Site icon Vistara News

MNS v/s Shiv Sena: MNS ಕಾರ್ಯಕರ್ತರ ಪುಂಡಾಟ; ಉದ್ಧವ್‌ ಠಾಕ್ರೆ ಬೆಂಗಾವಲು ವಾಹನದ ಮೇಲೆ ದಾಳಿ

MNS v/s Shiv Sena

ಥಾಣೆ: ರಾಜ್‌ ಠಾಕ್ರೆಯವರ(Raj Thackeray) ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಕಾರ್ಯಕರ್ತರು ಉದ್ಧವ್ ಠಾಕ್ರೆ(Uddhav Thackeray) ಅವರ ಬೆಂಗಾವಲು ಪಡೆಯ ಮೇಲೆ ಶನಿವಾರ ದಾಳಿ ಮಾಡಿರುವ ಘಟನೆ ವರದಿಯಾಗಿದೆ. MNS ಕಾರ್ಯಕರ್ತರು ಬಳೆಗಳು, ಟೊಮೆಟೊಗಳು ಮತ್ತು ತೆಂಗಿನಕಾಯಿಗಳನ್ನು ಎಸೆದಿದ್ದು, ಉದ್ವಿಗ್ನ ಪರಿಸ್ಥಿತಿ(MNS v/s Shiv Sena) ಉಂಟಾಯಿತು. ಪರಿಣಾಮವಾಗಿ ಶಿವಸೇನೆ (ಯುಬಿಟಿ) ಮುಖ್ಯಸ್ಥರ ಬೆಂಗಾವಲು ಪಡೆಯ ವಾಹನಗಳಿಗೆ ಹಾನಿಯಾಗಿದೆ.

ರಂಗಾಯತನ್‌ ಬಳಿ ಈ ಘಟನೆ ನಡೆದಿದ್ದು, ಪಕ್ಷದ ಕಾರ್ಯಕರ್ತರ ಸಭೆ ಆಯೋಜನೆಗೊಂಡಿತ್ತು. ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಉದ್ಧವ್ ಠಾಕ್ರೆ ಮತನಾಡಲಿದ್ದರು. ಠಾಕ್ರೆ ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ಎಂಎನ್‌ಎಸ್ ಕಾರ್ಯಕರ್ತರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿರುದ್ಧ ಪ್ರತಿಭಟಿಸಿ ಸಭಾಂಗಣಕ್ಕೆ ಮುತ್ತಿಗೆ ಹಾಕಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮತ್ತು ಹಲವಾರು MNS ಪ್ರತಿಭಟನಾಕಾರರನ್ನು ಬಂಧಿಸಿದರು

ಠಾಕ್ರೆಯವರ ಬೆಂಗಾವಲು ವಾಹನದ ಮೇಲಿನ ದಾಳಿಯು ಬೀಡ್‌ನಲ್ಲಿ ನಡೆದ ಇದೇ ರೀತಿಯ ಘಟನೆಗೆ ಪ್ರತೀಕಾರ ಎಂದು ವರದಿಯಾಗಿದೆ, ಅಲ್ಲಿ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಬೆಂಗಾವಲು ಪಡೆಯ ಮೇಲೆ ಅಡಿಕೆ ಮತ್ತು ಟೊಮೆಟೊಗಳಿಂದ ದಾಳಿ ಮಾಡಿದರು.

ಥಾಣೆಯ ಎಂಎನ್‌ಎಸ್‌ ಮುಖಂಡ ಅವಿನಾಶ್‌ ಜಾಧವ್‌, ನಮ್ಮ ಎಂಎನ್‌ಎಸ್‌ ಕಾರ್ಯಕರ್ತರು ತಕ್ಕ ಉತ್ತರ ನೀಡಿದ್ದಾರೆ. ನೀವು ವೀಳ್ಯದೆಲೆ ಎಸೆದಿದ್ದೀರಿ, ನಾವು ತೆಂಗಿನಕಾಯಿಯಿಂದ ದಾಳಿ ಮಾಡಿದ್ದೇವೆ. ಉದ್ಧವ್ ಠಾಕ್ರೆ ಅವರ ಬೆಂಗಾವಲು ಪಡೆಯ ಸುಮಾರು 16 ರಿಂದ 17 ವಾಹನಗಳಿಗೆ ತೆಂಗಿನಕಾಯಿಯಿಂದ ಹಾನಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Uddhav Thackeray: ಉದ್ಧವ್ ಠಾಕ್ರೆ ಎನ್‌ಡಿಎಗೆ ವಾಪಸ್? ಇಂಡಿ ಒಕ್ಕೂಟದ ಸಭೆಗೆ ಹೋಗದ ಶಿವಸೇನೆ ನಾಯಕ!

Exit mobile version