MDH, Everest Spices: ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳಲ್ಲಿ ಮಾರಕ ರಾಸಾಯನಿಕ ಇಲ್ಲ; FSSAI ವರದಿಯಲ್ಲಿ ಬಯಲು - Vistara News

ದೇಶ

MDH, Everest Spices: ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳಲ್ಲಿ ಮಾರಕ ರಾಸಾಯನಿಕ ಇಲ್ಲ; FSSAI ವರದಿಯಲ್ಲಿ ಬಯಲು

MDH, Everest Spices: ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

VISTARANEWS.COM


on

MDH, Everest Spices
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕ್ಯಾನ್ಸರ್‌(Cancer)ಕಾರಕ ರಾಸಾಯನಿಕ ಹೊಂದಿದೆ ಎಂದು ಹಾಂಗ್‌ಕಾಂಗ್‌, ನೇಪಾಳ ಮತ್ತು ಸಿಂಗಾಪುರದಲ್ಲಿ ನಿಷೇಧಿಸ್ಪಟ್ಟಿರುವ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (FSSAI) ಕ್ಲೀನ್‌ಚಿಟ್‌ ನೀಡಿದೆ. ಈ ಎರಡು ಮಸಾಲೆ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಪತ್ತೆ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಸುಮಾರು 34ಮಾದರಿಗಳನ್ನು ದೇಶಾದ್ಯಂತ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಇದರ ಪೈಕಿ 28 ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಎಥೆಲೈನ್‌ ಆಕ್ಸೈಡ್‌ ಇರುವುದು ಪತ್ತೆಯಾಗಿಲ್ಲ ಎಂದು ವರದಿ ನೀಡಿದೆ.

ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

ಇನ್ನು ಅಪಾಯಕಾರಿ ರಾಸಾಯನಿಕಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.

ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳನ್ನು ಸಿಂಗಾಪುರ, ಹಾಂಕಾಂಗ್‌ ಮತ್ತು ಜಪಾನ್‌ನಲ್ಲಿ ಬ್ಯಾನ್‌ ಮಾಡಲಾಗಿತ್ತು.  ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಸಿಂಗಾಪುರ ಹೇಳಿತ್ತು. ಅದಾದ ಬಳಿಕ ಹಾಂಕಾಂಗ್‌ನಲ್ಲೂ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ  ಅಮೆರಿಕವೂ ಕ್ರಮಕ್ಕೆ ಮುಂದಾಗಿತ್ತು. ಅಮೆರಿಕದ ಫುಡ್ ಆ್ಯಂಡ್‌ ಡ್ರಗ್ ಅಡ್ಮಿನಿಸ್ಟ್ರೇಷನ್ (Food and Drug Administration) ಎಂಡಿಎಚ್ ಮತ್ತು ಎವರೆಸ್ಟ್‌ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಹಾಗಾಗಿ ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ.

ಇದನ್ನೂ ಓದಿ:Bangladesh MP Missing: ಕೋಲ್ಕತ್ತಾಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಮಿಸ್ಸಿಂಗ್‌

ವಿವಾದದ ಬಳಿಕ ಎವರೆಸ್ಟ್ ಸಂಸ್ಥೆ ಪ್ರತಿಕ್ರಿಯಿಸಿ, ʼʼತನ್ನ ಮಸಾಲೆಗಳು ಸೇವನೆಗೆ ಸುರಕ್ಷಿತʼʼ ಎಂದು ಹೇಳಿತ್ತು. ಆದರೆ ಎಂಡಿಎಚ್ ಇದುವರೆಗೆ ತನ್ನ ಉತ್ಪನ್ನಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕಂಪನಿಗಳ ಉತ್ಪನ್ನಗಳನ್ನು ಅಮೆರಿಕ, ಯುರೋಪ್‌, ಇಂಗ್ಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Ram Path: ಅಯೋಧ್ಯೆ ರಾಮ ಪಥ ಕಾಮಗಾರಿಯಲ್ಲಿ ನಿರ್ಲಕ್ಷ್ಯ; 6 ಅಧಿಕಾರಿಗಳ ತಲೆದಂಡ

Ram Path: ಜೂನ್ 23 ಮತ್ತು ಜೂನ್ 25ರಂದು ಸುರಿದ ಮಳೆಯಿಂದಾಗಿ ಅಯೋಧ್ಯೆಯ 14 ಕಿ.ಮೀ. ಉದ್ದದ ರಾಮ ಪಥ ಹಾನಿಗೊಳಗಾಗಿದೆ. ಅಲ್ಲದೆ ಒಳಚರಂಡಿ ನಿರ್ಮಾಣ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ಲೋಕೋಪಯೋಗಿ ಇಲಾಖೆ ಮತ್ತು ಉತ್ತರ ಪ್ರದೇಶ ಜಲ ನಿಗಮದ 6 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

