Site icon Vistara News

Ayodhya Ram Mandir: ರಾಮ ಮಂದಿರ ಉದ್ಘಾಟನೆ ದಿನ ಹಿಂದೂ ಸರ್ಕಾರಿ ನೌಕರರಿಗೆ ರಜೆ ನೀಡಿದ ಮಾರಿಷಸ್!‌

ram mandir mauritus

ಹೊಸದಿಲ್ಲಿ: ಭಾರತದ ಬಹುಸಂಖ್ಯಾತರ ಭಾವನೆಗೆ ಸ್ಪಂದಿಸಿರುವ ಮಾರಿಷಸ್‌ ಸರ್ಕಾರ (Mauritius govt) ವಿಶಿಷ್ಟ ನಿರ್ಧಾರ ತೆಗೆದುಕೊಂಡಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭವ್ಯ ರಾಮಮಂದಿರ (Ayodhya Ram Mandir) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಹಿಂದೂ ಸರ್ಕಾರಿ ನೌಕರರಿಗೆ 2 ಗಂಟೆಗಳ ವಿಶೇಷ ರಜೆಯನ್ನು ಘೋಷಿಸಿದೆ.

ಅಯೋಧ್ಯೆಯಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಕ್ಕಾಗಿ ವಿದೇಶಿ ಸರ್ಕಾರವೊಂದು ತನ್ನ ಉದ್ಯೋಗಿಗಳಿಗೆ ಸಾರ್ವಜನಿಕ ರಜೆ ಘೋಷಿಸಿರುವುದು ಇದೇ ಮೊದಲು. ಮಾರಿಷಸ್‌ನಲ್ಲಿ ಹಿಂದೂ ಧರ್ಮದ ಅನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ರಾಮಮಂದಿರದ ನಿರ್ಮಾಣವು ಅವರಿಗೆ ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ.

ಮಾರಿಷಸ್ ಸನಾತನ ಧರ್ಮ ಮಂದಿರ ಒಕ್ಕೂಟವು ಜನವರಿ 22ರಂದು ಎರಡು ಗಂಟೆಗಳ ವಿರಾಮ ನೀಡುವಂತೆ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್ (Mauritius PM Pravind Kumar Jugnauth) ಅವರನ್ನು ವಿನಂತಿಸಿತ್ತು. ಇದು ಹಿಂದೂ ಉದ್ಯೋಗಿಗಳಿಗೆ ದೇವಾಲಯದ ಉದ್ಘಾಟನಾ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಲು ಮತ್ತು ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಎಂದು ಒಕ್ಕೂಟ ಹೇಳಿದೆ. ಈ ಮನವಿಯನ್ನು ಪುರಸ್ಕರಿಸಿದ ಪ್ರಧಾನಿ ಜುಗ್ನೌತ್ ಅವರು ಜನವರಿ 22ರಂದು ಎಲ್ಲಾ ಮಾರಿಷಸ್ ಸರ್ಕಾರಿ ನೌಕರರಿಗೆ ಎರಡು ಗಂಟೆಗಳ ರಜೆ ಘೋಷಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಾರಿಷಸ್‌ ಪ್ರಧಾನಿ ಪ್ರವಿಂದ ಕುಮಾರ್‌ ಜುಗ್ನೌತ್‌ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಹಾಗೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದರು. ಮಾರಿಷಸ್‌ ಹಾಗೂ ಭಾರತ ದಕ್ಷಿಣ ಏಷ್ಯಾದಲ್ಲಿ ಹೆಚ್ಚಿನ ವ್ಯಾಪಾರ- ವ್ಯವಹಾರಗಳ ಪಾಲುದಾರರಾಗಿವೆ.

ಇದನ್ನೂ ಓದಿ: Rama Mandir : ರಾಮ ಮಂದಿರ ಉದ್ಘಾಟನೆ ಬಹಿಷ್ಕಾರ ಸುದ್ದಿ ಸುಳ್ಳು; ಶೃಂಗೇರಿ ಮಠ ಸ್ಪಷ್ಟನೆ

Exit mobile version