ಇತ್ತೀಚಿನ ಯುವಜನತೆಗೆ ಸರ್ಜರಿ ಮಾಡಿಸಿಕೊಳ್ಳುವುದು ಒಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ಇದರ ಮೂಲಕ ಮುಖ್ಯವಾಹಿನಿಗಳಲ್ಲಿ ಅವಕಾಶಗಳು ಸಿಗಬಹುದು, ಎಲ್ಲರಿಗಿಂತಲೂ ಆಕರ್ಷಕವಾಗಿ ಕಾಣಬಹುದು ಎಂಬ ಹುಚ್ಚು ಆಸೆಯಿಂದ ತಮ್ಮ ಜೀವ, ಜೀವನವನ್ನು ಲೆಕ್ಕಿಸದೇ ಸರ್ಜರಿಗೆ ಒಳಗಾಗುತ್ತಾರೆ. ಇದರಿಂದ ಕೆಲವರು ತಮ್ಮ ಪ್ರಾಣಗಳನ್ನೇ ಕಳೆದುಕೊಂಡರೆ, ಮತ್ತೂ ಕೆಲವರು ತಮ್ಮ ದೇಹವನ್ನು ವಿಕಾರಗೊಳಿಸಿಕೊಂಡಿದ್ದೂ ಇದೆ. ಹೀಗೆ ಇದೇ ರೀತಿ ಸರ್ಜರಿಗೆ ಒಳಗಾಗಿ ತನ್ನ ಮುಖದ ನಿಜ ಸ್ವರೂಪವನ್ನೇ ಕಳೆದುಕೊಂಡಿದ್ದ ಮಾಡೆಲ್ ತನ್ನ ನೈಜ ಸೌಂದರ್ಯ ಪಡೆದುಕೊಳ್ಳಲು 95 ಲಕ್ಷ ರೂ. ಖರ್ಚು ಮಾಡಬೇಕಾಗಿ ಬಂದಿದೆ.
ಅಮೆರಿಕದ ರಿಯಾಲಿಟಿ ಟೆಲಿವಿಷನ್ ತಾರೆ ಕಿಮ್ ಕದರ್ಶಿಯನ್ನಂತೆ ಕಾಣಲು ಶಸ್ತ್ರಚಿಕಿತ್ಸೆಗಾಗಿ ಸುಮಾರು 4.7 ಕೋಟಿ ರೂಪಾಯಿಯನ್ನು ಮಾಡೆಲ್ ಜೆನ್ನಿಫರ್ ಪ್ಯಾಂಪ್ಲೋನಾ ಖರ್ಚು ಮಾಡಿದ್ದಳು. ಈಗ ತನ್ನ ನೈಜ ಸ್ವರೂಪ ಪಡೆಯಲು ಮತ್ತೆ ಕೋಟ್ಯಂತರ ರೂ. ಖರ್ಚು ಮಾಡಬೇಕಾಗಿ ಬಂದಿದೆ.
ಇದನ್ನು ಓದಿ| Fat Free Surgery: ಕಿರುತೆರೆ ನಟಿ ಚೇತನಾ ಅನುಮಾನಾಸ್ಪದ ಸಾವು
ಈ ಕುರಿತು ಜೆನ್ನಿಫರ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. “”ನಾನು ಕದರ್ಶಿಯನ್ಳಂತೆ ಕಾಣಲು ಸರ್ಜರಿ ಮಾಡಿಸಿಕೊಂಡೆ. ಜನರು ನನ್ನನ್ನು ನೋಡಿ ಕದರ್ಶಿಯನ್ ಎಂದೇ ಕರೆಯುತ್ತಿದ್ದರು. ಮೊದ ಮೊದಲು ಖುಷಿಯಾಗುತ್ತಿದ್ದರೂ ನಂತರ ಅದು ಬಹಳ ಕಿರಿಕಿರಿ ಉಂಟು ಮಾಡಲು ಶುರುವಾಯಿತು. ನಾನು ಹೆಚ್ಚು ಓದಿದ್ದೇನೆ, ಮತ್ತು ಉದ್ಯಮಿಯಾಗಿದ್ದೇನೆ. ವೈಯಕ್ತಿಕವಾಗಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದೇನೆ. ಆದರೆ ನಾನು ಕದರ್ಶಿಯನ್ ಅವರಂತೆ ಕಾಣುವುದರಿಂದ ಮಾತ್ರ ಜನರು ನನ್ನನ್ನು ಗುರುತಿಸುವಂತಾಗಿದ್ದು ಕಂಡು ಕ್ರಮೇಣ ಬೇಸರವಾಯಿತುʼʼ ಎಂದು ಹೇಳಿಕೊಂಡಿದ್ದಾಳೆ.