VISTARANEWS.COM


on

Ram Path
Koo

ಅಯೋಧ್ಯೆ: ಜೂನ್ 23 ಮತ್ತು ಜೂನ್ 25ರಂದು ಸುರಿದ ಮಳೆಯಿಂದಾಗಿ ಅಯೋಧ್ಯೆ (Ayodhya)ಯ 14 ಕಿ.ಮೀ. ಉದ್ದದ ರಾಮ ಪಥ (Ram Path) ಹಾನಿಗೊಳಗಾಗಿದೆ. ಅಲ್ಲದೆ ಒಳಚರಂಡಿ ನಿರ್ಮಾಣ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ಲೋಕೋಪಯೋಗಿ ಇಲಾಖೆ (PWD) ಮತ್ತು ಉತ್ತರ ಪ್ರದೇಶ ಜಲ ನಿಗಮದ 6 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ರಾಮಪಥದ ಉದ್ದಕ್ಕೂ ಇರುವ ಸುಮಾರು 15 ಉಪ ಮಾರ್ಗಗಳು ಮತ್ತು ಬೀದಿಗಳು ಮಳೆಯ ನಂತರ ತೀವ್ರವಾಗಿ ಜಲಾವೃತಗೊಂಡಿದ್ದವು. ಇದಲ್ಲದೆ ಸಮೀಪದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಸಂಕಷ್ಟ ಎದುರಾಗಿತ್ತು. ಹೀಗಾಗಿ ಇದು ಕಾಮಗಾರಿಯಲ್ಲಿನ ನಿರ್ಲಕ್ಷ್ಯ ಎಂದು ಉಲ್ಲೇಖಿಸಿ ಅಹಮದಾಬಾದ್ ಮೂಲದ ಗುತ್ತಿಗೆದಾರ ಸಂಸ್ಥೆ ಭುವನ್ ಇನ್ಫ್ರಾಕಾಮ್ ಪ್ರೈವೇಟ್ ಲಿಮಿಟೆಟ್‌ಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಧ್ರುವ್ ಅಗರ್ವಾಲ್ ಮತ್ತು ಸಹಾಯಕ ಎಂಜಿನಿಯರ್ ಅನುಜ್ ದೇಶ್ವಾಲ್ ಅವರನ್ನು ಅಮಾನತುಗೊಳಿಸಿ ವಿಶೇಷ ಕಾರ್ಯದರ್ಶಿ ವಿನೋದ್ ಕುಮಾರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಜತೆಗೆ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ (ಅಭಿವೃದ್ಧಿ) ವಿ.ಕೆ.ಶ್ರೀವಾಸ್ತವ್ ಅವರು ಕಿರಿಯ ಎಂಜಿನಿಯರ್ ಪ್ರಭಾತ್ ಕುಮಾರ್ ಪಾಂಡೆ ಅವರನ್ನು ಅಮಾನತುಗೊಳಿಸಿದ್ದಾರೆ.

ಇನ್ನು ಉತ್ತರ ಪ್ರದೇಶ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಮಿಶ್ರಾ ಅವರು ಕಾರ್ಯನಿರ್ವಾಹಕ ಎಂಜಿನಿಯರ್ ಆನಂದ್ ಕುಮಾರ್ ದುಬೆ, ಸಹಾಯಕ ಎಂಜಿನಿಯರ್ ರಾಜೇಂದ್ರ ಕುಮಾರ್ ಯಾದವ್ ಮತ್ತು ಕಿರಿಯ ಎಂಜಿನಿಯರ್ ಮೊಹಮ್ಮದ್ ಶಾಹಿದ್ ಅವರನ್ನು ಅಮಾನತು ಮಾಡಿದ್ದಾರೆ.

ಅಧಿಕಾರಿಗಳು ಹೇಳಿದ್ದೇನು?

“ರಾಮ ಪಥವನ್ನು ನಿರ್ಮಿಸಿದ ಕೆಲವೇ ದಿನಗಳಲ್ಲಿ ಅದರ ಮೇಲಿನ ಪದರಕ್ಕೆ ಹಾನಿಯಾಗಿದೆ. ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಕೈಗೊಂಡಿದ್ದ ಈ ಕಾಮಗಾರಿಯಲ್ಲಿನ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ಇದರಿಂದ ಸಾರ್ವಜನಿಕರ ಮುಂದೆ ರಾಜ್ಯ ಸರ್ಕಾರದ ಘನತೆಗೆ ಹಾನಿಯಾಗಿದ್ದು, ಈ ನಿಟ್ಟನಲ್ಲಿ ಕ್ರಮ ಕೈಗೊಳ್ಳಲಾಗಿದೆ” ಎಂದು ಲೋಕೋಪಯೋಗಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

