Site icon Vistara News

MDH, Everest Spices: ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳಲ್ಲಿ ಮಾರಕ ರಾಸಾಯನಿಕ ಇಲ್ಲ; FSSAI ವರದಿಯಲ್ಲಿ ಬಯಲು

MDH, Everest Spices

MDH, Everest Spices

ನವದೆಹಲಿ: ಕ್ಯಾನ್ಸರ್‌(Cancer)ಕಾರಕ ರಾಸಾಯನಿಕ ಹೊಂದಿದೆ ಎಂದು ಹಾಂಗ್‌ಕಾಂಗ್‌, ನೇಪಾಳ ಮತ್ತು ಸಿಂಗಾಪುರದಲ್ಲಿ ನಿಷೇಧಿಸ್ಪಟ್ಟಿರುವ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (FSSAI) ಕ್ಲೀನ್‌ಚಿಟ್‌ ನೀಡಿದೆ. ಈ ಎರಡು ಮಸಾಲೆ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಪತ್ತೆ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಸುಮಾರು 34ಮಾದರಿಗಳನ್ನು ದೇಶಾದ್ಯಂತ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಇದರ ಪೈಕಿ 28 ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಎಥೆಲೈನ್‌ ಆಕ್ಸೈಡ್‌ ಇರುವುದು ಪತ್ತೆಯಾಗಿಲ್ಲ ಎಂದು ವರದಿ ನೀಡಿದೆ.

ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

ಇನ್ನು ಅಪಾಯಕಾರಿ ರಾಸಾಯನಿಕಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.

ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳನ್ನು ಸಿಂಗಾಪುರ, ಹಾಂಕಾಂಗ್‌ ಮತ್ತು ಜಪಾನ್‌ನಲ್ಲಿ ಬ್ಯಾನ್‌ ಮಾಡಲಾಗಿತ್ತು.  ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಸಿಂಗಾಪುರ ಹೇಳಿತ್ತು. ಅದಾದ ಬಳಿಕ ಹಾಂಕಾಂಗ್‌ನಲ್ಲೂ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ  ಅಮೆರಿಕವೂ ಕ್ರಮಕ್ಕೆ ಮುಂದಾಗಿತ್ತು. ಅಮೆರಿಕದ ಫುಡ್ ಆ್ಯಂಡ್‌ ಡ್ರಗ್ ಅಡ್ಮಿನಿಸ್ಟ್ರೇಷನ್ (Food and Drug Administration) ಎಂಡಿಎಚ್ ಮತ್ತು ಎವರೆಸ್ಟ್‌ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಹಾಗಾಗಿ ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ.

ಇದನ್ನೂ ಓದಿ:Bangladesh MP Missing: ಕೋಲ್ಕತ್ತಾಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಮಿಸ್ಸಿಂಗ್‌

ವಿವಾದದ ಬಳಿಕ ಎವರೆಸ್ಟ್ ಸಂಸ್ಥೆ ಪ್ರತಿಕ್ರಿಯಿಸಿ, ʼʼತನ್ನ ಮಸಾಲೆಗಳು ಸೇವನೆಗೆ ಸುರಕ್ಷಿತʼʼ ಎಂದು ಹೇಳಿತ್ತು. ಆದರೆ ಎಂಡಿಎಚ್ ಇದುವರೆಗೆ ತನ್ನ ಉತ್ಪನ್ನಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕಂಪನಿಗಳ ಉತ್ಪನ್ನಗಳನ್ನು ಅಮೆರಿಕ, ಯುರೋಪ್‌, ಇಂಗ್ಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

Exit mobile version