Site icon Vistara News

Mother Dairy: ಬಳಕೆದಾರರ ಮೇಲೆ ‘ಮದರ್ ಡೇರಿ’ ಮಮತೆ, ಅಡುಗೆ ಎಣ್ಣೆ ದರದಲ್ಲಿ ಭಾರೀ ಇಳಿಕೆ!

Dhara Edible Oils

#image_title

ನವದೆಹಲಿ: ದಿಲ್ಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಪ್ರಮುಖ ಹಾಲು ಪೂರೈಕೆ ಕಂಪನಿಯಾಗಿರುವ ಮದರ್ ಡೇರಿ(Mother Dairy), ಧಾರಾ ಬ್ರಾಂಡ್‌ನಡಿ ಮಾರಾಟ ಮಾಡಲಾಗುತ್ತಿರುವ ಅಡುಗೆ ಎಣ್ಣೆ ಬೆಲೆಯನ್ನು (Edible Oils) ಕಡಿತ ಮಾಡಿರುವುದಾಗಿ ಹೇಳಿದೆ. ಪ್ರತಿ ಲೀಟರ್ಗೆ 10 ರೂ. ಇಳಿಕೆ ಮಾಡಿರುವುದಾಗಿ ತಿಳಿಸಿದೆ. ಈ ಪರಿಷ್ಕರಣೆ ಬೆಲೆಯು ಮುಂದಿನವಾರದಿಂದ ಜಾರಿಯಾಗಲಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರುವುದಾಗಿ ಮದರ್ ಡೇರಿ ಹೇಳಿದೆ.

ಪ್ರಮುಖ ಖಾದ್ಯ ತೈಲಗಳ ದರವನ್ನು ಲೀಟರ್‌ಗೆ 8ರಿಂದ 12 ರೂ.ವರೆಗೂ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವು ಕಳೆದ ವಾರವಷ್ಟೇ ಎಲ್ಲ ಖಾದ್ಯ ತೈಲ ಕಂಪನಿಗಳಿಗೆ ಸೂಚನೆ ನೀಡಿತ್ತು.

ಅಂತಾರಾಷ್ಟ್ರೀಯವಾಗಿ ಖಾದ್ಯ ತೈಲ ಬೆಲೆಯಲ್ಲಿ ನಿರಂತರ ಇಳಿಕೆ ಮತ್ತು ಸಾಸಿವೆಯಂತಹ ದೇಶೀಯ ಬೆಳೆಗಳ ಉತ್ತಮ ಲಭ್ಯತೆಯ ಕಾರಣದಿಂದಾಗಿ ಧಾರಾ ಖಾದ್ಯ ತೈಲಗಳ ಎಲ್ಲಾ ಮಾದರಿ ಎಣ್ಣೆಯ ಗರಿಷ್ಠ ಚಿಲ್ಲರೆ ಬೆಲೆಯನ್ನು ಲೀಟರ್‌ಗೆ 10 ರೂ. ಕಡಿಮೆ ಮಾಡಲಾಗುತ್ತಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಪರಿಷ್ಕೃತ ಎಂಆರ್‌ಪಿಯೊಂದಿಗೆ ದಾಸ್ತಾನು ಮುಂದಿನವಾರ ಮಾರುಕಟ್ಟೆಗೆ ಪೂರೈಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Prices fall | ಅಕ್ಕಿ, ಆಲೂಗಡ್ಡೆ, ಖಾದ್ಯ ತೈಲ ದರದಲ್ಲಿ 25% ಇಳಿಕೆ

ಧಾರಾ ಸಂಸ್ಕರಿತ ಸೋಯಾಬಿನ್ ತೈಲ ಪರಿಷ್ಕರಣೆ ದರವು ಲೀ.ಗೆ 140 ರೂ. ಇರಲಿದೆ. ಇದೇ ವೇಳೆ, ಧಾರಾ ರಿಫೈನ್ಡ್ ರೈಲ್ ಬ್ರಾನ್ ಆಯಿಲ್ ಬೆಲೆ 160 ರೂ. ಇರಲಿದೆ. ಧಾರಾ ರಿಫೈನ್ಡ್ ವೆಜೀಟಬಲ್ ಆಯಿಲ್ ಈಗ ಲೀ.ಗೆ 200 ಇರಲಿದೆ. ಧಾರಾ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ಬೆಲೆಯು ಈಗ ಲೀಟರ್‌ಗೆ 150 ರೂ. ಇರಲಿದೆ. ಹಾಗೆಯೇ ಶೇಂಗಾ ಎಣ್ಣೆ ಬೆಲೆ ಲೀಟರ್‌ಗೆ 230 ರೂ. ಇರಲಿದೆ ಎಂದು ಮದರ್ ಡೇರಿ ಹೇಳಿದೆ. ಧಾರಾ ಕಚಿ ಘನಿ ಸಾಸಿವೆ ಎಣ್ಣೆ ಪ್ರತಿ ಲೀಟರ್‌ಗೆ 160 ಮತ್ತು ಧಾರಾ ಸಾಸಿವೆ ಎಣ್ಣೆ ಲೀಟರ್‌ಗೆ 158 ರೂ.ಗೆ ದೊರೆಯಲಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version