ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ದೇಶದಲ್ಲಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಆಡಳಿತ ಆರಂಭವಾಗಿದೆ. ಅಷ್ಟೇ ಅಲ್ಲ, ನರೇಂದ್ರ ಮೋದಿ ಅವರ ಜತೆ ಸಂಸದರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್ಡಿಎ ಮೈತ್ರಿಕೂಟದ 30 ಸಂಸದರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗಿದೆ. ಹಾಗೆಯೇ, ಐವರಿಗೆ ಸ್ವತಂತ್ರ ನಿರ್ವಹಣೆ ಮತ್ತು 36 ಸಂಸದರನ್ನು ರಾಜ್ಯ ಸಹಾಯಕ ಸಚಿವರನ್ನಾಗಿ ನೇಮಿಸಲಾಗಿದೆ.
ಕರ್ನಾಟಕದ ಪ್ರಲ್ಹಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸ್ಥಾನ ಸಿಕ್ಕರೆ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಅವರು ರಾಜ್ಯ ಖಾತೆ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಯಾವ ಪಕ್ಷದವರಿಗೆ ಯಾವ ಸ್ಥಾನಮಾನ ನೀಡಲಿದೆ ಎಂಬುದು ಸೇರಿ ಇಡೀ ಸಂಪುಟ ಸಚಿವರ ಪಟ್ಟಿ ಇಲ್ಲಿದೆ.
ಹೀಗಿದೆ ಸಂಪುಟ ದರ್ಜೆ ಸಚಿವರ ಪಟ್ಟಿ
- ಅಮಿತ್ ಶಾ (ಬಿಜೆಪಿ- ಗುಜರಾತ್)
- ರಾಜನಾಥ್ ಸಿಂಗ್ (ಬಿಜೆಪಿ- ಉತ್ತರ ಪ್ರದೇಶ)
- ನಿತಿನ್ ಗಡ್ಕರಿ (ಬಿಜೆಪಿ- ಮಹಾರಾಷ್ಟ್ರ)
- ಜೆ.ಪಿ.ನಡ್ಡಾ (ಬಿಜೆಪಿ- ಹಿಮಾಚಲ ಪ್ರದೇಶ)
- ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ- ಮಧ್ಯಪ್ರದೇಶ )
- ನಿರ್ಮಲಾ ಸೀತಾರಾಮನ್ (ರಾಜ್ಯಸಭೆ ಬಿಜೆಪಿ ಸದಸ್ಯೆ)
- ಎಸ್.ಜೈ ಶಂಕರ್ (ರಾಜ್ಯಸಭೆ ಬಿಜೆಪಿ ಸದಸ್ಯ)
- ಮನೋಹರ ಲಾಲ್ ಖಟ್ಟರ್ (ಬಿಜೆಪಿ- ಹರಿಯಾಣ)
- ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್- ಕರ್ನಾಟಕ)
- ಪಿಯೂಷ್ ಗೋಯಲ್ (ಬಿಜೆಪಿ- ಮಹಾರಾಷ್ಟ್ರ )
- ಧರ್ಮೇಂದ್ರ ಪ್ರಧಾನ್ (ಬಿಜೆಪಿ- ಒಡಿಶಾ)
- ಜಿತನ್ ರಾಮ್ ಮಾಂಝಿ (ಎಚ್ಎಎಂ- ಬಿಹಾರ)
- ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್-ಜೆಡಿಯು-ಬಿಹಾರ)
- ಸರ್ಬಾನಂದ ಸೋನೊವಾಲ್ (ಬಿಜೆಪಿ- ಅಸ್ಸಾಂ)
- ರಾಮ್ ಮೋಹನ್ ನಾಯ್ಡು (ಟಿಡಿಪಿ-ಆಂಧ್ರಪ್ರದೇಶ)
- ಪ್ರಲ್ಹಾದ್ ಜೋಶಿ (ಬಿಜೆಪಿ- ಕರ್ನಾಟಕ)
- ಡಾ.ವೀರೇಂದ್ರ ಕುಮಾರ್ (ಬಿಜೆಪಿ-ಮಧ್ಯಪ್ರದೇಶ)
- ಜುವೆಲ್ ಒರಾಮ್ (ಬಿಜೆಪಿ- ಒಡಿಶಾ)
- ಗಿರಿರಾಜ್ ಸಿಂಗ್ (ಬಿಜೆಪಿ-ಬಿಹಾರ)
- ಅಶ್ವಿನಿ ವೈಷ್ಣವ್ (ಬಿಜೆಪಿ-ರಾಜಸ್ಥಾನ-ರಾಜ್ಯಸಭೆ ಸದಸ್ಯ)
- ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ-ಮಧ್ಯಪ್ರದೇಶ)
- ಭೂಪೇಂದ್ರ ಯಾದವ್ (ಬಿಜೆಪಿ-ರಾಜಸ್ಥಾನ)
- ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ- ರಾಜಸ್ಥಾನ)
- ಅನ್ನಪೂರ್ಣ ದೇವಿ (ಬಿಜೆಪಿ-ಜಾರ್ಖಂಡ್)
- ಕಿರಣ್ ರಿಜಿಜು (ಬಿಜೆಪಿ- ಅರುಣಾಚಲ ಪ್ರದೇಶ)
- ಹರ್ದೀಪ್ ಸಿಂಗ್ ಪುರಿ (ರಾಜ್ಯಸಭೆ ಬಿಜೆಪಿ ಸದಸ್ಯ-ಪಂಜಾಬ್)
- ಡಾ.ಮನ್ಸುಖ್ ಮಂಡಾವೀಯ (ಬಿಜೆಪಿ-ಗುಜರಾತ್)
- ಜಿ.ಕಿಶನ್ ರೆಡ್ಡಿ (ಬಿಜೆಪಿ-ತೆಲಂಗಾಣ)
- ಚಿರಾಗ್ ಪಾಸ್ವಾನ್ (ಎಲ್ಜೆಪಿ-ಬಿಹಾರ)
- ಸಿ.ಆರ್.ಪಾಟೀಲ್ (ಬಿಜೆಪಿ-ಗುಜರಾತ್)
ಸ್ವತಂತ್ರ ನಿರ್ವಹಣೆ
- ಇಂದ್ರಜೀತ್ ಸಿಂಗ್ (ಬಿಜೆಪಿ-ಹರಿಯಾಣ)
- ಡಾ.ಜಿತೇಂದ್ರ ಸಿಂಗ್ (ಬಿಜೆಪಿ-ಜಮ್ಮು)
- ಅರ್ಜುನ್ ರಾಮ್ ಮೇಘ್ವಾಲ್ (ಬಿಜೆಪಿ-ರಾಜಸ್ಥಾನ)
- ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್ (ಶಿವಸೇನೆ ಏಕನಾಥ್ ಶಿಂಧೆ ಬಣದ ಸಂಸದ-ಮಹಾರಾಷ್ಟ್ರ)
- ಜಯಂತ್ ಚೌಧರಿ (ಆರ್ಎಲ್ಡಿ-ಉತ್ತರ ಪ್ರದೇಶ)
ರಾಜ್ಯ ಖಾತೆ ಸಚಿವರು
- ಜಿತಿನ್ ಪ್ರಸಾದ್ (ಬಿಜೆಪಿ-ಉತ್ತರ ಪ್ರದೇಶ)
- ಶ್ರೀಪಾದ್ ನಾಯ್ಕ್ (ಬಿಜೆಪಿ-ಗೋವಾ)
- ಪಂಕಜ್ ಚೌಧರಿ (ಬಿಜೆಪಿ-ಉತ್ತರ ಪ್ರದೇಶ)
- ಕ್ರಿಶನ್ ಪಾಲ್ (ಬಿಜೆಪಿ-ಹರಿಯಾಣ)
- ರಾಮ್ದಾಸ್ ಅಠಾವಳೆ (ಆರ್ಪಿಐ-ಮಹಾರಾಷ್ಟ್ರ)
- ರಾಮನಾಥ್ ಠಾಕೂರ್ (ಜೆಡಿಯು-ಬಿಹಾರ)
