ಅಮೃತಸರ: ಅಮೃತಸರ ಪ್ರದೇಶ ವ್ಯಾಪ್ತಿಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಭದ್ರತಾ ಪಡೆ(ಬಿಎಸ್ಎಫ್) ಪಾಕಿಸ್ತಾನಿ ಡ್ರೋನ್ (Pakistan Drone) ಅನ್ನು ಹೊಡೆದುರುಳಿಸಿದೆ. ಈ ಡ್ರೋನ್ ಶಂಕಾಸ್ಪದ 12 ಕೆಜಿ ಮಾದಕದ್ರವ್ಯ ವಸ್ತುಗಳನ್ನು ಕ್ಯಾರಿ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ನೋದಕಗಳನ್ನು ಹೊಂದಿರುವ ಕ್ವಾಡ್-ಕಾಪ್ಟರ್ ಡ್ರೋನ್ ಅನ್ನು ಬಿಎಸ್ಎಫ್‌ನ 22 ಬೆಟಾಲಿಯನ್ ನಾಶ ಮಾಡಿದೆ. ಕಳೆದ 9 ತಿಂಗಳಲ್ಲಿ ಭಾರತೀಯ ಭದ್ರತಾ ಪಡೆಗಳು 170 ಡ್ರೋನ್‌ಗಳನ್ನು ಹೊಡೆದುರುಳಿಸಿವೆ.
ಭಾನುವಾರ ನಡೆದ ಈ ಘಟನೆಯು ಕಳೆದ ಮೂರು ದಿನಗಳಲ್ಲಿ ಗಡಿಯಲ್ಲಿ ಸಂಭವಿಸಿದ ಮೂರನೇ ಘಟನೆಯಾಗಿದೆ. ಹೊಡೆದುರುಳಿಸಲಾದ ಈ ಡ್ರೋನ್‌ನಲ್ಲಿ ಹಸಿರು ಬಣ್ಣದ ಪಾಕೆಟ್ ಇದ್ದು, ಅದರಲ್ಲಿದ್ದ 2 ಕೆಜಿ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು ಅಕ್ಟೋಬರ್ 13 ಮತ್ತು 14ರಂದು ಬಿಎಸ್ಎಫ್, ಪಂಜಾಬ್‌ನ ಗುರುದಾಸ್ಪುರ್ ಗಡಿಯಲ್ಲಿ ಡ್ರೋನ್‌ವೊಂದನ್ನು ಹೊಡೆದುರುಳಿಸಿತ್ತು.
ಪಾಕಿಸ್ತಾನದಿಂದ ಭಾರತದ ಪ್ರದೇಶದೊಳಗೆ ಅಕ್ರಮವಾಗಿ ನುಗ್ಗುತ್ತಿದ್ದ ಡ್ರೋನ್‌ಗಳನ್ನು ಬಿಎಸ್ಎಫ್ ಹೊಡೆದುರುಳಿಸುತ್ತಾ ಬಂದಿದೆ. ಈ ವರೆಗೆ ಅಂತಾರಾಷ್ಟ್ರೀಯ ಗಡಿಯಲ್ಲಿ 190 ಡ್ರೋನ್‌ಗಳ ಹಾರಾಡುವುದನ್ನು ಗಮನಿಸಿದೆ. ಈ ಎಲ್ಲ ಡ್ರೋನ್‌ಗಳು ನೆರೆಯ ಪಾಕಿಸ್ತಾನದಿಂದ ಭಾರತದೊಳಕ್ಕೆ ಪ್ರವೇಶ ಪಡೆಯುತ್ತಿದ್ದವು.
ಕಳೆದ 9 ತಿಂಗಳಲ್ಲಿ ಭದ್ರತಾ ಪಡೆಗಳು 190 ಡ್ರೋನ್‌ಗಳು ಅಕ್ರಮವಾಗಿ ಭಾರತದೊಳಕ್ಕೆ ನುಸುಳುವ ಪ್ರಯತ್ನ ಮಾಡಿವೆ. ಜನವರಿಯಿಂದ ಇಲ್ಲಿವರೆಗೆ ಇಂಡೋ-ಪಾಕ್ ಗಡಿಯಲ್ಲಿ ಮಾನವರಹಿತ ಡ್ರೋನ್‌ಗಳು ಹಾರಾಡುವುದನ್ನು ಗಮನಿಸಲಾಗಿದೆ. ಈ ಪೈಕಿ ಹಲವು ಭಾರತದೊಳಕ್ಕೆ 170 ಡ್ರೋನ್‌ಗಳು ನುಗ್ಗುವ ಪ್ರಯತ್ನ ಮಾಡಿವೆ. ಅಂಥ ಡ್ರೋನ್‌ಗಳನ್ನು ನಾಶ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | Drone terror | ಕಾಶ್ಮೀರ ಗಡಿ ಭಾಗದಲ್ಲಿ ಪಾಕಿಸ್ತಾನಿ ಡ್ರೋನ್ ಹಾರಾಟ, ಭದ್ರತಾ ಪಡೆಗಳ ದೌಡು