Site icon Vistara News

Mann Ki Baat | ಶಿವಮೊಗ್ಗದಿಂದ ಅಡಕೆ ಹಾಳೆಯ ಉತ್ಪನ್ನಗಳನ್ನು ರಫ್ತು ಮಾಡುವ ದಂಪತಿಗೆ ಪ್ರಧಾನಿ ಪ್ರಶಂಸೆ

Narendra Modi Mann Ki Baat Live Updates

ಮನ್‌ ಕಿ ಬಾತ್

ಶಿವಮೊಗ್ಗ: ಶಿವಮೊಗ್ಗದ ಸುರೇಶ್‌ ಹಾಗೂ ಮೈಥಿಲಿ ದಂಪತಿ ಅಡಕೆ ಹಾಳೆಯಿಂದ ಆಕರ್ಷಕ ಉತ್ಪನ್ನಗಳನ್ನು ತಯಾರಿಸುತ್ತಾರೆ. ಅವರು ತಯಾರಿಸುವ ತಟ್ಟೆ, ಟ್ರೇ, ಚಪ್ಪಲಿಯ ಪ್ರಾಡಕ್ಟ್‌ಗಳು ದೇಶಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಈ ದಂಪತಿಯ ಸಾಧನೆ (Mann Ki Baat) ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮನ್‌ ಕಿ ಬಾತ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವಮೊಗ್ಗದ ವಿನೋಬ ನಗರದ ವಾಸಿಯಾಗಿರುವ ಸುರೇಶ್ ಭಟ್ ದಂಪತಿ ಭೂಮಿ ಅಗ್ರಿ ವೆಂಚರ್ಸ್ ಹೆಸರಿನಲ್ಲಿ ಪರಿಸರ ಸ್ನೇಹಿ ಉತ್ಪನ್ನಗಳ ವ್ಯವಹಾರ ಮಾಡುತ್ತಿದ್ದಾರೆ. ಜೈವಿಕ ಅಡಿಕೆ ಹಾಳೆಯಿಂದ ಚಪ್ಪಲಿ, ಪೆನ್ ಸ್ಟ್ಯಾಂಡ್, ಡೈರಿ ಮತ್ತಿತರ ವಿನೂತನ ಉತ್ಪನ್ನಗಳನ್ನು ತಯಾರಿಸಿ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಒದಗಿಸುತ್ತಿದ್ದಾರೆ. ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ವಿತರಕರು ಮತ್ತು ಬ್ರ್ಯಾಂಡ್ ಮಾರಾಟಗಾರರೊಂದಿಗೆ ವ್ಯವಹಾರ ಮಾಡುತ್ತಿದ್ದು, ಗುಣಮಟ್ಟದ ಉತ್ಪನ್ನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಪ್ರತಿ ಉತ್ಪನ್ನದಲ್ಲಿ ಹೊಸತನವನ್ನು ಪ್ರದರ್ಶಿಸುವುದರಲ್ಲಿ ಇವರದು ಎತ್ತಿದ ಕೈ. ಸುರೇಶ್ ದಂಪತಿ ಅರೆಕಾ ಪಾಮ್ ಉತ್ಪನ್ನಗಳ ಪ್ರಸಿದ್ಧ ತಯಾರಕರು, ರಫ್ತುದಾರರು ಮತ್ತು ಪೂರೈಕೆದಾರರಲ್ಲಿ ಒಬ್ಬರು. ಪ್ರಾಣಿಗಳ ಚರ್ಮ, ಪ್ಲಾಸ್ಟಿಕ್ ಮತ್ತು ರಬ್ಬರ್‌ಗೆ ಪರ್ಯಾಯವಾಗಿ, ಅಗ್ಗದ ಸಸ್ಯ ಆಧಾರಿತ ಉತ್ಪನ್ನಗಳನ್ನು ತಯಾರಿಸುತ್ತಾರೆ.
ಇವರು ಆಯ್ದ ಅಡಿಕೆ ಎಲೆಗಳನ್ನು ಮೃದುತ್ವಕ್ಕಾಗಿ ಜೈವಿಕ ದ್ರಾವಣದಲ್ಲಿ ಮುಳುಗಿಸಿ ಪಾಮ್ಲೆದರ್ ತಯಾರಿಸುತ್ತಾರೆ. ಪಾಮ್ಲೆದರ್ ಉತ್ಪನ್ನಗಳನ್ನು ಆಯ್ದ ಅಡಿಕೆ ಎಲೆಗಳಿಂದ ತಯಾರಿಸಲಾಗುತ್ತದೆ, ಇದು ಪ್ರಾಣಿಗಳ ಚರ್ಮ, ಪ್ಲಾಸ್ಟಿಕ್ ಮತ್ತು ರಬ್ಬರ್ಗಳಿಗೆ ಅಗ್ಗದ ಸಸ್ಯ ಆಧಾರಿತ ಬದಲಿಯಾಗಿದೆ.

ಈ ದಂಪತಿ ನೈಸರ್ಗಿಕವಾಗಿ ಮರದಿಂದ ಬಿದ್ದ ಅಡಿಕೆ ಎಲೆಗಳಿಂದ ತಟ್ಟೆ, ಚಪ್ಪಲಿ ಮತ್ತಿತರ ಉತ್ಪನ್ನಗಳನ್ನು ತಯಾರಿಸುತ್ತಾರೆ. ಯಾವುದೇ ಇತರ ಕೃತಕ ಸೇರ್ಪಡೆ ಇರುವುದಿಲ್ಲ. ಹೀಗಾಗಿ ಇವರ ಉತ್ಪನ್ನಗಳಿಗೆ ರಾಜ್ಯ, ದೇಶ ಸೇರಿದಂತೆ ವಿದೇಶಗಳಲ್ಲೂ ಬೇಡಿಕೆಯಿದೆ.

Exit mobile version