Site icon Vistara News

Chandrayaan 3: ಮಸಾಲೆ ದೋಸೆ, ಫಿಲ್ಟರ್ ಕಾಫಿ ಚಂದ್ರಯಾನ-3 ಯಶಸ್ಸಿನ ಹಿಂದಿರುವ ರಹಸ್ಯ ಸೂತ್ರ!

Chandrayaan 3 and Masala Dose

ನವದೆಹಲಿ: ಚಂದ್ರನ ದಕ್ಷಿಣ ಧ್ರುವದಲ್ಲಿ (South Pole of Moon) ಬೀಡು ಬಿಟ್ಟಿರುವ ಚಂದ್ರಯಾನ-3 (Chandrayaan 3) ಎಂಥ ಸಕ್ಸೆಸ್ ಕಂಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ವಿಕ್ರಮ್ ಲ್ಯಾಂಡರ್ (Vikram Lander) ಮತ್ತು ಪ್ರಜ್ಞಾನ್ ರೋವರ್‌ಗಳು (Pragyan Rover) ನಿತ್ಯ ವೈಜ್ಞಾನಿಕ ಸಂಶೋಧನಗಳ ಮೂಲಕ ಚಂದ್ರನ ಬಗೆಗಿನ ಅನೇಕ ಹೊಸ ಸಂಗತಿಗಳನ್ನು ಭೂಮಿಗೆ ರವಾನಿಸುತ್ತಿವೆ. ಈ ಚಂದ್ರಯಾನ-3 ಯಶಸ್ಸಿಗೆ ಕಾರಣವೇನು, ಯಾರು? ಎಂದು ಪ್ರಶ್ನೆ ಕೇಳಿದರೆ, ನಿಶ್ಚಿತವಾಗಿಯೂ ಇಸ್ರೋ (ISRO) ವಿಜ್ಞಾನಿಗಳು ಎಂಬ ಉತ್ತರ ದೊರೆಯುತ್ತದೆ. ಆದರೆ, ನಿಮಗೆ ಗೊತ್ತಾ.. ಚಂದ್ರಯಾನ ಯಶಸ್ಸಿಗೆ ಮಸಾಲೆ ದೋಸೆ (Masala Dose) ಮತ್ತು ಫಿಲ್ಟರ್ ಕಾಫಿ (Filter Coffee) ಕಾರಣವಾಗಿದೆ! ಹೌದು. ನಿಜ, ಹಿರಿಯ ಪತ್ರಕರ್ತೆ ಬರ್ಖಾ ದತ್ (Journalist Barkha Dutt) ಅವರು ಅಮೆರಿಕದ ವಾಷಿಂಗ್ಟನ್ ಪೋಸ್ಟ್‌ಗೆ ಬರೆದಿರುವ ಅಂಕಣದಲ್ಲಿ ಈ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಚಂದ್ರಯಾನ-3 ಯೋಜನೆಯನ್ನು ಯಶಸ್ವಿಗೊಳಿಸಲು ಪಣತೊಟ್ಟಿದ್ದ ಇಸ್ರೋ ವಿಜ್ಞಾನಿಗಳು ನಿಗದಿತ ಸಮಯಕ್ಕಿಂತಲೂ ಹೆಚ್ಚಿನ ಅವಧಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ, ಪ್ರತಿ ದಿನ ಸಂಜೆ ಐದು ಗಂಟೆಗೆ ಮಿಷನ್ ಮೇಲೆ ಕೆಲಸ ಮಾಡುತ್ತಿದ್ದ ವಿಜ್ಞಾನಿಗಳಿಗೆ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿಯನ್ನು ಉಚಿತವಾಗಿ ನೀಡುತ್ತಿದ್ದೆವು. ಇದರ ಪರಿಣಾಮ ಪ್ರತಿ ವಿಜ್ಞಾನಿಯೂ ಉಲ್ಲಾಸಿತಗೊಂಡು ಹೆಚ್ಚುವರಿ ಗಂಟೆಗಳನ್ನು ಯೋಜನೆ ಮೇಲೆ ಹೂಡೆಕೆ ಮಾಡಲು ಪ್ರೇರೇಪಿಸಿತು. ಇದು ಎಲ್ಲರಿಗೂ ಸಂತೋಷವನ್ನುಂಟು ಮಾಡುತ್ತಿತ್ತು ಎಂಬ ಮಿಷನ್ ಸೈಂಟಿಸ್ಟ್ ವೆಂಕಟೇಶ್ವರ ಶರ್ಮಾ ಅವರ ಹೇಳಿಕೆಯನ್ನು ಬರ್ಖಾ ದತ್ ಅವರು ಉಲ್ಲೇಖಿಸಿದ್ದಾರೆ.

