ತಿರುವನಂತಪುರಂ: ಮುಸ್ಲಿಂ ಬಾಲಕಿಯನ್ನು ಮದುವೆಯಾದರೂ ಅದು ಪೋಕ್ಸೊ ಕಾಯ್ದೆ (POCSO Act) ವ್ಯಾಪ್ತಿಗೆ ಬರುತ್ತದೆ ಎಂದು ಕೇರಳ ಹೈಕೋರ್ಟ್ ತಿಳಿಸಿದೆ. ಮುಸ್ಲಿಂ ಬಾಲಕಿಯನ್ನು ಮದುವೆಯಾಗಿ, ಆಕೆಯ ಜತೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದರೆ ಆತನ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯಲ್ಲೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದೆ.
ಪಶ್ಚಿಮ ಬಂಗಾಳದಿಂದ 16 ವರ್ಷದ ಮುಸ್ಲಿಂ ಬಾಲಕಿಯನ್ನು 31 ವರ್ಷದ ವ್ಯಕ್ತಿಯೊಬ್ಬ ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಗೈದು, ನಂತರ ಆಕೆಯನ್ನೇ ಮದುವೆಯಾದ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ನ್ಯಾ. ಬಚು ಕುರಿಯನ್ ಥಾಮಸ್, “ಮುಸ್ಲಿಂ ಬಾಲಕಿಯನ್ನು ಮದುವೆಯಾದರೂ ಮದುವೆ ಆಗುವ ವ್ಯಕ್ತಿಗೆ ಪೋಕ್ಸೊ ಕಾಯ್ದೆ ಅನ್ವಯವಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಮುಸ್ಲಿಂ ಬಾಲಕಿಯನ್ನು ಮದುವೆಯಾದ ವ್ಯಕ್ತಿ ಪರ ವಾದ ಮಂಡಿಸಿದ ವಕೀಲರು, “ವ್ಯಕ್ತಿಯು ಬಾಲಕಿಯನ್ನು ಕಾನೂನಾತ್ಮಕವಾಗಿ ಮದುವೆಯಾಗಿದ್ದಾನೆ. ಇವರ ಮದುವೆಯನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಮಾನ್ಯಗೊಳಿಸಿದೆ. ಹಾಗಾಗಿ, ವ್ಯಕ್ತಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವುದು ಸಮಂಜಸವಲ್ಲ. ಇಂತಹ ಪ್ರಕರಣಗಳಲ್ಲಿ ಕರ್ನಾಟಕ, ದೆಹಲಿ ಹಾಗೂ ಹರಿಯಾಣ ಹೈಕೋರ್ಟ್‌ಗಳು ಕೂಡ ಇದೇ ತೀರ್ಪು ನೀಡಿವೆ” ಎಂದರು. ಆದರೆ, ಇವರ ವಾದವನ್ನು ನ್ಯಾ.ಥಾಮಸ್ ಒಪ್ಪದೆ ಜಾಮೀನು ನಿರಾಕರಿಸಿದರು.
ಇದನ್ನೂ ಓದಿ | Sexual harrassment | ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಪೋಕ್ಸೊ ಕಾಯಿದೆಯಡಿ ದೈಹಿಕ ಶಿಕ್ಷಕ ಅರೆಸ್ಟ್