ನಾನು 17 ವರ್ಷದಲ್ಲಿರುವಾಗಲೇ ಸರ್ಜರಿಗೆ ಒಳಗಾಗಿದ್ದೆ. ನಂತರ ಈ ಸರ್ಜರಿ ನನಗೆ ಒಂದು ವ್ಯಸನದಂತೆ ಅಭ್ಯಾಸವಾಗ ತೊಡಗಿತು. ನಾನು ಸರ್ಜರಿಗೆ ವ್ಯಸನಿಯಾಗಿ ಬಿಟ್ಟಿದ್ದೆ. ಇದರಿಂದ ನಾನು ಖುಷಿಯಾಗಿರಲಿಲ್ಲ, ಎಂಬುದನ್ನು ಈಗ ಕಂಡು ಕೊಂಡಿದ್ದೇನೆ. ಸರ್ಜರಿ ಮಾಡಿಸಿಕೊಂಡ ನಂತರ ಖ್ಯಾತಿ, ಹಣ ಎಲ್ಲವೂ ಬಂತೂ ಆದರೆ, ಸಂತೋಷ ಸಿಕ್ಕಲಿಲ್ಲ, ಕೆಲವು ಸರ್ಜರಿಗಳಿಂದಲೇ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ ಎಂದು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
“”ನನಗೆ ಈ ಹಿಂದೆ ಮುಖ ಮತ್ತು ಕತ್ತಿನ ಸರ್ಜರಿ, ಬಕಲ್ ಫ್ಯಾಟ್ ಸರ್ಜರಿ, ಬೆಕ್ಕಿನ ಕಣ್ಣಿನ ಚಿಕಿತ್ಸೆ, ಲಿಪ್ ಲಿಫ್ಟ್ ಮತ್ತು ಮೂಗಿನ ಸರ್ಜರಿಯನ್ನು ಮಾಡಲಾಗಿದೆ. ನಾನು ಒಮ್ಮೆ ಅಪರೇಷನ್ ಕೋಣೆಗೆ ಹೋದರೆ ಬರುವಾಗ ಬೇರೆ ವ್ಯಕ್ತಿಯ ಸ್ವರೂಪದಲ್ಲೇ ಹೊರ ಬರುತ್ತಿದ್ದೆ. ಕೆಲವೊಮ್ಮೆ ಈ ಸರ್ಜರಿಗಳ ನೋವು ತಡೆಯಲು ಡಿಟ್ರಾನ್ಸಿಶಿನ್ ಸರ್ಜರಿಗೆ ಒಳಗಾಗಿದ್ದೆ. ಅದರಿಂದಲೂ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾದವುʼʼ ಎಂದು ಹೇಳಿಕೊಂಡಿದ್ದಾಳೆ.
“” ಇನ್ನು ಈ ಸರ್ಜರಿ ಸಾಕು. ಇನ್ನು ಮುಂದೆ ನನ್ನ ಜೊತೆಯೇ ನಾನು ಸಂಘರ್ಷಕ್ಕೆ ಇಳಿಯುವುದಿಲ್ಲ. ನಾನು ಈಗ ನಾನಾಗಬೇಂಕೆಂದು ಬಯಸಿದ್ದೇನೆ. ಕಾಸ್ಮೆಟಿಕ್ ಸರ್ಜರಿಯ ವ್ಯಸನದ ಅಪಾಯ ಮತ್ತು ಜಾಗೃತಿ ಮೂಡಿಸುವಂತಹ ಅಡಿಕ್ಷನ್ ಎಂಬ ಸಾಕ್ಷ್ಯಚಿತ್ರವನ್ನು ಮಾಡುತ್ತಿದ್ದೇನೆʼʼ ಎಂದು ಈ ಮಾಡೆಲ್ ಹೇಳಿದ್ದಾರೆ.
ಇದನ್ನು ಓದಿ| ಫ್ಯಾಟ್ ಸರ್ಜರಿಯ ಇನ್ನೊಂದು ಎಡವಟ್ಟು: ಯುವತಿ ಸೊಂಟದಲ್ಲಿ ಕೀವು, ಗಾಯ