ನವದೆಹಲಿ: 2025ರಲ್ಲಿ ನಾನು ಯುಎಇಗೆ ಭೇಟಿ ನೀಡಿದ್ದೆ(UAE Visit). ಆಗ, ಹಿಂದೂ ದೇವಾಲಯ (Hindu Temple) ನಿರ್ಮಾಣ ಪ್ರಸ್ತಾಪ ಯುಇಎ ಅಧ್ಯಕ್ಷರ (UAE President) ಮುಂದಿಟ್ಟಾಗ, ಮರುಕ್ಷಣವೇ ಅವರು ಒಪ್ಪಿಗೆ ಸೂಚಿಸಿದರು. ಪರಿಣಾಮ, ಅಬುಧಾಬಿಯ 27 ಎಕರೆ ಭೂಮಿಯಲ್ಲಿ ಈಗ ದೇವಾಲಯ ನಿರ್ಮಾಣವಾಗಿದೆ. ಅದನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು.
ಮಂಗಳವಾರ ಅಬುಧಾಬಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ, ಭಾರತ ಮತ್ತು ಯುಎಇ ನಡುವಿನ ಸಂಬಂಧಗಳು, ಭಾರತದ ಸಾಧನೆಗಳು, ರಾಮ ಮಂದಿರ ಇತ್ಯಾದಿ ಸಂಗತಿಗಳು ಕುರಿತು ಮಾತನಾಡಿ, ಭಾರತೀಯರನ್ನು ಭಾವನಾತ್ಮಕವಾಗಿ ಸೆಳೆದರು.
Overwhelmed by the affection at the #AhlanModi community programme in Abu Dhabi.https://t.co/dZJ5oPz73R
— Narendra Modi (@narendramodi) February 13, 2024
2015ರಲ್ಲಿ ನಾನು ಮೊದಲ ಬಾರಿಗೆ ಯುಎಇಗೆ ಭೇಟಿ ನೀಡಿದ್ದೆ. ನಿಮ್ಮೆಲ್ಲರ ಪರವಾಗಿ ಅಬುಧಾಬಿಯಲ್ಲಿ ದೇವಾಲಯವನ್ನು ನಿರ್ಮಿಸುವ ಪ್ರಸ್ತಾಪವನ್ನು ನಾನು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಎದುರು ಪ್ರಸ್ತುತಪಡಿಸಿದಾಗ, ಅವರು ಕೂಡಲೇ ತಮ್ಮ ಒಪ್ಪಿಗೆ ನೀಡಿದರು. ನೀವು ಎಲ್ಲಿ ಹೇಳುತ್ತೀರೋ ಆ ಜಾಗದಲ್ಲಿ ಮಂದಿರ ನಿರ್ಮಾಣವನ್ನು ಮಾಡಿ. ಈಗ 700 ಕೋಟಿ ರೂಪಾಯಿ ವೆಚ್ಚದಲ್ಲಿ ಭವ ಮಂದಿರ ನಿರ್ಮಾಣವಾಗಿದೆ ಮತ್ತು ಅದನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಭಾರತದ ವಿವಿಧ ರಾಜ್ಯಗಳ ಜನರು ಇಲ್ಲಿದ್ದಾರೆ. ಆದರೆ, ಅವರ ಹೃದಯಗಳು ಸಂಪರ್ಕ ಹೊಂದಿವೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪ್ರತಿ ಹೃದಯ ಬಡಿತವೂ ಭಾರತ್-ಯುಎಇ ದೋಸ್ತಿ ಜಿಂದಾಬಾದ್ ಎಂದು ಹೇಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನನ್ನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಬಂದಿದ್ದೇನೆ. ನೀವು ಹುಟ್ಟಿದ ಮಣ್ಣಿನ ಪರಿಮಳವನ್ನು ತಂದು 140 ಕೋಟಿ ಜನರ ಸಂದೇಶವನ್ನು