Site icon Vistara News

Modi 3.0 Cabinet: ಬಿಜೆಪಿಯ 5, NDAಯ 10 ಸಂಸದರು INDIA ಜೊತೆ ಸಂಪರ್ಕ? ಹೊಸ ಬಾಂಬ್‌ ಸ್ಫೋಟಿಸಿದ TMC

Modi 3.0 Cabinet

ಕೋಲ್ಕತ್ತಾ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ(Modi 3.0 Cabinet) ಅಧಿಕಾರಕ್ಕೆ ಬರುತ್ತಿದ್ದಂತೆ ಕೇವಲ 15 ದಿನಗಳಲ್ಲಿ ಸರ್ಕಾರ ಪತನ ಆಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಹೇಳಿಕೆ ಬೆನ್ನಲ್ಲೇ ಬಿಜೆಪಿಯ ಕನಿಷ್ಟ ಐವರು ಸಂಸದರು ತೃಣಮೂಲ ಕಾಂಗ್ರೆಸ್‌(TMC) ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಶಾಕಿಂಗ್‌ ಸುದ್ದಿ ಹೊರಬಿದ್ದಿದೆ. ಪಶ್ಚಿಮ ಬಂಗಾಳ(West Bengal)ದದಲ್ಲಿ ಈ ಬಾರಿ ಚುನಾಯಿತರಾಗಿರುವ 12 ಬಿಜೆಪಿ ಸಂಸದರ ಪೈಕಿ ಐವರು ಸಂಸದರು ಶೀಘ್ರದಲ್ಲೇ ಪಕ್ಷ ತೊರೆದು ಟಿಎಂಸಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಹೊಸ ಬಾಂಬ್‌ವೊಂದನ್ನು ಟಿಎಂಸಿ ಸ್ಫೋಟಿಸಿದೆ.

ಇನ್ನು ಈ ಬಾರಿ ಸೋಲುಂಡಿರುವ ಬಿಜೆಪಿ ಅಭ್ಯರ್ಥಿಗಳು ಕೂಡ ಟಿಎಂಸಿಗೆ ಸೇರ್ಪಡೆಗೊಳ್ಳಲು ಬಯಸುತ್ತಿದ್ದಾರೆ. ಸಂಸದರ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಈ ಮಹತ್ವದ ಬದಲಾವಣೆ ಆಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇನ್ನು ಸಂಸದರ ಜೂನ್‌ ಮಧ್ಯದಲ್ಲಿ ಸಂಸದರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