- ನಿತ್ಯಾನಂದ್ ರಾಯ್ (ಬಿಜೆಪಿ-ಬಿಹಾರ)
- ಅನುಪ್ರಿಯಾ ಪಟೇಲ್ (ಅಪ್ನಾದಳ್ (ಎಸ್)-ಉತ್ತರ ಪ್ರದೇಶ)
- ವಿ. ಸೋಮಣ್ಣ (ಬಿಜೆಪಿ-ಕರ್ನಾಟಕ)
- ಪೆಮ್ಮಸಾನಿ ಚಂದ್ರಶೇಖರ್ (ಟಿಡಿಪಿ-ಆಂಧ್ರಪ್ರದೇಶ)
- ಎಸ್ಪಿ ಸಿಂಗ್ ಬಘೇಲ್ (ಬಿಜೆಪಿ-ಉತ್ತರ ಪ್ರದೇಶ)
- ಶೋಭಾ ಕರಂದ್ಲಾಜೆ (ಬಿಜೆಪಿ-ಕರ್ನಾಟಕ)
- ಕೀರ್ತಿ ವರ್ಧನ್ ಸಿಂಗ್ (ಬಿಜೆಪಿ-ಉತ್ತರ ಪ್ರದೇಶ)
- ಬಿ.ಎಲ್.ವರ್ಮಾ (ಬಿಜೆಪಿ-ಉತ್ತರ ಪ್ರದೇಶ)
- ಶಂತನು ಠಾಕೂರ್ (ಬಿಜೆಪಿ- ಪಶ್ಚಿಮ ಬಂಗಾಳ)
- ಸುರೇಶ್ ಗೋಪಿ (ಬಿಜೆಪಿ-ಕೇರಳ)
- ಡಾ.ಎಲ್.ಮುರುಗನ್ (ಬಿಜೆಪಿ-ತಮಿಳುನಾಡು)
- ಅಜಯ್ ತಮ್ಟಾ (ಬಿಜೆಪಿ-ಉತ್ತರಾಖಂಡ)
- ಬಂಡಿ ಸಂಜಯ್ ಕುಮಾರ್ (ಬಿಜೆಪಿ-ತೆಲಂಗಾಣ)
- ಕಮಲೇಶ್ ಪಾಸ್ವಾನ್ (ಬಿಜೆಪಿ-ಉತ್ತರ ಪ್ರದೇಶ)
- ಭಾಗೀರಥ್ ಚೌಧರಿ (ಬಿಜೆಪಿ-ರಾಜಸ್ಥಾನ)
- ಸತೀಶ್ ಚಂದ್ರ ದುಬೆ (ಬಿಜೆಪಿ-ಬಿಹಾರ)
- ಸಂಜಯ್ ಸೇಠ್ (ಬಿಜೆಪಿ-ಜಾರ್ಖಂಡ್)
- ರವನೀತ್ ಸಿಂಗ್ ಬಿಟ್ಟು (ಬಿಜೆಪಿ-ಪಂಜಾಬ್)
- ದುರ್ಗಾದಾಸ್ ಉಯಿಕೆ (ಬಿಜೆಪಿ- ಮಧ್ಯಪ್ರದೇಶ)
- ರಕ್ಷಾ ನಿಖಿಲ್ ಖಡ್ಸೆ (ಬಿಜೆಪಿ-ಮಹಾರಾಷ್ಟ್ರ)
- ಸುಕಾಂತ ಮಜುಂದಾರ್ (ಬಿಜೆಪಿ-ಪಶ್ಚಿಮ ಬಂಗಾಳ)
- ಸಾವಿತ್ರಿ ಠಾಕೂರ್ (ಬಿಜೆಪಿ-ಮಧ್ಯಪ್ರದೇಶ)
- ತೋಖನ್ ಸಾಹು (ಬಿಜೆಪಿ-ಛತ್ತೀಸ್ಗಢ)
- ಡಾ.ರಾಜ್ಭೂಷಣ್ ಚೌಧರಿ (ಬಿಜೆಪಿ-ಬಿಹಾರ)
- ಭೂಪತಿ ರಾಜು ಶ್ರೀನಿವಾಸ್ ವರ್ಮಾ (ಬಿಜೆಪಿ-ಆಂಧ್ರಪ್ರದೇಶ)
- ಹರ್ಷ ಮಲ್ಹೋತ್ರಾ (ಬಿಜೆಪಿ-ದೆಹಲಿ)
- ನಿಮುಬೆನ್ ಬಾಂಭಣಿಯಾ (ಬಿಜೆಪಿ-ಗುಜರಾತ್)
- ಮುರಳೀಧರ್ ಮೊಹೊಲ್ (ಬಿಜೆಪಿ-ಮಹಾರಾಷ್ಟ್ರ)
- ಜಾರ್ಜ್ ಕುರಿಯನ್ (ಬಿಜೆಪಿ-ಕೇರಳ)
- ಪವಿತ್ರ ಮಾರ್ಗರಿಟಾ (ಬಿಜೆಪಿ-ಅಸ್ಸಾಂ)
ಇದನ್ನೂ ಓದಿ: Narendra Modi: 3ನೇ ಬಾರಿ ಪ್ರಧಾನಿಯಾಗಿ ಇಂದು ಸಂಜೆ ಮೋದಿ ಪ್ರಮಾಣ; ಇಲ್ಲಿದೆ ಬಾಲ್ಯದಿಂದ ವಿಶ್ವನಾಯಕತನಕದ ಜೀವನ ಚಿತ್ರಣ