Site icon Vistara News

Modi 3.0 Cabinet: ರಾಜ್ಯದಿಂದ ಜೋಶಿ, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿಗೆ ಸಚಿವ ಸ್ಥಾನ; ಡಾ. ಮಂಜುನಾಥ್‌ಗೆ ಇಲ್ಲ ಅವಕಾಶ

Modi 3.0 Cabinet

ನವದೆಹಲಿ: ಮೂರನೇ ಬಾರಿ ಪ್ರಧಾನಿ ಪಟ್ಟ ಏರುತ್ತಿರುವ ನರೇಂದ್ರ ಮೋದಿ(Narendra Modi) ಇಂದು ಪ್ರಮಾಣವಚನ ಸ್ವೀಕರಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಎಲ್ಲರಿಗೂ ಈ ಬಾರಿ ಪ್ರಧಾನಿ ಮೋದಿ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ ಸಿಗಲಿದೆ ಎಂಬ ಕುತೂಹಲ ಇದ್ದೇ ಇದೆ. ಈಗಾಗಲೇ ಕೆಲವು ಅಧಿಕೃತ ಮೂಲಗಳ ಪ್ರಕಾರ ಈ ಬಾರಿ ಕೇಂದ್ರ ಸಚಿವ ಸಂಪುಟ(Modi 3.0 Cabinet)ದಲ್ಲಿ ಎನ್‌ಡಿಎ ಮೈತ್ರಿಕೂಟದ 35ಮಂದಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.

ಮೋದಿ ಅವರ ಜತೆ ಕ್ಯಾಬಿನೆಟ್ ದರ್ಜೆಯ ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯದಿಂದ ಸಂಸದರೂ ಈ ಪಟ್ಟಿಗೆ ಸೇರುವುದು ಖಚಿತವಾಗಿದೆ. ಈ ಬಾರಿ ರಾಜ್ಯದ ಮೂರು ನಾಯಕರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿದ್ದು, ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ. ಇನ್ನು ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಡಾ.ಮಂಜುನಾಥ್ ಅವರಿಗೆ ಲಭಿಸುವ ಸಾಧ್ಯತೆ ಎನ್ನಲಾಗಿತ್ತು. ಆದರೆ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿಲ್ಲ. ಹಾಗಿದ್ದರೆ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಯಾವ್ಯಾವ ನಾಯಕರ ಹೆಸರಿದೆ? ಯಾವ ಪಕ್ಷಗಳಿಗೆ ಎಷ್ಟು ಸ್ಥಾನಗಳು ಸಿಕ್ಕಿವೆ ಎಂಬುದನ್ನು ನೋಡೋಣ.

ನಾಯಕರುಪಕ್ಷ
1ರಾಜನಾಥ್ ಸಿಂಗ್ ಬಿಜೆಪಿ
2ನಿತಿನ್ ಗಡ್ಕರಿ ಬಿಜೆಪಿ
3ಅರ್ಜುನ್ ರಾಮ್ ಮೇಘವಾಲ್ ಬಿಜೆಪಿ
4 ಚಿರಾಗ್ ಪಾಸ್ವಾನ್ಎಲ್‌ಜೆಪಿ
5ಎಚ್ ಡಿ ಕುಮಾರಸ್ವಾಮಿಜೆಡಿ(ಎಸ್)
6ಸರ್ಬಾನಂದ ಸೋನೋವಾಲ್ಬಿಜೆಪಿ
7ಪ್ರಹ್ಲಾದ್ ಜೋಶಿ ಬಿಜೆಪಿ
8ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿ
9ಚಂದ್ರಶೇಖರ್ ಪೆಮ್ಮಸಾನಿ TDP
10ರಾಮ್ ಮೋಹನ್ ನಾಯ್ಡು ಕಿಂಜರಾಪು TDP
11ರಾಮನಾಥ್ ಠಾಕೂರ್ JDU
12ಲಾಲನ್ ಸಿಂಗ್JDU
13ಪ್ರತಾಪ್ ರಾವ್ ಜಾಧವ್ಶಿವಸೇನೆ
14ಕೆ ಅಣ್ಣಾಮಲೈ ಬಿಜೆಪಿ
15ಅಮಿತ್ ಶಾ ಬಿಜೆಪಿ
16ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ
17ಎಂಎಲ್ ಖಟ್ಟರ್ ಬಿಜೆಪಿ
18ಚಂದ್ರಶೇಖರ ಚೌಧರಿ AJSU
19ಜಯಂತ್ ಚೌಧರಿ RJD
20ಮನ್ಸುಖ್ ಮಾಂಡವಿಯಾ ಬಿಜೆಪಿ
21ಅಶ್ವಿನಿ ವೈಷ್ಣವ್ ಬಿಜೆಪಿ
22ಪಿಯೂಷ್ ಗೋಯಲ್ ಬಿಜೆಪಿ
23ಕಿರಣ್ ರಿಜಿಜು ಬಿಜೆಪಿ
24ರಕ್ಷಾ ಖಡ್ಸೆ ಬಿಜೆಪಿ
25ಕಮಲಜೀತ್ ಸೆಹ್ರಾವತ್ ಬಿಜೆಪಿ
26ರಾವ್ ಇಂದ್ರಜಿತ್ ಸಿಂಗ್ ಬಿಜೆಪಿ
27ರಾಮದಾಸ್ ಅಠವಲೆರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
28ಜಿತನ್ ರಾಮ್ ಮಾಂಝಿಹಿಂದೂಸ್ತಾನಿ ಆವಾಮ್ ಮೋರ್ಚಾ
29ಗಿರಿರಾಜ್ ಸಿಂಗ್ ಬಿಜೆಪಿ
30ಬಂಡಿ ಸಂಜಯ್ ಬಿಜೆಪಿ
31ಸುರೇಶ್ ಗೋಪಿಬಿಜೆಪಿ
32 ಜಿ ಕಿಶನ್ ರೆಡ್ಡಿ ಬಿಜೆಪಿ
33ಶೋಭಾ ಕರಂದ್ಲಾಜೆಬಿಜೆಪಿ
34ಹರ್ಷ್ ಮಲ್ಹೋತ್ರಾಬಿಜೆಪಿ

ಇದನ್ನೂ ಓದಿ:ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

Exit mobile version