ತಂದಿದ್ದೇನೆ. ಭಾರತವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂಬ ಸಂದೇಶವಿದೆ. ನನ್ನ ಮೇಲಿನ ನಿಮ್ಮ ಪ್ರೀತಿ ಅಸಾಧಾರಣವಾದದ್ದು. ನೀವು ಇಂದು ನನ್ನನ್ನು ಇಲ್ಲಿ ನೋಡಲು ಸಮಯ ತೆಗೆದುಕೊಂಡಿದ್ದೀರಿ, ನಾನು ನಿಮಗೆ ಕೃತಜ್ಞನಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ನಿಮ್ಮ ಉತ್ಸಾಹ, ನಿಮ್ಮ ಧ್ವನಿ ಅಬುಧಾಬಿಯಲ್ಲಿ ಪ್ರತಿಧ್ವನಿಸುತ್ತಿದೆ. ಇಲ್ಲಿಗೆ ಬಂದಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳು. ನಾನು ನನ್ನ ಸಹೋದರ ಶೇಖ್ ಮೊಹಮ್ಮದ್ ಬಿನ್ ಜಹೈದ್ (ಯುಎಇ ಅಧ್ಯಕ್ಷ) ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
2015 ರಲ್ಲಿ ನಾನು ಯುಎಇಗೆ ಭೇಟಿ ನೀಡಿದಾಗ, ರಾಜತಾಂತ್ರಿಕ ಜಗತ್ತು ನನಗೆ ಹೊಸತು. ರಾಜಕುಮಾರರು ಮತ್ತು ಅಧ್ಯಕ್ಷರು ನನ್ನನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಬಂದರು. ಅವರ ಕಣ್ಣುಗಳಲಿದ್ದ ಆತ್ಮೀಯತೆ ಮತ್ತು ಹೆಮ್ಮೆಯ ನಾನು ಮರೆಯಲು ಸಾಧ್ಯವಿಲ್ಲ. ಮೊದಲ ಭೇಟಿಯೇ ನನಗೆ ಹತ್ತಿರವಾದ ವ್ಯಕ್ತಿಯ ಮನೆಗೆ ಬಂದಂತೆ ಅನಿಸಿತು ಎಂದು ಪ್ರಧಾನಿ ಮೋದಿ ಹೇಳಿದರು.
ಸೋದರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರು ಇಂದು ಕೂಡ ನನ್ನನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಬಂದಿದ್ದರು. ಈಗಲೂ ಏಕತೆ ಮತ್ತು ಆತ್ಮೀಯತೆ ಕಂಡು ಬಂತು. ಭಾರತದಲ್ಲಿ ಅವರನ್ನು 4 ಬಾರಿ ಸ್ವಾಗತಿಸಲು ಅವಕಾಶ ದೊರೆಯಿತು ಅದನ್ನು ಗೌರವ ಎಂದು ಭಾವಿಸುತ್ತೇನೆ. ನಮ್ಮ ಸಂಬಂಧಗಳು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.
ನಮ್ಮ ಸಂಬಂಧವು ಪ್ರತಿಭೆ, ನಾವೀನ್ಯತೆ ಮತ್ತು ಸಂಸ್ಕೃತಿಯ ಸಂಬಂಧವಾಗಿದೆ. ಹಿಂದೆ, ನಾವು ನಮ್ಮ ಸಂಬಂಧಗಳನ್ನು ಪ್ರತಿ ದಿಕ್ಕಿನಲ್ಲಿಯೂ ಪುನಃ ಶಕ್ತಿಯುತಗೊಳಿಸಿದ್ದೇವೆ. ಉಭಯ ದೇಶಗಳು ಒಟ್ಟಿಗೆ ನಡೆದಿವೆ ಮತ್ತು ಒಟ್ಟಿಗೆ ಮುನ್ನಡೆದಿವೆ. ಇಂದು, ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಸುದ್ದಿಯನ್ನೂ ಓದಿ: PM Narendra Modi: ಭಾರತ್-ಯುಎಇ ದೋಸ್ತಿ ಜಿಂದಾಬಾದ್ ಎಂದ ಪ್ರಧಾನಿ ಮೋದಿ