ನವ ದೆಹಲಿ: ದೇಶದಲ್ಲಿ 150 ವೈದ್ಯಕೀಯ ಕಾಲೇಜುಗಳ ಮಾನ್ಯತೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (National Medical Commission) ರದ್ದುಪಡಿಸುವ ಸಾಧ್ಯತೆ ಇದೆ. ದೇಶದ ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಪ್ರೊಫೆಸರ್‌ಗಳ ಕೊರತೆ, ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಮಾನ್ಯತೆಯನ್ನು ರದ್ದುಪಡಿಸಲಾಗಿದೆ.
ಈಗಾಗಲೇ 40 ವೈದ್ಯಕೀಯ ಕಾಲೇಜುಗಳ ಮಾನ್ಯತೆಯನ್ನು ರದ್ದುಪಡಿಸಲಾಗಿದೆ. ಗುಜರಾತ್, ಅಸ್ಸಾಂ, ಪುದುಚೇರಿ, ತಮಿಳುನಾಡು, ಪಂಜಾಬ್, ಆಂಧ್ರಪ್ರದೇಶ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಲೇಜುಗಳ ಮಾನ್ಯತೆ ರದ್ದಾಗುವ ಸಾಧ್ಯತೆ ಇದೆ. ವೈದ್ಯಕೀಯ ಶಿಕ್ಷಣ ಮಂಡಳಿ ತಪಾಸಣೆ ನಡೆಸಿದ ಸಂದರ್ಭ ಲೋಪ ದೋಷಗಳು ಪತ್ತೆಯಾಗಿವೆ. ಅಕ್ರಮಗಳು ಬಹಿರಂಗವಾಗಿದೆ.
ಮಾನ್ಯತೆ ಕಳೆದುಕೊಳ್ಳಲಿರುವ ಕಾಲೇಜುಗಳು ಎನ್‌ಎಂಸಿಗೆ 30 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬಹುದು. ಅರ್ಜಿ ತಿರಸ್ಕೃತವಾದರೆ ಕೇಂದ್ರ ಆರೋಗ್ಯ ಸಚಿವಾಲಯ ಸಂಪರ್ಕಿಸಬಹುದು. 2014ರಲ್ಲಿ ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳು ಇತ್ತು. 2023ರಲ್ಲಿ 660ಕ್ಕೆ ಏರಿಕೆಯಾಗಿದೆ.
ವೈದ್ಯಕೀಯ ಶಿಕ್ಷಣ ಬಯಸುವವರಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಾಗಿರುವ ನೀಟ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಕೇಸ್‌ಗಳ ಸಂಖ್ಯೆ ಸುಪ್ರೀಂಕೋರ್ಟ್‌ನಲ್ಲಿ ಹೆಚ್ಚಳವಾಗಿದ್ದು, ಈ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕಿರುವುದನ್ನು ಬಿಂಬಿಸಿದೆ ಎಂದು ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ( CJI DY Chandrachud) ಇತ್ತೀಚೆಗೆ ಹೇಳಿದ್ದಾರೆ.
19ನೇ ಗಂಗಾ ರಾಮ್ ಉಪನ್ಯಾಸ ಮಾಲಿಕೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ನ್ಯಾಯ ಮತ್ತು ಸಮಾನತೆ ವಿಷಯವಾಗಿ ಮಾತನಾಡಿದ ಸಿಜೆಐ ಡಿವೈ ಚಂದ್ರಚೂಡ್ ಅವರು, ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿರ್ಧಾರಗಳನ್ನು ಪ್ರಶ್ನಿಸಿ ಹಲವಾರು ಕೇಸ್‌ಗಳು ಸುಪ್ರೀಂಕೋರ್ಟ್ ಅಂಗಳದಲ್ಲಿವೆ. ಕೋರ್ಟ್‌ಗಳು ನೀತಿ ನಿರೂಪಣೆಯ ವಲಯವನ್ನು ಪ್ರವೇಶಿಸಲಾರವು. ವಿದ್ಯಾರ್ಥಿಗಳ ಪ್ರತಿನಿಧಿಗಳು ಸಲ್ಲಿಸುವ ಅಹವಾಲುಗಳನ್ನು ಸರ್ಕಾರ ಆಲಿಸಬೇಕಾಗುತ್ತದೆ. ಹೀಗಿದ್ದರೂ ಅನ್ಯಾಯ ಸಂಭವಿಸಿದ್ದರೆ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಾಗುತ್ತದೆ. ಹೆಚ್ಚುತ್ತಿರುವ ನೀಟ್ ಕೇಸ್‌ಗಳು ವಿದ್ಯಾರ್ಥಿ ಸಮುದಾಯದ ನಿರೀಕ್ಷೆಗಳ ಹರವನ್ನೂ ಬಿಂಬಿಸಿದೆ. ಇಲ್ಲಿ ತಕರಾರುಗಳು ಸಾಂಕೇತಿಕವಾಗಿದ್ದು, ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಸುಧಾರಣೆಯ ಅಗತ್ಯವನ್ನು ಬಿಂಬಿಸಿದೆ ಎಂದು ವಿವರಿಸಿದ್ದರು.
ಸಮಾಜದದಲ್ಲಿ ದುರ್ಬಲ ಮತ್ತು ಹಿಂದುಳಿದ ವರ್ಗದ ಜನತೆಗೆ ಆರೋಗ್ಯ ಸೇವೆಗಳು ಸಕಾಲದಲ್ಲಿ ಸಿಗಬೇಕು. ಜಾತಿ, ವರ್ಗ, ಪ್ರಾದೇಶಿಕ ಅಸಮಾನತೆಯನ್ನು ಮೀರಿ ಎಲ್ಲರಿಗೂ ಆರೋಗ್ಯ ಸೇವೆಗಳು ದೊರೆಯಬೇಕು ಎಂದು ಅವರು ಹೇಳಿದ್ದರು.
ಟಿಸಿಎಸ್ ಉದ್ಯೋಗಿಗಳಿಗೆ ಎಚ್ಚರಿಕೆ:
ಟಿಸಿಎಸ್‌ನಲ್ಲಿ ತಿಂಗಳಿಗೆ ಕನಿಷ್ಠ 12 ದಿನ ಕಚೇರಿಯಲ್ಲಿ ಕೆಲಸ ಮಾಡದ ಉದ್ಯೋಗಿಗಳಿಗೆ ಕಂಪನಿ ನೋಟಿಸ್ ನೀಡುತ್ತಿದೆ. ಕಚೇರಿಯ ವಾತಾವರಣದಲ್ಲಿ ಕೆಲಸ ಮಾಡುವ ಅನುಭವ ಪಡೆಯುವುದು ಕೂಡ ಅಗತ್ಯ ಎಂದು ಟಿಸಿಎಸ್ ತನ್ನ ಉದ್ಯೋಗಿಗಳಿಗೆ ತಿಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Teacher Transfer : ಶಾಲೆ ಆರಂಭದ ದಿನವೇ ಶಿಕ್ಷಕರಿಗೆ ಸಿಹಿ ಸುದ್ದಿ! ಸರ್ಕಾರಿ ಶಿಕ್ಷಕರ ವರ್ಗಾವಣೆಗೆ ಸರ್ಕಾರದ ಅನುಮತಿ