ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಒಗ್ಗಟ್ಟಿನಿಂದ ಇಲ್ಲಿವರೆಗೆ ಕೊರೋನಾ ಸೋಂಕನ್ನು ಸಫಲವಾಗಿ ಎದುರಿಸಿದ್ದೇವಾದರೂ ಇನ್ನೂ ಕೊರೋನಾ ಆತಂಕ ಸಂಪೂರ್ಣವಾಗಿ ಮುಕ್ತಾವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಕುರಿತು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಳೆದ ಎರಡು ವರ್ಷಗಳಲ್ಲಿ ಕೋರೋನಾ ಕುರಿತಂತೆ ನಮ್ಮ 24ನೇ ಸಭೆ ಇದು. ಕೊರೋನಾ ಕಾಲದಲ್ಲಿ ಕೇಂದ್ರ ಹಾಗೂ ರಾಜ್ಯಗಳು ಒಟ್ಟಿಗೆ ಕೆಲಸ ಮಾಡಿದ್ದು ಕೊರೋನಾ ಎದುರಿಸಲು ಪ್ರಮುಖ ಪಾತ್ರ ವಹಿಸಿದೆ. ಎಲ್ಲ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾಗಳು ಹಾಗೂ ಅಧಿಕಾರಿಗಳಿಗೆ ಇದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸುತ್ತೇನೆ.
ಕೊರೋನಾ ಸವಾಲು ಇನ್ನೂ ನಿವಾರಣೆ ಆಗಿಲ್ಲ. ಒಮಿಕ್ರಾನ್ ಹಾಗೂ ಅದರ ಎಲ್ಲ ರೂಪಾಂತರಗಳು ಯಾವ ರೀತಿ ಗಂಭಿರ ಪರಿಸ್ಥಿತಿ ನಿರ್ಮಿಸಬಹುದು ಎಂದು ಯೂರೊಪಿಯನ್ ದೇಶಗಳಲ್ಲಿ ನಾವು ನೋಡುತ್ತಿದ್ದೇವೆ. ಈ ರೂಪಾಂತರಿಗಳಿಂದಾಗಿ ಅನೇಕ ಅಲೆಗಳು ಬಂದಿವೆ. ಆದರೆ ಭಾರತದಲ್ಲಿ ನಮ್ಮೆಲ್ಲರ ಪ್ರಯತ್ನದಿಂದ ನಿಯಂತ್ರಿಸಿದ್ದೇವೆ ಎಂದರು.
ಇದನ್ನೂ ಓದಿ | ಮುಂಬೈನಲ್ಲಿ ಕೊರೋನಾ ಹೊಸ ರೂಪಾಂತರಿ ಪತ್ತೆ!: ಮಹಿಳೆಯಲ್ಲಿ ಕಾಣಿಸಿಕೊಂಡ XE
ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ, ನಾವು ಜಾಗರೂಕರಾಗಿರಬೇಕು. ಕೆಲವು ತಿಂಗಳ ಹಿಂದೆ ಬಂದ ಅಲೆಯಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ದೇಶದ ಎಲ್ಲ ಜನರೂ ಈ ಅಲೆಯಿಂದ ಹೊರಬಂದಿದ್ದಾರೆ. ಕಳೆದ ಎರಡು ವರ್ಷದಲ್ಲಿ ಆಕ್ಸಿಜನ್ ಸರಬರಾಜಿನಿಂದ ಹಿಡಿದು ಆರೋಗ್ಯ ಮೂಲಸೌಕರ್ಯದವರೆಗೆ ಅನೇಕ ಸುಧಾರಣೆಯನ್ನು ದೇಶ ಕಂಡಿದೆ. ಯಾವುದೇ ರಾಜ್ಯದಲ್ಲಿ ಸ್ಥಿತಿ ಅನಿಯಂತ್ರಿತ ಎಂದು ಕಂಡುಬಂದಿಲ್ಲ. ಕೋವಿಡ್ ಲಸಿಕೆಯ ಪಾತ್ರ ಇದರಲ್ಲಿ ಪ್ರಮುಖವಾಗಿದೆ.
ದೇಶದೆಲ್ಲೆಡೆಯೂ ಲಸಿಕೆಯು ಎಲ್ಲ ಭಾರತೀಯರನ್ನೂ ತಲುಪಿದೆ. ಭಾರತದ 96% ವಯಸ್ಕರು ಕರೊನಾ ಮೊದಲ ಡೋಸ್ ಪಡೆದಿದ್ದಾರೆ, 15 ವರ್ಷದೊಳಗಿನ 85% ಜನರಿಗೆ ಎರಡನೇ ಡೋಸ್ ಸಹ ನೀಡಲಾಗಿದೆ. ಕೊರೋನಾದಿಂದ ಬಚಾವಾಗಲು ವ್ಯಾಕ್ಸಿನ್ ಅತಿ ದೊಡ್ಡ ರಕ್ಷಣೆ ಎಂದು ತಜ್ಞರು ಹೇಳಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | ಮಾಸ್ಕ್ ಧರಿಸದಿದ್ದರೆ ದಂಡ ಎಂದ ಸರ್ಕಾರ: ಜನರು ಮಾತ್ರ Don’t Care