“ಇದನ್ನು ಗಂಭೀರ ಅಕ್ರಮವೆಂದು ಪರಿಗಣಿಸಿ, ಉತ್ತರ ಪ್ರದೇಶ ಸರ್ಕಾರಿ ನೌಕರರ (ಶಿಸ್ತು ಮತ್ತು ಮೇಲ್ಮನವಿ) 1999ರ ನಿಯಮ 7ರ ಅಡಿಯಲ್ಲಿ ನಿರ್ಮಾಣ್ ಖಾಂಡ್ -3 ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಧ್ರುವ್ ಅಗರ್ವಾಲ್ ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ಕಚೇರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಿಡಬ್ಲ್ಯುಡಿ ಪ್ರಧಾನ ಕಾರ್ಯದರ್ಶಿ ಅಜಯ್ ಚೌಹಾಣ್ ತಿಳಿಸಿದ್ದಾರೆ. ಹಾನಿಗೊಳಗಾದ ರಾಮ ಪಥದ ಚಿತ್ರಗಳು ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ವೈರಲ್‌ ಆಗಿತ್ತು.

ಇದನ್ನೂ ಓದಿ: Ayodhya Ram Mandir: ಅಯೋಧ್ಯೆ ರಾಮಲಲ್ಲಾನ ಸ್ನಾನವನ್ನೇ ಮರೆತ ಎಂಜಿನಿಯರ್‌ಗಳು! ಗರ್ಭಗುಡಿಯಲ್ಲೀಗ ದೊಡ್ಡ ಸಮಸ್ಯೆ!

ಈ ಮಧ್ಯೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅರ್ಚಕರಿಗೆ ತಲೆನೋವಾಗಿ ಪರಿಣಮಿಸಿದೆ. ಸಂಗ್ರಹವಾದ ನೀರು ಹೊರಹರಿಯುವ ಒಳಚರಂಡಿ ವ್ಯವಸ್ಥೆಯಲ್ಲಿ ದೋಷಗಳು ಕಾಣಿಸಿಕೊಂಡು ಸುದ್ದಿ ಇತ್ತೀಚೆಗೆ ಭಾರೀ ಚರ್ಚೆಗೆ ಕಾರಣವಾಗಿದೆ.

Continue Reading

ದೇಶ

Mohan Bhagwat: ಮುಕೇಶ್‌ ಅಂಬಾನಿ ನಿವಾಸಕ್ಕೆ ಆಗಮಿಸಿದ ಮೋಹನ್‌ ಭಾಗವತ್‌; ಕೈ ಮುಗಿದು ಸ್ವಾಗತಿಸಿದ ನೀತಾ ಅಂಬಾನಿ

Mohan Bhagwat: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ತಮ್ಮ ನಿವಾಸ ಆಂಟಿಲಿಯಾ ದಲ್ಲಿ ಶುಕ್ರವಾರ ಆಯೋಜಿಸಿದ್ದ ಆತಿಥ್ಯವನ್ನು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ವೀಕರಿಸಿದರು. ಮೋಹನ್‌ ಭಾಗವತ್‌ ಅವರನ್ನು ಖುದ್ದು ಮುಕೇಶ್ ಅಂಬಾನಿ, ನೀತಾ ಅಂಬಾನಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸ್ವಾಗತಿಸಿದರು.

VISTARANEWS.COM


on

Mohan Bhagwat
Koo

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರು ತಮ್ಮ ನಿವಾಸ ಆಂಟಿಲಿಯಾ (Antilia)ದಲ್ಲಿ ಶುಕ್ರವಾರ ಆಯೋಜಿಸಿದ್ದ ಆತಿಥ್ಯವನ್ನು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಸ್ವೀಕರಿಸಿದರು. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ (Nita Ambani) ದಂಪತಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹ ಜುಲೈಯಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಆಗಮಿಸಿದ ಮೋಹನ್‌ ಭಾಗವತ್‌ ಅವರನ್ನು ಖುದ್ದು ಮುಕೇಶ್ ಅಂಬಾನಿ, ನೀತಾ ಅಂಬಾನಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸ್ವಾಗತಿಸಿದರು.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಜುಲೈ 12ರಂದ್ ಅದ್ಧೂರಿಯಾಗಿ ನೆರವೇರಲಿದ್ದು, ಗಣ್ಯರನ್ನು ಆಮಂತ್ರಿಸಲಾಗುತ್ತಿದೆ. ಮೋಹನ್‌ ಭಾಗವತ್‌ ಭೇಟಿ ವೇಳೆ ರಾಧಿಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರೆ, ಅನಂತ್‌ ಕುರ್ತಾ ಮತ್ತು ಜಾಕೆಟ್‌ ಧರಿಸಿ ಮಿಂಚಿದರು. ನೀತಾ ಅವರು ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡರೆ ಮುಕೇಶ್ ಅಂಬಾನಿ ಸರಳವಾಗಿ ಪ್ಯಾಂಟ್‌-ಷರ್ಟ್‌ ಧರಿಸಿದ್ದರು. ನೀತಾ ಅಂಬಾನಿ ಕೈ ಮುಗಿದು ಮೋಹನ್‌ ಭಾಗವತ್‌ ಅವರನ್ನು ಸ್ವಾಗತಿಸಿದರು.