ಕಷ್ಟದ ಸಮಯವಿತ್ತು ಮತ್ತು ಚಂದ್ರಯಾನ-3 ಎಂಬ ಅಸಾಧ್ಯವಾದ ಕೆಲಸವನ್ನ ಸಾಧ್ಯ ಮಾಡಬೇಕಿತ್ತು. ಈ ಹಂತದಲ್ಲಿ ಯಾವುದೇ ಆರ್ಥಿಕ ಪ್ರೋತ್ಸಾಹಗಳು ಇರಲಿಲ್ಲ. ಆಗ ನೆರವಿಗೆ ಬಂದಿದ್ದೇ ಮಸಾಲೆ ದೋಸೆ ಎಂಬ ಸಂಗತಿಯೇ ಕುತೂಹಲಕಾರಿಯಾಗಿದೆ.

ಚಂದಮಾಮನ ಅಂಗಳದಲ್ಲಿ ‘ರೋವರ್’ ಮಗುವಿನಾಟ! ಹುಷಾರ್, ಚಂದ್ರ ಕಂಪಿಸುತ್ತಿದೆ ಎಂದ ಲ್ಯಾಂಡರ್!

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ -3 (Chandrayaan 3) ಚಂದ್ರನ ದಕ್ಷಿಣ ಧ್ರುವದಲ್ಲಿ (South pole of Moon) ತನಗೆ ವಹಿಸಿರುವ ಕೆಲಸವನ್ನು ನಿರ್ವಹಿಸುತ್ತಿದೆ. ಲ್ಯಾಂಡರ್‌ (Vikram Lander) ಹಾಗೂ ಲ್ಯಾಂಡರ್‌ನಿಂದ ಹೊರ ಬಂದಿರುವ ರೋವರ್ (Pragyan Rover) ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು ಮುಂದುವರಿಸಿವೆ. ಲ್ಯಾಂಡರ್ ಚಂದ್ರನ ಕಂಪನವನ್ನು ಗ್ರಹಿಸಿದ್ದು, ನೈಸರ್ಗಿಕವಾಗಿದೆ ಎಂದು ಮಾಹಿತಿ ನೀಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಹೇಳಿದೆ.

ಈ ಸುದ್ದಿಯನ್ನೂ ಓದಿ: Chandrayaan 3: ಆನ್‌ಲೈನ್‌ ಮೂಲಕ ಚಂದ್ರನಲ್ಲಿ 1 ಎಕರೆ ಜಾಗ ಖರೀದಿಸಿದ ಜಮ್ಮು ವ್ಯಕ್ತಿ; ಬೆಲೆ ಎಷ್ಟು?

ಚಂದ್ರ ಕೂಡ ಕಂಪಿಸುತ್ತಿರುವುದು ಈಗಿನ ಮಾಹಿತಿಯಿಂದ ಗೊತ್ತಾಗಿದೆ. ಹಾಗಾಗಿ ಚಂದ್ರನಲ್ಲೂ ಬೃಹತ್ ಕಂಪನಗಳಾಗಬಹುದು. ಆದರೆ, ಈ ಕಂಪನಗಳ ಕರೆಕ್ಟ್ ಆಗಿರುವ ಸ್ವರೂಪದ ಬಗೆಗಿನ ತನಿಖೆ ಇನ್ನೂ ಮುಂದುವರಿದಿದೆ ಎಂದು ಇಸ್ರೋ ಹೇಳಿದೆ.

ಈ ಮಧ್ಯೆ, ಬೆಂಗಳೂರಿನ ಕಮಾಂಡ್ ಸೆಂಟರ್‌ನಿಂದಲೇ ಚಂದ್ರನ ಮೇಲ್ಮೈನಲ್ಲಿರುವ ಪ್ರಜ್ಞಾನ್ ರೋವರ್‌ ಅನ್ನು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುವಂತೆ ಮಾಡಿರುವ ವಿಡಿಯೋವೊಂದನ್ನು ಇಸ್ರೋ ಷೇರ್ ಮಾಡಿಕೊಂಡಿದೆ. ಚಂದ್ರನ ಮೇಲ್ಮೈಯಲ್ಲಿ ಕುಳಿಗಳು ಮತ್ತು ಬಂಡೆಗಳನ್ನು ತಪ್ಪಿಸುವ ಮಾರ್ಗದ ಹುಡುಕಾಟದಲ್ಲಿ ರೋವರ್ ಅನ್ನು ಓಡಾಡಿಸಲಾಗಿದೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಇಸ್ರೋ, ಚಂದಮಾಮನ ಅಂಗಳದಲ್ಲಿ ಮಗು ತಮಾಷೆಯಾಗಿ ಕುಣಿದಾಡುತ್ತಿರುವಂತೆ ಮತ್ತು ತಾಯಿ ಅದನ್ನು ಪ್ರೀತಿಯಿಂದ ನೋಡುತ್ತಿರುವಂತೆ ಭಾಸವಾಗುತ್ತಿದೆ… ಎಂದು ಬರೆದುಕೊಂಡಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version