Site icon Vistara News

Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!

Modi 3.0 Government

ನವದೆಹಲಿ: ಈ ಬಾರಿ ಸಂಪೂರ್ಣ ಬಹುಮತದೊಂದಿಗೆ ಎನ್‌ಡಿಎ(NDA) ಸರ್ಕಾರ(Modi 3.0 Government) ಅಧಿಕಾರಕ್ಕೆ ಬಂದಿದೆಯಾದರೂ ಜೆಡಿಯುನ ನಿತೀಶ್‌ ಕುಮಾರ್‌(Nithish Kumar) ಮತ್ತು ಟಿಎಂಸಿಯ ಚಂದ್ರಬಾಬು ನಾಯ್ಡು(Chandrababu Naidu) ಅವರೇ ಕಿಂಗ್‌ಮೇಕರ್ಸ್.‌ ಈ ಸರ್ಕಾರದಲ್ಲಿ ತಾವೇ ಪ್ರಮುಖ ಪಾತ್ರವಹಿಸಲಿರುವ ಕಾರಣ ಈ ಇಬ್ಬರು ನಾಯಕರು ನರೇಂದ್ರ ಮೋದಿ ಎದುರು ಇಟ್ಟಿರುವ ಬೇಡಿಕೆಯಾದರೂ ಏನು? ಯಾವ್ಯಾವ ಬೇಡಿಕೆಗಳಿಗೆ ಬಿಜೆಪಿ ಅಸ್ತು ಅನ್ನಲಿದೆ?

ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯು ಕೇಂದ್ರ ಸಚಿವ ಸಂಪುಟದಲ್ಲಿ ಕನಿಷ್ಠ 3-4 ಸ್ಥಾನಗಳನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಸರ್ಕಾರಕ್ಕೆ ತಮ್ಮ 16 ಸ್ಥಾನಗಳೊಂದಿಗೆ ಬೆಂಬಲ ನೀಡಿದ್ದ ಟಿಡಿಪಿ ಒಂದು ಕೇಂದ್ರ ಸಚಿವ ಸ್ಥಾನ ಹಾಗೂ ಒಂದು ರಾಜ್ಯ ಖಾತೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿತ್ತು. 2018 ರಲ್ಲಿ ಪಕ್ಷವು ಎನ್‌ಡಿಎ ಸರ್ಕಾರದಿಂದ ಹೊರಬರುವವರೆಗೂ ನಾಗರಿಕ ವಿಮಾನಯಾನ ಸಚಿವರು ಮತ್ತು ರಾಜ್ಯ ಐಟಿ ಸಚಿವರು ಟಿಡಿಪಿ ಪಕ್ಷದವರಾಗಿದ್ದರು. ಈ ಬಾರಿ ಹಣಕಾಸು ರಾಜ್ಯ ಖಾತೆಯನ್ನು ಕೇಳುವ ಸಾಧ್ಯತೆ ಇದೆ.

ಆಂಧ್ರಕ್ಕೆ ವಿಶೇಷ ಸ್ಥಾನಮಾನ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬುದು ಟಿಡಿಪಿಯ ಮತ್ತೊಂದು ಬೇಡಿಕೆ ಇಡುವ ಸಾಧ್ಯತೆ ಇದೆ. ಆದರೆ ಈ ಹಿಂದಿನಿಂದಲೂ ಇದಕ್ಕೆ ಎನ್‌ಡಿಎ ಒಪ್ಪದ ಕಾರಣ ಅದರ ಬದಲಾಗಿ, ಆಂಧ್ರಪ್ರದೇಶಕ್ಕೆ ಸಾಕಷ್ಟು ಹಣವನ್ನು ಒದಗಿಸುವ ಭರವಸೆ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಬೇಡಿಕೆ ಇಟ್ಟು 2018 ರಲ್ಲಿ ನಾಯ್ಡು ಎನ್‌ಡಿಎಯಿಂದ ಹೊರಬಂದಿತ್ತು.

ಜೆಡಿಯು ಬೇಡಿಕೆ ಏನು?

ಅವರು 2019 ರಲ್ಲಿ ಜೆಡಿಯು 16 ಸಂಸದರೊಂದಿಗೆ ಜೆಡಿಯುಗೆ ಬೆಂಬಲ ನೀಡಿದ್ದ ನಿತೀಶ್‌ ಕುಮಾರ್‌, ನಾಲ್ಕು ಪ್ರಮುಖ ಕ್ಯಾಬಿನೆಟ್‌ ಹುದ್ದೆಗಳಿಗೆ ಬೇಡಿಕೆ ಇಟ್ಟಿತ್ತು. ಇದಕ್ಕೆ ಬಿಜೆಪಿ ಒಪ್ಪದ ಕಾರಣ ಅವರ ಮೈತ್ರಿಕೂಟದಿಂದ ಹೊರನಡೆದಿದ್ದರು. ಇದಾದ ಬಳಿಕ ಎನ್‌ಡಿಎಗೆ ಮರು ಸೇರ್ಪಡೆಯಾಗುವ ಸಂದರ್ಭದಲ್ಲಿ ಬಿಜೆಪಿ ಜೆಡಿಯುನ ಆರ್‌ಸಿಪಿ ಸಿಂಗ್‌ ಅವರಿಗೆ ಒಂದು ಸಚಿವ ಸ್ಥಾನ ನೀಡಿತ್ತು. ಬಳಿಕ ಅವರು ಬಿಜೆಪಿ ಪಕ್ಷಾಂತರಗೊಂಡಿದ್ದರು. ಈ ಬಾರಿ ಜೆಡಿಯು ಮೂರು ಕ್ಯಾಬಿನೆಟ್‌ ಸ್ಥಾನಗಳು ಮತ್ತು ರಾಜ್ಯ ಖಾತೆ ಸಚಿವಾಲಯಗಳ ಮೇಲೆ ಕಣ್ಣಿಟ್ಟಿದೆ. ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಜಲಶಕ್ತಿ ಖಾತೆಗಳನ್ನು ಕೇಳುವ ಸಾಧ್ಯತೆ ಇದೆ.

ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಅವರು ತಮ್ಮ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರಂತೆ ಪೂರ್ಣ ಸಮಯದ ಸಚಿವರಾಗುವ ನಿರೀಕ್ಷೆಯಿದೆ, ಏಕೆಂದರೆ ಅವರ ಪಕ್ಷವು ಸ್ಪರ್ಧಿಸಿದ ಎಲ್ಲಾ ಐದು ಸ್ಥಾನಗಳನ್ನು ಗೆದ್ದಿದೆ. ಏಳು ಸ್ಥಾನಗಳೊಂದಿಗೆ ಏಕನಾಥ್ ಶಿಂಧೆ ಅವರ ಶಿವಸೇನೆ ಕೂಡ ಸಚಿವ ಮತ್ತು MoS ಸ್ಥಾನದೊಂದಿಗೆ ಕೇಂದ್ರ ಸಂಪುಟಕ್ಕೆ ಸೇರಬಹುದು. ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಮತ್ತು ಶ್ರೀರಂಗ್ ಬಾರ್ನೆ ಹೆಸರುಗಳು ಸದ್ದು ಮಾಡುತ್ತಿವೆ.

ಇದನ್ನೂ ಓದಿ: Lok Sabha Election 2024: ಒಬ್ಬ ಅಭ್ಯರ್ಥಿ ಎರಡೂ ಕ್ಷೇತ್ರಗಳಲ್ಲೂ ಗೆದ್ದರೆ ಏನಾಗುತ್ತದೆ?

Exit mobile version