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರಿಗೆ ಅಂಬಾನಿ ಕುಟುಂಬ ಸದಸ್ಯರು ಆಮಂತ್ರಣ ಪತ್ರಿಕೆ ನೀಡಿದ್ದರು. ಜತೆಗೆ ಸೋಮವಾರ ಬಾಲಿವುಡ್‌ ಸ್ಟಾರ್‌ ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಮನೆಗೆ ತೆರಳಿದ್ದರು.

ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ

ನೀತಾ ಅಂಬಾನಿ ಅವರು ಸೋಮವಾರ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಿ ದೇವರಿಗೆ ಮದುವೆಯ ಆಮಂತ್ರಣ ನೀಡಿದ್ದರು. ದೇವರ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼʼನಾನು ಈಗಷ್ಟೇ ಬಾಬಾ ಭೋಲೆನಾಥ್ ಅವರ ದರ್ಶನ ಪಡೆದಿದ್ದೇನೆ. ಹಿಂದೂ ಸಂಪ್ರದಾಯದ ಪ್ರಕಾರ ನಾವು ಮೊದಲು ಭಗವಂತನ ಆಶೀರ್ವಾದವನ್ನು ಪಡೆಯುತ್ತೇವೆ. ನಾನು ಬಾಬಾಗೆ ಮದುವೆಯ ಆಮಂತ್ರಣವನ್ನು ನೀಡಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ. 10 ವರ್ಷಗಳ ಅನಂತರ ಇಲ್ಲಿಗೆ ಬಂದಿದ್ದೇನೆ. ಅಭಿವೃದ್ಧಿ ಮತ್ತು ಕಾಶಿ ವಿಶ್ವನಾಥ ಕಾರಿಡಾರ್, ನಮೋ ಘಾಟ್, ಸೌರಶಕ್ತಿ ಸ್ಥಾವರಗಳು ಮತ್ತು ಸ್ವಚ್ಛತೆಯನ್ನು ನೋಡಲು ನನಗೆ ಸಂತೋಷವಾಗಿದೆʼʼ ಎಂದು ಹೇಳಿದ್ದರು.

ʼʼ10 ವರ್ಷಗಳ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನದ ದರ್ಶನಕ್ಕೆ ಬಂದಿದ್ದೆ. ಇಲ್ಲಿನ ಕುಶಲಕರ್ಮಿಗಳೊಂದಿಗೆ ನನಗೆ ವಿಶೇಷ ಬಾಂಧವ್ಯವಿದೆ. ನಾನು ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ರಿಲಯನ್ಸ್ ಫೌಂಡೇಶನ್ ಮತ್ತು ಸ್ವದೇಶ್ ಮಾಧ್ಯಮದ ಮೂಲಕ ನಾವು ಅವರಿಗೆ ಜಾಗತಿಕ ಮನ್ನಣೆ ಮತ್ತು ಗೌರವವನ್ನು ನೀಡಲು ಬಯಸುತ್ತೇವೆʼʼ ಎಂದು ತಿಳಿಸಿದ್ದರು.

ಜುಲೈ 12ರಂದು ಮದುವೆ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್‌ ಆಗಿ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

Continue Reading

ವಾಣಿಜ್ಯ

Isha Ambani: ತಾನು ಅವಳಿ ಮಕ್ಕಳಿಗೆ ತಾಯಿಯಾಗಿದ್ದು ಐವಿಎಫ್ ಮೂಲಕ ಎಂದ ಇಶಾ ಅಂಬಾನಿ

ಜಗತ್ತಿನಲ್ಲಿ ಇಂದು ಸಾಕಷ್ಟು ಆಧುನಿಕ ತಂತ್ರಜ್ಞಾನವಿದೆ. ಮಕ್ಕಳನ್ನು ಪಡೆಯಲು ನಾವು ಏಕೆ ಇದನ್ನು ಬಳಸಬಾರದು ಎಂದು ಪ್ರಶ್ನಿಸಿರುವ ಉದ್ಯಮಿ ಇಶಾ ಅಂಬಾನಿ (Isha Ambani) ಅವರು, ಇದು ಉತ್ಸುಕರಾಗಿರುವ ವಿಷಯವಾಗಿರಬೇಕು. ಮರೆ ಮಾಚಬೇಕಾದ ಸಂಗತಿಯಲ್ಲ. ಈ ಬಗ್ಗೆ ಮಹಿಳೆಯರು ಮಾತನಾಡಲು ಮುಕ್ತವಾದರೆ ಪ್ರಕ್ರಿಯೆಯು ಹೆಚ್ಚು ಸುಲಭವಾಗಬಹುದು ಎಂದು ಅವರು ತಿಳಿಸಿದ್ದಾರೆ.

