Site icon Vistara News

Modi birthday | ಪಿಎಂ ಆದ ಮೇಲೆ ಎಂಟು ವಿಶಿಷ್ಟ ಬರ್ತ್‌ಡೇಗಳು!

modi birthday

ನವ ದೆಹಲಿ : ಶನಿವಾರ ಪ್ರಧಾನ ಮಂತ್ರ ನರೇಂದ್ರ ಮೋದಿ ಅವರಿಗೆ 72 ವರ್ಷ ತುಂಬುತ್ತಿದೆ. ಅವರು ಪ್ರಧಾನಿ ಹುದ್ದೆಗೆ ಏರಿದ ನಂತರದ 8 ವರ್ಷಗಳಲ್ಲಿ ತಮ್ಮ ಜನ್ಮದಿನವನ್ನು ಅವರು ವಿವಿಧ ಸೇವಾ ಕಾರ್ಯಕ್ರಮಗಳನ್ನು ಘೋಷಿಸಲು, ʼಸೇವೆʼಗಳನ್ನು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಅವರು ಜನ್ಮದಿನವನ್ನು ಗುಜರಾತ್‌ನಲ್ಲಿ ತಮ್ಮ ತಾಯಿಯ ಜತೆಗೆ ಸಮಯ ಕಳೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ.

ಈ ವರ್ಷ ಅವರು ತಮ್ಮ ಬರ್ತ್‌ಡೇ ದಿನ, ನಮೀಬಿಯಾದಿಂದ ತರಿಸಲಾದ ಚೀತಾಗಳನ್ನು ಮಧ್ಯಪ್ರದೇಶದ ಕುನೊ ವನ್ಯಧಾಮಕ್ಕೆ ಬಿಡುತ್ತಿದ್ದಾರೆ. ಜತೆಗೆ ಮಹಿಳಾ ಸ್ವಯಂಸೇವಾ ಸಂಘಟನೆಗಳ ಜತೆ ಸಂವಾದ ನಡೆಸಲಿದ್ದಾರೆ.

ಕಳೆದ ಎಂಟು ವರ್ಷಗಳ ಮೋದಿಯವರ ಜನ್ಮದಿನದಂದು ಅವರು ಮಾಡಿದ ಸೇವಾಘೋಷಣೆಗಳು, ಯೋಜನೆಗಳು, ಸಾಧನೆಗಳ ಘೋಷಣೆ ಇತ್ಯಾದಿಗಳು ಇಲ್ಲಿವೆ.

2021: ದೇಶಾದ್ಯಂತ 2.5 ಕೋಟಿ ನಾಗರಿಕರಿಗೆ ಕೋವಿಡ್‌ ವ್ಯಾಕ್ಸಿನ್‌ ನೀಡಲಾಯಿತು.

2020: ಕೋವಿಡ್‌ 19 ಆತಂಕದ ನಡುವೆಯೂ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳನ್ನು ಭಾರತೀಯ ಜನತಾ ಪಕ್ಷ ಘೋಷಿಸಿತು.

2019: ತಮ್ಮ ದಿನವನ್ನು ಪಿಎಂ ಗುಜರಾತ್‌ನಲ್ಲಿ ಕಳೆದರು. ಸರ್ದಾರ್‌ ಸರೋವರ ಅಣೆಕಟ್ಟನ್ನು 138.68 ಮೀಟರ್‌ ಎತ್ತರಕ್ಕೆ ಏರಿಸುವ ಮೈಲಿಗಲ್ಲು ಯೋಜನೆಯ ಸ್ಥಳಕ್ಕೆ ಭೇಟಿ ಕೊಟ್ಟರು.

2018: ತಮ್ಮ ಲೋಕಸಭೆ ಕ್ಷೇತ್ರ ವಾರಾಣಸಿಗೆ ಭೇಟಿ ಕೊಟ್ಟರು. ಶಾಲೆಗೆ ಭೇಟಿ ಕೊಟ್ಟು ಮಕ್ಕಳೊಂದಿಗೆ ಸಮಯ ಕಳೆದರು. ಕಾಶಿ ವಿಶ್ವನಾಥನ ದೇವಾಲಯಕ್ಕೂ ಭೇಟಿ ಕೊಟ್ಟರು.

2017: ಗುಜರಾತ್‌ನ ಸರ್ದಾರ್‌ ಸರೋವರ ಅಣೆಕಟ್ಟು ಉದ್ಘಾಟಿಸಿದರು. ಏರ್‌ಪೋರ್ಸ್‌ನ ಹುತಾತ್ಮ ಮಾರ್ಷಲ್‌ ಅರ್ಜುನ್‌ ಸಿಂಗ್‌ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

2016: ಗುಜರಾತ್‌ನ ನೌಸಾರಿಗೆ ಭೇಟಿ ನೀಡಿ ಅಂಗವಿಕಲರಿಗೆ ಸೌಲಭ್ಯ ಒದಗಿಸುವ ಕಾರ್ಯಕ್ರಮದಲ್ಲಿ ಭಾಗಿಯಾದರು. ಲಿಮ್ಕೇಡಾದಲ್ಲಿ ಬುಡಕಟ್ಟು ಜನಾಂಗದವರೊಂದಿಗೆ ಸಮಯ ಕಳೆದು, ನಂತರ ದಹೋದ್‌ನ ಒಣಭೂಮಿಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆ ಉದ್ಘಾಟಿಸಿದರು.

2015: ಭಾರತ- ಪಾಕಿಸ್ತಾನ ನಡುವಿನ 1965ರ ಯುದ್ಧದ ಸ್ಮಾರಕವಾಗಿ ಶೌರ್ಯಾಂಜಲಿಯಲ್ಲಿ ನಡೆಸಲಾದ ಪ್ರದರ್ಶನಕ್ಕೆ ಭೇಟಿ ನೀಡಿದರು.

2014: ಅಹಮದಾಬಾದ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಸ್ವಾಗತಿಸಿ ಆತಿಥ್ಯ ನೀಡಿದರು.

Exit mobile version