ದೀರಿ, ನಾವು ನಿಮಗೂ ಅದೇ ರೀತಿ ಮಾಡುತ್ತೇವೆ ಎಂದು ಅವರನ್ನು ಚೆನ್ನಾಗಿ ಥಳಿಸಿ, ಬಳಿಕ ಈ ನೀಚ ಕೃತ್ಯ ಎಸಗಿದ್ದಾರೆ ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ. ಅದನ್ನು ಗಮನಿಸಿದ ಜನರ ಗುಂಪು ಅವರ ಬಳಿ ಓಡಿಬಂದಿತ್ತು. ತಕ್ಷಣ ಪೊಲೀಸ್