VISTARANEWS.COM


on

By

Isha Ambani
Koo

ಭಾರತೀಯ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ (Mukesh ambani) ಅವರ ಪುತ್ರಿ ಇಶಾ ಅಂಬಾನಿ (Isha Ambani) ಮಕ್ಕಳನ್ನು ಪಡೆಯಲು ಐವಿಎಫ್ (IVF) ಮೊರೆ ಹೋಗಿದ್ದಾಗಿ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ತನ್ನನ್ನು ಮತ್ತು ಸಹೋದರ ಆಕಾಶ್ ಅಂಬಾನಿ (akash ambani) ನನ್ನು ಪಡೆಯಲು ತಾಯಿ ನೀತಾ ಅಂಬಾನಿ (nita ambani) ಕೂಡ ಐವಿಎಫ್ ಮೊರೆ ಹೋಗಿದ್ದರು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

32 ವರ್ಷದ ಅವರು ತಮ್ಮ ಮಾತೃತ್ವದ ಪ್ರಯಾಣದ ಬಗ್ಗೆ ಮಾತನಾಡಿದ್ದು, ಐವಿಎಫ್ ವಿಷಯದ ಸುತ್ತಲಿನ ನಿಷೇಧವನ್ನು ಹೋಗಲಾಡಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು.

ನೀತಾ ಅಂಬಾನಿ ಈ ಹಿಂದೆ ಐವಿಎಫ್ ಸಹಾಯದಿಂದ ಗರ್ಭಧರಿಸುವ ಬಗ್ಗೆ ಮಾತನಾಡಿದ್ದರು. ವೈದ್ಯರು ತನಗೆ ಎಂದಿಗೂ ಮಕ್ಕಳಾಗುವುದಿಲ್ಲ ಎಂದು ಹೇಳಿದಾಗ ಆಘಾತವಾಗಿತ್ತು. ಆಗ ನನಗೆ ಕೇವಲ 23 ವರ್ಷ. ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಡಾ. ಫಿರೂಜಾ ಪಾರಿಖ್ ಅವರ ಸಹಾಯದಿಂದ ನಾನು ಮೊದಲು ನನ್ನ ಅವಳಿ ಮಕ್ಕಳನ್ನು ಗರ್ಭದಲ್ಲಿ ಧರಿಸಿದೆ ಎಂದು ಅವರು ಅವರು ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದೀಗ ತಾಯಿ ನೀತಾ ಅಂಬಾನಿಯಂತೆ ಇಶಾ ಕೂಡ ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ನಾನು ತಾಯಿಯಾಗಿದ್ದೇನೆ ಎಂದು ಬಹಳ ಬೇಗ ಹೇಳುತ್ತಿದ್ದೇನೆ. ಈ ಬಗ್ಗೆ ನಾವು ಸಾಮಾನ್ಯವಾಗಿರಬೇಕು. ಇದರ ಬಗ್ಗೆ ನಾಚಿಕೆ ಪಡಬಾರದು. ಇಂತವರನ್ನು ಯಾರೂ ಪ್ರತ್ಯೇಕ ಮಾಡಬಾರದು. ಇದು ಅತ್ಯಂತ ಕಷ್ಟಕರ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ದಣಿವಾಗುತ್ತದೆ ಎಂದು ಹೇಳಿದರು.

ಇಂದು ಜಗತ್ತಿನಲ್ಲಿ ಸಾಕಷ್ಟು ಆಧುನಿಕ ತಂತ್ರಜ್ಞಾನವಿದೆ. ಮಕ್ಕಳನ್ನು ಪಡೆಯಲು ನಾವು ಏಕೆ ಇದನ್ನು ಬಳಸಬಾರದು ಎಂದು ಪ್ರಶ್ನಿಸಿದ ಅವರು, ಇದು ಉತ್ಸುಕರಾಗಿರುವ ವಿಷಯವಾಗಿರಬೇಕು. ಮರೆ ಮಾಚಬೇಕಾದ ಸಂಗತಿಯಲ್ಲ. ಈ ಬಗ್ಗೆ ಮಹಿಳೆಯರು ಮಾತನಾಡಲು ಮುಕ್ತವಾದರೆ ಪ್ರಕ್ರಿಯೆಯು ಹೆಚ್ಚು ಸುಲಭವಾಗಬಹುದು ಎಂದು ಅವರು ತಿಳಿಸಿದ್ದಾರೆ.

