ಗ್ವಾಲಿಯರ್: ಕೆಸರಾಗಿದ್ದ ಯುವಕನೊಬ್ಬನ ಪಾದಗಳನ್ನು ತೊಳೆದ ಮಧ್ಯಪ್ರದೇಶದ (Madhya Pradesh) ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರು, ಕೆಟ್ಟ ರಸ್ತೆಗಳಿಗಾಗಿ ಯುವಕನ ಕ್ಷಮೆ ಕೋರಿದ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ಇಲ್ಲಿನ ವಿನಯ್‌ನಗರ ಪ್ರದೇಶದ ರಸ್ತೆಯೊಂದರಲ್ಲಿ ಚರಂಡಿಗಾಗಿ ರಸ್ತೆ ಅಗೆಯಲಾಗಿದೆ. ಆದರೆ, ರಸ್ತೆ ರಿಪೇರಿಯನ್ನು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರು ಪರಿಶೀಲನೆ ಕಾರ್ಯ ನಡೆಸಿದ್ದರು.
ಮಧ್ಯಪ್ರದೇಶದ ಇಂಧನ ಸಚಿವರಾಗಿರುವ ತೋಮರ್ ಅವರು, ”ಕೆಟ್ಟ ಪರಿಸ್ಥಿತಿಯಲ್ಲಿರುವ ರಸ್ತೆಗಳಿಗಾಗಿ ಜನರ ಕ್ಷಮೆ ಕೋರುತ್ತೇನೆ. ಚರಂಡಿಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಶೀಘ್ರವೇ ಈ ಎಲ್ಲ ರಸ್ತೆಗಳನ್ನುರಿಪೇರಿ ಮಾಡಲಾಗುವುದು” ಎಂದು ಅವರು ತಿಳಿಸಿದ್ದಾರೆ.
ತಮ್ಮ ಕಾರ್ಯವೈಖರಿಯಿಂದ ತೋಮರ್ ಅವರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡುವುದು, ರಸ್ತೆ ಗುಡಿಸುವುದರ ಮೂಲಕ ಸುದ್ದಿಯಲ್ಲಿರುತ್ತಾರೆ. ಗ್ವಾಲಿಯರ್ ರಸ್ತೆಗಳ ದುರಸ್ತಿಗಾಗಿ ಅವರು ವಿಶಿಷ್ಟ ಬೇಡಿಕೆ ಇಡುವ ಮೂಲಕ ಕಳೆದ ತಿಂಗಳು ಸದ್ದಿಯಾಗಿದ್ದರು. ಕೇಂದ್ರ ಸಚಿವ ಜ್ಯೋತಿರಾದಿತ್ಯ ಅವರಿಗೆ ಒಂದು ಜೊತೆ ಚಪ್ಪಲಿ ನೀಡುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೇ, ರಸ್ತೆ ರಿಪೇರಿ ಆಗೋವರೆಗೂ ಚಪ್ಪಲಿ ಹಾಕುವುದಿಲ್ಲ ಎಂದು ಶಪಥ ಮಾಡಿದ್ದರು. ಮೂರು ತಿಂಗಳವರೆಗೂ ಚಪ್ಪಲಿ ಧರಿಸಿರಲಿಲ್ಲ.
ಇದನ್ನೂ ಓದಿ | Pathan Controversy | ಪುತ್ರಿ ಜತೆ ಶಾರುಖ್ ಪಠಾಣ್ ಸಿನಿಮಾ ವೀಕ್ಷಿಸಲಿ, ನಟನಿಗೆ ಸವಾಲೆಸೆದ ಮಧ್ಯಪ್ರದೇಶ ಸ್ಪೀಕರ್