Site icon Vistara News

Lok Sabha Election: ತರಕಾರಿ ಮಾರಿ ಪದ್ಮಶ್ರೀ ಪುರಸ್ಕೃತ ಅಭ್ಯರ್ಥಿ ಚುನಾವಣೆ ಪ್ರಚಾರ! ಯಾರಿವರು?

Lok Sabha Election

Meet Padma Shri Awardee Who Is Selling Veggies For His Lok Sabha Election 2024

ಚೆನ್ನೈ: ಬೇಸಿಗೆಯ ಬಿಸಿಲಿನ ಝಳಕ್ಕಿಂತ ಲೋಕಸಭೆ ಚುನಾವಣೆ (Lok Sabha Election 2024) ಕಾವೇ ದಿನೇದಿನೆ ಜಾಸ್ತಿಯಾಗುತ್ತಿದೆ. ಅಬ್ಬರದ ಪ್ರಚಾರ, ಪ್ರತಿಸ್ಪರ್ಧಿಗಳ ಮೇಲೆ ವಾಗ್ದಾಳಿ, ಮತದಾರರಿಗೆ ಹತ್ತಾರು ಭರವಸೆಗಳ ಮೂಲಕ ರಾಜಕೀಯ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ತಮಿಳುನಾಡಿನಲ್ಲಿ (Tamil Nadu) ಸ್ವತಂತ್ರ ಅಭ್ಯರ್ಥಿಯೊಬ್ಬರು (Independent Candidate) ತರಕಾರಿ ಮಾರಾಟ ಮಾಡುವ ಮೂಲಕ ಪ್ರಚಾರ ನಡೆಸಿ ವಿಭಿನ್ನವಾಗಿ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ.

ಹೌದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರುವ ಎಸ್.‌ ದಾಮೋದರನ್‌ ಅವರು ತಿರುಚಿರಪಳ್ಳಿ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರು ಜನರಿಗೆ ಹುಸಿ ಭರವಸೆಗಳನ್ನು ನೀಡುವ, ಅಬ್ಬರದ ಪ್ರಚಾರ ಮಾಡುವ, ಹಣ ಚೆಲ್ಲುವ ಬದಲು ತರಕಾರಿ ಮಾರಾಟಗಾರರ ಜತೆ ಮಾತನಾಡುವ, ಅವರೂ ತರಕಾರಿ, ಹೂವು, ಹಾರಗಳನ್ನು ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ. ಇವರು ತಿರುಚಿರಪಳ್ಳಿಯ ಗಾಂಧಿ ಮಾರ್ಕೆಟ್‌ನಲ್ಲಿ ತರಕಾರಿ ಮಾರಾಟ ಮಾಡಿ ಪ್ರಚಾರ ನಡೆಸಿದ ವಿಡಿಯೊ ಈಗ ವೈರಲ್‌ ಆಗಿದೆ.

“ನಾನು ತಿರುಚಿರಪಳ್ಳಿ ಲೋಕಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿದ್ದೇನೆ. ನಾನು ಈ ಮಣ್ಣಿನ ಮಗನಾಗಿದ್ದೇನೆ. ನಾನು ಕಳೆದ 40 ವರ್ಷಗಳಿಂದಲೂ ಸ್ವಚ್ಛತಾ ಕೇಂದ್ರದಲ್ಲಿ ಸ್ವಯಂಪ್ರೇರಿತನಾಗಿ ಸೇವೆ ಸಲ್ಲಿಸುತ್ತಿದ್ದೇನೆ. 21ನೇ ವಯಸ್ಸಿನಲ್ಲಿ ನಾನು ಈ ವೃತ್ತಿ ಆರಿಸಿಕೊಂಡೆ. ಈಗ ನನಗೆ 62 ವರ್ಷ ವಯಸ್ಸು. ಸ್ವಚ್ಛತಾ ಕ್ಷೇತ್ರದಲ್ಲಿ ನಾನು ಮಾಡಿದ ಸೇವೆ ಪರಿಗಣಿಸಿ 2022ರಲ್ಲಿ ನನಗೆ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿತು. ಈಗ ನನ್ನ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ” ಎಂದು ಎಎನ್‌ಐ ಸುದ್ದಿಸಂಸ್ಥೆಗೆ ಎಸ್‌. ದಾಮೋದರನ್‌ ಅವರು ತಿಳಿಸಿದ್ದಾರೆ.

ತಮಿಳುನಾಡಿನ ರಾಮನಾಥಪುರಂ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪರಿರಾಜನ್‌ ಎಂಬುವರು ಚುನಾವಣೆ ಪ್ರಚಾರದ ಭಾಗವಾಗಿ ಒಂದು ದಿನದ ಮಟ್ಟಿಗೆ ಕ್ಷೌರಿಕನ ಕೆಲಸ ಮಾಡಿದ್ದಾರೆ. ಜನರಿಗೆ ಕಟಿಂಗ್‌ ಮಾಡಿ, ಅವರ ಗಡ್ಡ ಬೋಳಿಸಿ, ಅವರು ಸಲೂನ್‌ನಿಂದ ಹೊರಡುವಾಗ ಕೈ ಮುಗಿದು ಮತ ಕೇಳುತ್ತಿದ್ದಾರೆ. ಇದು ಸುತ್ತಮುತ್ತಲಿನ ಭಾಗದ ಜನರ ಗಮನವನ್ನೂ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಚಟುವಟಿಕೆ ಕುರಿತು ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Khagen Murmu: ಚುನಾವಣೆ ಪ್ರಚಾರದ ವೇಳೆ ಯುವತಿಗೆ ಕಿಸ್‌ ಕೊಟ್ಟ ಬಿಜೆಪಿ ಸಂಸದ; ಭಾರಿ ಟೀಕೆ

Exit mobile version