ಇಶಾ ಅವರು ಆನಂದ್ ಪಿರಾಮಲ್ ಅವರನ್ನು ವಿವಾಹವಾಗಿದ್ದು, ಒಬ್ಬ ಮಗಳು ಮತ್ತು ಮಗನೊಂದಿಗೆ ಅವಳಿ ಮಕ್ಕಳನ್ನು ಹೊಂದಿದ್ದಾರೆ. 2018ರ ಡಿಸೆಂಬರ್ 12 ರಂದು ದಂಪತಿ ಮುಂಬಯಿ ನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು.

ಐವಿಎಫ್ ಎಂದರೇನು?

ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಮಕ್ಕಳನ್ನು ಪಡೆಯಲು ಒಂದು ವೈದ್ಯಕೀಯ ವಿಧಾನವಾಗಿದೆ. ಪ್ರಯೋಗಾಲಯದಲ್ಲಿ ವೀರ್ಯದಿಂದ ಮೊಟ್ಟೆಯನ್ನು ಫಲವತ್ತಾಗಿಸಲಾಗುತ್ತದೆ. ಇದು ಫಲವತ್ತತೆ ಸಮಸ್ಯೆಗಳಿರುವ ವ್ಯಕ್ತಿಗಳು ಅಥವಾ ದಂಪತಿಗೆ ಸಹಾಯ ಮಾಡಲು ಬಳಸುವ ಸಾಮಾನ್ಯ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನವಾಗಿದೆ.

ಈ ಪ್ರಕ್ರಿಯೆಯು ಬಹು ಮೊಟ್ಟೆಗಳನ್ನು ಉತ್ಪಾದಿಸಲು ಮಹಿಳೆಯ ಅಂಡಾಶಯವನ್ನು ಉತ್ತೇಜಿಸುತ್ತದೆ. ಮೊಟ್ಟೆಗಳನ್ನು ಪಡೆದು ನಿಯಂತ್ರಿತ ವಾತಾವರಣದಲ್ಲಿ ವೀರ್ಯದೊಂದಿಗೆ ಫಲವತ್ತಾಗಿಸುತ್ತದೆ ಮತ್ತು ಅನಂತರ ಭ್ರೂಣಗಳನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ: Elon Musk: ಕೆಲವೇ ವರ್ಷಗಳಲ್ಲಿ ಮೊಬೈಲ್‌ ಫೋನೇ ಇರುವುದಿಲ್ಲ; ಬರಲಿದೆ ಹೊಸ ತಂತ್ರಜ್ಞಾನ!

ನಿರ್ಬಂಧಿಸಲಾದ ಫಾಲೋಪಿಯನ್ ಟ್ಯೂಬ್‌ಗಳು, ಪುರುಷ ಬಂಜೆತನ, ಅಂಡೋತ್ಪತ್ತಿ ಅಸ್ವಸ್ಥತೆಗಳು ಅಥವಾ ವಿವರಿಸಲಾಗದ ಬಂಜೆತನ ಸೇರಿದಂತೆ ವಿವಿಧ ಕಾರಣಗಳಿಗಾಗಿ ಐವಿಎಫ್ ಅನ್ನು ಬಳಸಬಹುದು ಮತ್ತು ಅನೇಕರು ಗರ್ಭಧಾರಣೆ ಮತ್ತು ಪಿತೃತ್ವವನ್ನು ಸಾಧಿಸಲು ಇದು ಸಹಾಯ ಮಾಡಿದೆ.

ಇಶಾ ಅಂಬಾನಿ ಅವರ ಕಿರಿಯ ಸಹೋದರ ಅನಂತ್ ಅಂಬಾನಿ ಜುಲೈ 12ರಂದು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಈ ಕಾರಣದಿಂದ ಇಶಾ ಮತ್ತು ಅವರ ಕುಟುಂಬ ವರ್ಷವಿಡೀ ಸುದ್ದಿಯಲ್ಲಿದೆ.