ಇನ್ನು ಐವರು ಬಿಜೆಪಿ ಸಂಸದರು ತಕ್ಷಣವೇ ಟಿಎಂಸಿಗೆ ಹಾರಲು ರೆಡಿಯಾಗಿದ್ದರೆ, ಇನ್ನು ಕೆಲವರು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಹಂಚಿಕೆ ಬಳಿಕ ನಿರ್ಧರಿಸಲಿದ್ದಾರೆ ಇನ್ನು ಎನ್‌ಡಿಎಯ ಒಟ್ಟು 10 ಸಂಸದರು ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳ ಜೊತೆ ಸಂಪರ್ಕದಲ್ಲಿದ್ದಾರೆ. ಎಂದು ಟಿಎಂಸಿ ಮೂಲಗಳು ಹೇಳಿವೆ. ಹೀಗಾಗಿ ಮಮತಾ ಬ್ಯಾನರ್ಜಿ ಹೇಳಿದಂತೆಯೇ ಕೇಂದ್ರ ಸರ್ಕಾರ ಶೀಘ್ರದಲ್ಲೇ ಪತನ ಆಗುತ್ತಾ ಅನ್ನೋ ಅನುಮಾನ ಹುಟ್ಟಿಸಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ವರಿಷ್ಠ ನಾಯಕಿ ಮಮತಾ ಬ್ಯಾನರ್ಜಿ ಅವರು ನಿನ್ನೆ ಸ್ಫೋಟಕ ಭವಿಷ್ಯ ನುಡಿದಿದ್ದು, ಯಾವುದೇ ಸರ್ಕಾರವು 15 ದಿನಗಳಲ್ಲಿ ಬೇಕಾದರೂ ಪತನವಾಗಬಹುದು ಎಂಬುದಾಗಿ ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತೃಣಮೂಲ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯ ಬಳಿಕ ಮಮತಾ ಬ್ಯಾನರ್ಜಿ ಮಾತನಾಡಿದರು. “ಯಾರು (ಬಿಜೆಪಿ) 400 ಸೀಟುಗಳ ಬಗ್ಗೆ ಮಾತನಾಡಿದ್ದರೋ, ಅವರಿಗೇ ಈಗ ಬಹುಮತ ಸಿಗದಷ್ಟು ಸ್ಥಾನಗಳು ಲಭಿಸಿವೆ. ಇಂಡಿಯಾ ಒಕ್ಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ ಎಂದ ಮಾತ್ರಕ್ಕೆ ಏನೂ ಆಗುವುದಿಲ್ಲ ಎಂಬುದಾಗಿ ಭಾವಿಸದಿರಿ. ಸಮಯ ಬದಲಾಗುತ್ತದೆ, ಮನಸ್ಥಿತಿಗಳು ಬದಲಾಗುತ್ತವೆ. ಇದರ ಮೇಲೆ ಇಂಡಿಯಾ ಒಕ್ಕೂಟವು ಹೆಚ್ಚು ಗಮನ ಹರಿಸುತ್ತಿದೆ” ಎಂದು ಹೇಳಿದರು.
ಕೇಂದ್ರದಲ್ಲಿ ಇಂಡಿಯಾ ಒಕ್ಕೂಟವೇ ಸರ್ಕಾರ ರಚಿಸಲಿದೆ ಎಂಬುದಾಗಿ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಕೊನೆಗೆ ಒಂದು ದಿನ ಇಂಡಿಯಾ ಒಕ್ಕೂಟವು ಸರ್ಕಾರ ರಚಿಸುತ್ತದೆ. ಕೆಲವು ದಿನಗಳವರೆಗೆ ಅವರು ಅಧಿಕಾರದಲ್ಲಿ ಇರಲಿ. ಆದರೆ, ಒಂದು ನೆನಪಿರಲಿ, ಒಂದೇ ದಿನದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು. ಏನು ಬೇಕಾದರೂ ಆಗಬಹುದು. ಯಾರಿಗೆ ಗೊತ್ತು, 15 ದಿನಗಳಲ್ಲಿ ಬೇಕಾದರೂ ಸರ್ಕಾರ ಪತನವಾಗಬಹುದು” ಎಂಬುದಾಗಿ ಎನ್‌ಡಿಎ ಸರ್ಕಾರದ ಪತನದ ಕುರಿತು ಮಮತಾ ಬ್ಯಾನರ್ಜಿ ಮಹತ್ವದ ಹೇಳಿಕೆ ನೀಡಿದ್ದಾರೆ.

ನರೇಂದ್ರ ಮೋದಿ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಟಿಎಂಸಿ ನಿರ್ಧರಿಸಿದೆ ಎಂಬುದಾಗಿ ಮಮತಾ ಬ್ಯಾನರ್ಜಿ ಹೇಳಿದರು. “ಕಾನೂನುಬಾಹಿರ ಹಾಗೂ ಪ್ರಜಾಸತ್ತಾತ್ಮಕವಲ್ಲದ ಮಾರ್ಗದ ಮೂಲಕ ಎನ್‌ಡಿಎ ಸರ್ಕಾರ ರಚಿಸುತ್ತಿದೆ. ಹಾಗಾಗಿ, ಪ್ರಮಾಣವಚನ ಕಾರ್ಯಕ್ರಮದಲ್ಲಿ ಟಿಎಂಸಿ ಭಾಗವಹಿಸಲ್ಲ” ಎಂದಿದ್ದಾರೆ.

ಇದನ್ನೂ ಓದಿ:Assault case : ಮೊದಲನೇ ಹೆಂಡ್ತಿ ಮಕ್ಕಳೊಂದಿಗೆ ಬಂದು 2ನೇ ಹೆಂಡ್ತಿಗೆ ರಕ್ತ ಬರುವಂತೆ ಬಾರಿಸಿದ ಭೂಪ

Exit mobile version