Site icon Vistara News

PFI Banned | ಮುಸ್ಲಿಂ ಸಂಘಟನೆಗಳ ಜತೆ ಚರ್ಚೆ ಬಳಿಕವೇ ಪಿಎಫ್‌ಐ ಬ್ಯಾನ್‌, ಇದು ಮೋದಿ ಮಾಸ್ಟರ್‌ಪ್ಲ್ಯಾನ್‌

Modi

ನವದೆಹಲಿ: ಅದು ರಾಮಮಂದಿರ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪೇ ಇರಬಹುದು, ಜಮ್ಮು-ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ರದ್ದುಗೊಳಿಸಿದ್ದೇ ಇರಬಹುದು, ಪ್ರಮುಖ ತೀರ್ಮಾನ ತೆಗೆದುಕೊಂಡರೆ ಅದರಿಂದ ಉಂಟಾಗುವ ಗಲಭೆಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಚಾಣಾಕ್ಷತನ ಪ್ರದರ್ಶಿಸಿದೆ. ಅದರಂತೆ, ಪಿಎಫ್‌ಐ (PFI Banned) ನಿಷೇಧಕ್ಕೂ ಮೊದಲು ಕೇಂದ್ರ ಸರ್ಕಾರದ ಪ್ರಮುಖರು ಮುಸ್ಲಿಂ ಸಂಘಟನೆಗಳ ಜತೆ ಮಾತುಕತೆ ನಡೆಸಿ, ನಿಷೇಧದ ಕಾರಣ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಟ್ರಬಲ್‌ ಶೂಟರ್‌, ಜೇಮ್ಸ್‌ ಬಾಂಡ್‌ ಖ್ಯಾತಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಎನ್‌ಐಎ ದಾಳಿಗೂ ಐದು ದಿನದ ಮೊದಲೇ ಅಂದರೆ, ಸೆಪ್ಟೆಂಬರ್‌ ೧೭ರಂದು ಪ್ರಮುಖ ಮುಸ್ಲಿಂ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಎನ್‌ಐಎ, ಇ.ಡಿ, ರಾಜ್ಯ ಪೊಲೀಸರು ಸೆ.೨೨ರಂದು ನಡೆಸುವ ದಾಳಿ, ಪಿಎಫ್‌ಐ ವಿರುದ್ಧ ಕ್ರಮ, ಇದರ ಕುರಿತು ಮುಸ್ಲಿಂ ಸಂಘಟನೆಗಳ ಮುಖಂಡರ ಅಭಿಪ್ರಾಯವೇನು ಎಂಬುದನ್ನು ಸಂಗ್ರಹಿಸಿಯೇ ದಾಳಿ, ನಿಷೇಧ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಜಿತ್‌ ದೋವಲ್‌ ನೇತೃತ್ವದಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳು ದಿಯೋಬಂದಿ, ಬರೇಲ್ವಿ, ಸೂಫಿ ಪಂಥದ ವಿವಿಧ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಅವರ ಅಭಿಪ್ರಾಯ ಪಡೆದು, ಕೇಂದ್ರ ಸರ್ಕಾರದ ಉದ್ದೇಶ, ನಡೆದ ಅಕ್ರಮದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸುವುದು, ತಪ್ಪಾಗಿ ಅರ್ಥೈಸದಂತೆ ತಡೆಯಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ | PFI Banned | ಪಿಎಫ್‌ಐ ನಿಷೇಧ ನೆಮ್ಮದಿ ತಂದಿದೆ; ಮರುಹುಟ್ಟದಂತೆ ನೋಡಿಕೊಳ್ಳಿ: ಪೇಜಾವರ ಶ್ರೀ

Exit mobile version