Continue Reading

ದೇಶ

Road Accident: ಭೀಕರ ರಸ್ತೆ ಅಪಘಾತ; 2 ಕಾರು ಮುಖಾಮುಖಿ ಡಿಕ್ಕಿಯಾಗಿ 6 ಮಂದಿ ಸಾವು

Road Accident: ಶುಕ್ರವಾರ ರಾತ್ರಿ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ ವೇಯ ಕಡ್ವಾಂಚಿ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟು, 4 ಮಂದಿ ಗಾಯಗೊಂಡಿದ್ದಾರೆ. ಮುಂಬೈಯಿಂದ ಸುಮಾರು 400 ಕಿ.ಮೀ. ದೂರದಲ್ಲಿ, ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಈ ಅವಘಢ ಸಂಭವಿಸಿದೆ. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಇಂಧನ ತುಂಬಿಸಿಕೊಂಡ ಬಂದ ಸ್ವಿಫ್ಟ್ ಡಿಜೈರ್ ಕಾರು ರಾಂಗ್ ಸೈಡ್‌ನಿಂದ ಹೆದ್ದಾರಿಗೆ ಪ್ರವೇಶಿಸಿ ನಾಗ್ಪುರದಿಂದ ಮುಂಬೈಗೆ ಹೋಗುತ್ತಿದ್ದ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದಿದೆ.

VISTARANEWS.COM


on

Road Accident
Koo

ಮುಂಬೈ: ಶುಕ್ರವಾರ ರಾತ್ರಿ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ ವೇ (Mumbai-Nagpur Expressway or Samruddhi Mahamarg)ಯ ಕಡ್ವಾಂಚಿ (Kadwanchi) ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟು, 4 ಮಂದಿ ಗಾಯಗೊಂಡಿದ್ದಾರೆ. ಮುಂಬೈಯಿಂದ ಸುಮಾರು 400 ಕಿ.ಮೀ. ದೂರದಲ್ಲಿ, ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಈ ಅವಘಢ ಸಂಭವಿಸಿದೆ (Road Accident).

ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಇಂಧನ ತುಂಬಿಸಿಕೊಂಡ ಬಂದ ಸ್ವಿಫ್ಟ್ ಡಿಜೈರ್ ಕಾರು ರಾಂಗ್ ಸೈಡ್‌ನಿಂದ ಹೆದ್ದಾರಿಗೆ ಪ್ರವೇಶಿಸಿ ನಾಗ್ಪುರದಿಂದ ಮುಂಬೈಗೆ ಹೋಗುತ್ತಿದ್ದ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸ ಎಷ್ಟು ತೀವ್ರವಾಗಿತ್ತೆಂದರೆ ಎರ್ಟಿಗಾ ಕಾರು ಮತ್ತು ಅದರಲ್ಲಿದ್ದ ಪ್ರಯಾಣಿಕರು ಗಾಳಿಯಲ್ಲಿ ಹಾರಿ ರಸ್ತೆಗೆ ಎಸೆಯಲ್ಪಟ್ಟರೆ ಸ್ವಿಫ್ಟ್ ಡಿಜೈರ್ ಗುರುತೇ ಸಿಗದಂತೆ ನಜ್ಜುಗುಜ್ಜಾಗಿದೆ.

ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಸಮೃದ್ಧಿ ಹೆದ್ದಾರಿ ಪೊಲೀಸರು ಮತ್ತು ಜಲ್ನಾ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರೇನ್‌ ಸಹಾಯದಿಂದ ಕಾರನ್ನು ಹಿಂತೆಗೆದಿದ್ದಾರೆ.

ಸಮೃದ್ಧಿ ಮಹಾಮಾರ್ಗ ಎಂದೂ ಕರೆಯಲ್ಪಡುವ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ ವೇ ಆರು ಪಥ ಮತ್ತು 701 ಕಿ.ಮೀ ಉದ್ದ ಹೊಂದಿದ್ದು, ಅತೀ ಹೆಚ್ಚು ವಾಹನ ಸಂಚರಿಸುವ ಹೆದ್ದಾರಿಗಳಲ್ಲಿ ಒಂದು ಎನಿಸಿಕೊಂಡಿದೆ. ಜತೆಗೆ ಇದು ಮುಂಬೈ ಮತ್ತು ರಾಜ್ಯದ ಮೂರನೇ ಅತಿದೊಡ್ಡ ನಗರ ನಾಗ್ಪುರವನ್ನು ಸಂಪರ್ಕಿಸುವ ದೇಶದ ಅತಿ ಉದ್ದದ ಗ್ರೀನ್ ಫೀಲ್ಡ್ ರಸ್ತೆ ಯೋಜನೆಗಳಲ್ಲಿ ಒಂದಾಗಿದೆ.

ಹಾವೇರಿಯಲ್ಲಿ ಭಯಾನಕ ಅಪಘಾತ: ಲಾರಿಗೆ ಟಿಟಿ ಡಿಕ್ಕಿ, 13 ಜನರ ಸಾವು

ಹಾವೇರಿ: ಹಾವೇರಿಯ ಬ್ಯಾಡಗಿಯಲ್ಲಿ (Haveri Accident) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident), ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದ ಪರಿಣಾಮ 13 ಜನರು ಮೃತಪಟ್ಟಿದ್ದಾರೆ. ಈ ದುರಂತ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ನಿಂತಿದ್ದ ಲಾರಿಗೆ ಗುದ್ದಿದ ಪರಿಣಾಮ ಟಿಟಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ. ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹೊರ ತೆಗೆಯುತ್ತಿದ್ದಾರೆ. ಪೊಲೀಸರು ಮೃತರ ಹಿನ್ನಲೆ ಪತ್ತೆ ಹಚ್ಚುತ್ತಿದ್ದಾರೆ.

