Site icon Vistara News

Milind Deora: ʼನ್ಯಾಯʼ ಯಾತ್ರೆ ದಿನವೇ ಶಿವಸೇನೆ ಸೇರಿದ ರಾಹುಲ್‌ ಗಾಂಧಿ ಆಪ್ತ; ಕಾಂಗ್ರೆಸ್‌ಗೆ ಹಿನ್ನಡೆ

Milind Deora

Milind Deora joins Shiv Sena in the presence of Maharashtra CM Eknath Shinde

ಮುಂಬೈ: ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ಅವರು ಶಿವಸೇನೆಯನ್ನು ಇಬ್ಭಾಗಗೊಳಿಸಿದ ಬಳಿಕ ಮಹಾ ವಿಕಾಸ್‌ ಅಘಾಡಿ (Maha Vikas Aghadi) ಮೈತ್ರಿ ಮುರಿದುಬಿದ್ದ ಕಾರಣ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್‌ಗೆ ಈಗ ಮತ್ತೊಂದು ಹಿನ್ನಡೆಯಾಗಿದೆ. ಮುಂಬೈ ಕಾಂಗ್ರೆಸ್‌ ನಾಯಕರಾಗಿದ್ದ ಮಿಲಿಂದ್‌ ದಿಯೋರಾ (Milind Deora) ಅವರು ಪಕ್ಷವನ್ನು ತೊರೆದು, ಏಕನಾಥ್‌ ಶಿಂಧೆ ಅವರ ಶಿವಸೇನೆ ಸೇರಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ (Eknath Shide) ಅವರ ನೇತೃತ್ವದಲ್ಲಿ ಮಿಲಿಂದ್‌ ದಿಯೋರಾ ಅವರು ಶಿವಸೇನೆ ಸೇರಿದರು.

ಶಿವಸೇನೆ ಸೇರಿದ ಬಳಿಕ ಮಾತನಾಡಿದ ಮಿಲಿಂದ್‌ ದಿಯೋರಾ, “ಇಂದು ನನ್ನ ಜೀವನದಲ್ಲಿ ಅತ್ಯಂತ ಭಾವುಕ ಕ್ಷಣಗಳನ್ನು ಅನುಭವಿಸುತ್ತಿದ್ದೇನೆ. ನಾನು ಅಭಿವೃದ್ಧಿಯ ಪಥ ಹಿಡಿದಿದ್ದೇನೆ. ನಾನು ಎಂದಿಗೂ ಕಾಂಗ್ರೆಸ್‌ ತೊರೆಯುವ ಕಲ್ಪನೆಯನ್ನೂ ಮಾಡಿರಲಿಲ್ಲ. ಆದರೆ, ಜನಸೇವೆ, ಅಭಿವೃದ್ಧಿಯ ಕಾರಣದಿಂದಾಗಿ ನಾನು ಕಾಂಗ್ರೆಸ್‌ ತೊರೆದು ಶಿವಸೇನೆ ಸೇರಿದ್ದೇನೆ” ಎಂದು ಹೇಳಿದರು. ಭಾರತ್‌ ಜೋಡೊ ನ್ಯಾಯ ಯಾತ್ರೆಯ ದಿನವೇ ಮಿಲಿಂದ್‌ ದಿಯೋರಾ ಅವರು ಶಿವಸೇನೆ ಸೇರಿರುವುದು ಕಾಂಗ್ರೆಸ್‌ಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಇದರೊಂದಿಗೆ ಕಾಂಗ್ರೆಸ್‌ ಪಕ್ಷದ ಜತೆಗಿನ ನಮ್ಮ 55 ವರ್ಷಗಳ ಸಂಬಂಧವನ್ನು ಅತ್ಯಗೊಳಿಸುತ್ತಿದ್ದೇವೆ. ಹಲವು ವರ್ಷಗಳಿಂದ ಬೆಂಬಲಿಸುತ್ತಾ ಬಂದ ಪಕ್ಷದ ಎಲ್ಲ ನಾಯಕರು, ಸಹೋದ್ಯೋಗಿಗಳು ಮತ್ತು ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಮಿಲಿಂದ್ ದಿಯೋರಾ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Disqualification Verdict: ಶಿಂಧೆ ಬಣವೇ ರಿಯಲ್ ಶಿವಸೇನೆ ಎಂದು ಸ್ಪೀಕರ್ ತೀರ್ಪು ಕೊಟ್ಟಿದ್ದೇಕೆ?

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಮುರಳಿ ದಿಯೋರಾ ಅವರ ಪುತ್ರರಾಗಿರುವ ಮಿಲಿಂದ್ ಅವರು ಮುಂಬೈ ದಕ್ಷಿಣ ಲೋಕಸಭ ಕ್ಷೇತ್ರವನ್ನು 2004 ಮತ್ತು 2009ರಲ್ಲಿ ಪ್ರತಿನಿಧಿಸಿದ್ದರು. ಆದರೆ, 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಶಿವಸೇನೆಯ ಅರವಿಂದ್ ಸಾವಂತ್ ವಿರುದ್ಧ ಸೋಲು ಅನುಭವಿಸಿದ್ದರು.

ಮುಂಬೈ ದಕ್ಷಿಣ ಕ್ಷೇತ್ರವನ್ನು ಉದ್ಧವ್ ಠಾಕ್ರೆ ಬಣ ಗೆದ್ದಿರುವ ಬಗ್ಗೆ ಅವರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ವಿರೋಧ ಪಕ್ಷದ ಮೈತ್ರಿಕೂಟದ ಒಂದು ಭಾಗವಾಗಿದೆ. ಕಳೆದ ಭಾನುವಾರ ವಿಡಿಯೋವೊಂದನ್ನು ಷೇರ್ ಮಾಡಿದ್ದ ಮಿಲಂದ್ ಅವರು, ಮೈತ್ರಿ ಕೂಟದ ಪಕ್ಷವಾಗಿರುವ ಶಿವಸೇನೆ ತನ್ನ ಹೇಳಿಕೆಗಳನ್ನು ನಿಲ್ಲಿಸದಿದ್ದರೆ, ತಮ್ಮ ಪಕ್ಷವೂ ಅಭ್ಯರ್ಥಿಯನ್ನು ಘೋಷಿಸಲಿದೆ ಎಂದು ಹೇಳಿದ್ದರು.

Exit mobile version