ನವದೆಹಲಿ: ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ) ಚುನಾವಣೆಯನ್ನು ಆಮ್ ಆದ್ಮಿ ಪಾರ್ಟಿ(ಆಪ್) ಪ್ರಚಂಡ ಬಹುಮತದಿಂದ ಗೆಲ್ಲುವ ಸಾಧ್ಯತೆಗಳಿವೆ ಎಂದು ಎಕ್ಸಿಟ್ ಪೋಲ್‌ಗಳಿಂದ ಗೊತ್ತಾಗಿದೆ. ಒಟ್ಟು 250 ಸೀಟುಗಳ ಪೈಕಿ ಆಪ್ ಭರ್ಜರಿ 140ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಲಿದೆ. ಆಡಳಿತಾರೂಢ ಬಿಜೆಪಿ ಅಧಿಕಾರವನ್ನು ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ಡಿಸೆಂಬರ್ 7ರಂದು ಚುನಾವಣೆ ಫಲಿತಾಂಶವು ಪ್ರಕಟವಾಗಲಿದೆ(MCD Exit Poll).
ಇಂಡಿಯಾ ಟುಡೇ ಮತ್ತು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ 149 ಮತ್ತು 171 ಸ್ಥಾನಗಳ ನಡುವೆ ಗೆಲುವು ಸಾಧಿಸಲಿದೆ. ಇದೇ ವೇಳೆ, ಆಡಳಿತಾರೂಢ ಬಿಜೆಪಿಯು 69ರಿಂದ 91 ಸೀಟುಗಳನ್ನು ಗೆಲ್ಲಬಹುದು ಎಂಬ ಮಾಹಿತಿಯು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಈ ಹಿಂದೆ ಮೂರು ಇದ್ದ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ಈ ಬಾರಿ ಒಂದೇ ಮಾಡಲಾಗಿತ್ತು. ಅಲ್ಲದೇ ವಾರ್ಡ್‌ಗಳ ಸಂಖ್ಯೆಯನ್ನು 272ರಿಂದ 250ಕ್ಕೆ ಇಳಿಸಲಾಗಿದೆ.
ದಿಲ್ಲಿ ಎಂಸಿಡಿ ಎಲೆಕ್ಷನ್ ಎಕ್ಸಿಟ್ ಪೋಲ್
ಬಿಜೆಪಿ 84ರಿಂದ 94 ಸೀಟುಗಳನ್ನು ಗೆದ್ದರೆ, ಆಪ್ 146ರಿಂದ 156 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಲಿದೆ. ಇನ್ನು ಕಾಂಗ್ರೆಸ್ 6ರಿಂದ 10 ವಾರ್ಡ್‌ಗಳಲ್ಲಿ ಗೆಲುವಿನ ನಗೆ ಬರೀಲಿದೆ. ಉಳಿದ ನಾಲ್ಕು ಸ್ಥಾನಗಳನ್ನು ಇತರರು ಗೆಲ್ಲಬಹುದು ಎಂದು ಎಕ್ಸಿಟ್ ಪೋಲ್‌ಗಳಲ್ಲಿ ಗೊತ್ತಾಗಿದೆ.
ಇದನ್ನೂ ಓದಿ | Exit Poll 2022 | ಎಲ್ಲ ಸಮೀಕ್ಷೆಯಲ್ಲೂ ಕಾಂಗ್ರೆಸ್ ‘ಎಕ್ಸಿಟ್’ ಬಿಜೆಪಿಗೆ ಗೆಲುವಿನ ಸ್ವೀಟ್!