ಇದನ್ನೂ ಓದಿ: Haveri Accident: ಪೂಜೆ ಮಾಡಿಸಿಕೊಂಡು ಬಂದ ಹೊಸ ವಾಹನ 13 ಜನರ ಬಲಿ ಪಡೆಯಿತು!

ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ. ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂದು ಸ್ವಗ್ರಾಮಕ್ಕೆ ವಾಪಾಸಾಗುವಾಗ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟ 13 ಮಂದಿಯಲ್ಲಿ ಒಂದು ಮಗು ಸಹ ಇದೆ. ಸ್ಥಳಕ್ಕೆ ಹಾವೇರಿ ಎಸ್‌ಪಿ ಅಂಶುಕುಮಾರ ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಟಿಟಿ ವಾಹನದಿಂದ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಹೊರತೆಗೆದಿದ್ದು, ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 13 ಜನರ ಸಾವಿನ ಸುದ್ದಿ ಕೇಳಿ ಎಮ್ಮೆಹಟ್ಟಿ ಗ್ರಾಮದ ಜನತೆ ಶಾಕ್ ಆಗಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

Continue Reading
Advertisement
Actor Darshan Suffering From Sade Sati
ಸ್ಯಾಂಡಲ್ ವುಡ್6 mins ago

Actor Darshan: 2024 ಡೇಂಜರಸ್ ಇಯರ್ ಫಾರ್ ಮಿ ಅನ್ನೋದು `ಡೆವಿಲ್‌’ಗೆ ಮೊದಲೇ ಗೊತ್ತಿತ್ತಾ?

deepika padukone
Latest6 mins ago

Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?

attika babu
ಬೆಂಗಳೂರು ಗ್ರಾಮಾಂತರ7 mins ago

Attica Babu: ಕಳ್ಳರಿಂದ ಚಿನ್ನ ಖರೀದಿ; ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕ ಮತ್ತೊಮ್ಮೆ ಬಂಧನ

Shah Rukh Khan
ಪ್ರಮುಖ ಸುದ್ದಿ9 mins ago

Shah Rukh Khan: ನಟ ಶಾರುಖ್ ಖಾನ್ ಬಗ್ಗೆ ಶಾಕಿಂಗ್ ಸುದ್ದಿ ಕೊಟ್ಟ ನಟ ಗೋವಿಂದ್ ನಾಮದೇವ್

Ram Path
ದೇಶ26 mins ago

Ram Path: ಅಯೋಧ್ಯೆ ರಾಮ ಪಥ ಕಾಮಗಾರಿಯಲ್ಲಿ ನಿರ್ಲಕ್ಷ್ಯ; 6 ಅಧಿಕಾರಿಗಳ ತಲೆದಂಡ

DP Manu
ಕ್ರೀಡೆ27 mins ago

DP Manu: ಡೋಪಿಂಗ್ ಸುಳಿಯಲ್ಲಿ ಸಿಲುಕಿದ ಜಾವೆಲಿನ್‌ ತಾರೆ ಮನು; ಒಲಿಂಪಿಕ್ಸ್​ಗೆ ಹಿನ್ನಡೆ

Love Failure
ರಾಯಚೂರು36 mins ago

Love Failure : ಅತ್ತಿಗೆ ತಂಗಿಯ ಪ್ರೀತಿ ಸಿಗದ್ದಕ್ಕೆ ಫ್ಯಾನಿಗೆ ನೇಣು ಬಿಗಿದುಕೊಂಡ ಹುಚ್ಚು ಪ್ರೇಮಿ

Gold Rate Today
ಪ್ರಮುಖ ಸುದ್ದಿ47 mins ago

Gold Rate Today: ತುಸು ಏರಿಕೆ ಕಂಡ ಚಿನ್ನದ ಬೆಲೆ; ಇಷ್ಟಿದೆ ಇಂದಿನ ದರ

ಬಾಲಿವುಡ್55 mins ago

Asha Bhosle: ಹಿರಿಯ ಗಾಯಕಿ ಆಶಾ ಭೋಂಸ್ಲೆ ಪಾದಕ್ಕೆ ಮುತ್ತಿಟ್ಟು, ಪನ್ನೀರಿನಿಂದ ತೊಳೆದು ನಮಸ್ಕರಿಸಿದ ಸೋನು ನಿಗಮ್

karnataka Rain
ಮಳೆ1 hour ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 hour ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ17 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