ನವದೆಹಲಿ: ಇಂಗ್ಲೆಂಡ್‌ನಲ್ಲಿ (United Kingdom) ಕಳೆದ ತಿಂಗಳ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ (Indian Student) ಈಗ ಲಂಡನ್‌ನ ಥೇಮ್ಸ್ ನದಿಯಲ್ಲಿ (Thames River) ಶವವಾಗಿ ಪತ್ತೆಯಾಗಿದ್ದಾರೆ. 23 ವರ್ಷದ ಮಿತಕುಮಾರ್ ಪಟೇಲ್ (Mitkumar Patel) ಉನ್ನತ ಶಿಕ್ಷಣಕ್ಕಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ಲಂಡನ್‌ಗೆ ಆಗಮಿಸಿದ್ದರು ಮತ್ತು ನವೆಂಬರ್ 27ರಿಂದ ನಾಪತ್ತೆಯಾಗಿದ್ದರು. ಕೊನೆಗೆ ಅವರ ಶವ ನದಿಯಲ್ಲಿ ಪತ್ತೆಯಾಗಿದೆ.
ಭಾರತೀಯ ವಿದ್ಯಾರ್ಥಿಯ ಮೃತದೇಹವನ್ನು ನವೆಂಬರ್ 21 ರಂದು ಪೂರ್ವ ಲಂಡನ್‌ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿ ಥೇಮ್ಸ್ ನದಿಯಲ್ಲಿ ಮೆಟ್ರೋಪಾಲಿಟನ್ ಪೊಲೀಸರು ಪತ್ತೆ ಮಾಡಿದರು. ಈ ಸಾವು ಅನುಮಾನಾಸ್ಪದ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಂಬಂಧಿ ಪಾರ್ಥ್ ಪಟೇಲ್ ಅವರು GoFundMe ಆನ್‌ಲೈನ್ ನಿಧಿಸಂಗ್ರಹವನ್ನು ಪ್ರಾರಂಭಿಸಿದ್ದಾರೆ ಮತ್ತು ಕಳೆದ ವಾರದಿಂದ 4,500 ಪೌಂಡ್‌ಗಿಂತಲೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ.
23 ವರ್ಷದ ಮಿತಕುಮಾರ್ ಪಟೇಲ್ ಅವರು ಉನ್ನತ ಅಧ್ಯಯನಕ್ಕಾಗಿ 2023ರ ಸೆಪ್ಟೆಂಬರ್ 19ರಂದು ಇಂಗ್ಲೆಂಡ್‌ಗೆ ಆಗಮಿಸಿದ್ದರು ಎಂದು ನಿಧಿ ಸಂಗ್ರಹ ಮನಿಯಲ್ಲಿ ಹೇಳಲಾಗಿದೆ. ಮಿತಕಮಾರ್ ಅವರು ಹಳ್ಳಿಯಲ್ಲಿ ವಾಸಿಸುತ್ತಿರುವ ರೈತನ ಮಗನಾಗಿದ್ದಾರೆ. 2023ರ ನವೆಂಬರ್ 17ರಿಂದ ಮಿತಕುಮಾರ್ ನಾಪತ್ತೆಯಾಗಿದ್ದರು ಮತ್ತು ಪೂರ್ವ ಲಂಡನ್‌ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿ ಥೇಮ್ಸ್ ನದಿಯಲ್ಲಿ ಮೆಟ್ರೋಪಾಲಿಟನ್ ಪೊಲೀಸರು ಆತನ ಶವವನ್ನು ಪತ್ತೆ ಮಾಡಿದರು. ಇದು ನಮಗೆಲ್ಲ ದುಃಖದ ಸಂಗತಿಯಾಗಿದೆ, ಆದ್ದರಿಂದ ಆತನ ಕುಟುಂಬಕ್ಕೆ ಸಹಾಯ ಮಾಡಲು ಮತ್ತು ಶವವನ್ನು ಭಾರತಕ್ಕೆ ಕಳುಹಿಸುವ ಸಂಬಂಧ ನಿಧಿ ಸಂಗ್ರಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿನ ಮಿತಕುಮಾರ್ ಅವರ ಕುಟುಂಬಕ್ಕೆ ಹಣವನ್ನು ಸುರಕ್ಷಿತವಾಗಿ ರವಾನಿಸಲಾಗುವುದು ಎಂದು ಮನವಿ ಪುನರುಚ್ಚರಿಸಲಾಗಿದೆ. ವಿದ್ಯಾರ್ಥಿಯು ನವೆಂಬರ್ 20 ರಂದು ಶೆಫೀಲ್ಡ್ ಹಾಲಮ್ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಅಮೆಜಾನ್‌ನಲ್ಲಿ ಅರೆಕಾಲಿಕ ಉದ್ಯೋಗವನ್ನು ಪ್ರಾರಂಭಿಸಲು ಶೆಫೀಲ್ಡ್‌ಗೆ ತೆರಳಬೇಕಿತ್ತು ಎಂದು ಇಂಗ್ಲೆಂಡ್‌ನ ಈವ್ನಿಂಗ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ. ಲಂಡನ್ ನಿವಾಸಕ್ಕೆ ತನ್ನ ದೈನಂದಿನ ವಾಕಿಂಗ್‌ನಿಂದ ಆತ ಮರಳಿ ಬಂದಿರಲಿಲ್ಲ. ಆಗ ಆತನ ಬಗ್ಗೆ ಆತಂಕ ಶುರುವಾಯಿತು ಮತ್ತು ಪೋಷಕರು ಈ ಕುರಿತು ವರದಿ ಮಾಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Indian Student: ಅಮೆರಿಕದಲ್ಲಿ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿ; ತಿಂಗಳಲ್ಲೇ ಇಬ್ಬರ ಹತ್ಯೆ