Site icon Vistara News

PM Modi Speech In Rajya Sabha: ನೀವು ಕೆಸರೆರಚಿದಷ್ಟು ಕಮಲ ಅರಳುತ್ತಲೇ ಇರುತ್ತದೆ, ಮೋದಿ ವಾಗ್ಝರಿ

Narendra Modi Speech In Rajya Sabha

#image_title

ನವದೆಹಲಿ: ಲೋಕಸಭೆಯಂತೆ ರಾಜ್ಯಸಭೆಯಲ್ಲೂ (PM Modi Speech In Rajya Sabha) ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ಝರಿ ಹರಿಸಿದ್ದಾರೆ. ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ ಅವರು, “ನೀವು ಎಷ್ಟು ಕೆಸರೆರಚುತ್ತೀರೋ ಅಷ್ಟು ಕಮಲ ಅರಳುತ್ತದೆ” ಎಂದು ಹೇಳಿದ್ದಾರೆ.

“ಸದನದಲ್ಲಿರುವ ಸದಸ್ಯರಿಗೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ನಮ್ಮನ್ನು ಎಷ್ಟು ಬೇಕಾದರೂ ಟೀಕಿಸಿ, ಎಷ್ಟಾದರೂ ಹೀಯಾಳಿಸಿ. ಆದರೆ, ನೀವು ಕೆಸರೆರಚಿದಷ್ಟೂ ಕಮಲ ಅರಳುತ್ತದೆ ಎಂದಷ್ಟೇ ಹೇಳಲು ಇಷ್ಟಪಡುತ್ತೇನೆ” ಎಂದು ಹೇಳುವ ಮೂಲಕ, ನೀವು ಎಷ್ಟಾದರೂ ಟೀಕಿಸಿ, ಜನಬೆಂಬಲ ನಮ್ಮ ಪರವಾಗಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದರು.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಡವರ ಕಲ್ಯಾಣವಾಗುತ್ತಿದೆ. ಮೂರ್ನಾಲ್ಕು ವರ್ಷದಲ್ಲಿಯೇ ೧೧ ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ೪೮ ಕೋಟಿ ಜನಧನ್‌ ಖಾತೆಗಳನ್ನು ತೆರೆಯಲಾಗಿದೆ. ಕೋಟ್ಯಂತರ ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ಹೆಣ್ಣುಮಕ್ಕಳ ರಕ್ಷಣೆಗೆ ಭಾಷ್ಯ ಬರೆಯಲಾಗಿದೆ” ಎಂದು ಸರ್ಕಾರದ ಸಾಧನೆಗಳನ್ನು ತಿಳಿಸಿದರು.

ಇದನ್ನೂ ಓದಿ: Pm Modi Rajya Sabha Speech Live: ದೇಶದ ಜನರು ಕಾಂಗ್ರೆಸ್​ನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ: ಪ್ರಧಾನಿ ಮೋದಿ

Exit mobile version