Site icon Vistara News

CBRE South Asia: ಎಂಎಸ್ಎಂಇ‌ ಬೆಳವಣಿಗೆ; ದೇಶದ ಅಗ್ರ 3 ರಾಜ್ಯಗಳಲ್ಲಿ ಉತ್ತರ ಪ್ರದೇಶ!

MSME growth; Uttar Pradesh among the top 3 states of the country Says Report

ನವದೆಹಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (cm yogi adityanath) ನೇತೃತ್ವದಲ್ಲಿ ಉತ್ತರ ಪ್ರದೇಶವು (Uttar Pradesh) ನಿಧಾನವಾಗಿ ಪ್ರಗತಿಯ ಹಳಿಗೆ ಬರುತ್ತಿದೆ. ದೇಶದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ(Micro, Small & Medium Enterprises – MSMEs) ವಲಯದ ಬೆಳವಣಿಗೆ ಕೊಡುಗೆ ನೀಡಿದ ದೇಶದ ಅಗ್ರ ಮೂರು ರಾಜ್ಯಗಳ ಪೈಕಿ ಉತ್ತರ ಪ್ರದೇಶವೂ ಒಂದಾಗಿದೆ. ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾದ ಸಿಬಿಆರ್‌ಇ ಸೌತ್ ಏಷ್ಯಾ (CBRE South Asia Report) ಪ್ರಕಟಿಸಿರುವ ವರದಿಯಲ್ಲಿ ಈ ಮಾಹಿತಿಯು ಬಹಿರಂಗವಾಗಿದೆ.

ಎಂಎಸ್‌ಎಂಇಎಸ್: ಅನ್ಲೀಶಿಂಗ್ ದಿ ಎಂಜಿನ್ಸ್ ಆಫ್ ಎಕನಾಮಿಕ್ ಪ್ರಾಸ್ಪೆರಿಟಿ ಶೀರ್ಷಿಕೆಯಡಿ ತನ್ನ ವರದಿಯನ್ನು ಸಿಬಿಆರ್‌ಇ ಸೌತ್ ಏಷ್ಯಾ ಪ್ರಕಟಿಸಿದೆ. ಭಾರತದ ಆರ್ಥಿಕತೆಯನ್ನು ರೂಪಿಸುವಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ಣಾಯಕ ಕೊಡುಗೆಗಳ ಬಗ್ಗೆ ಈ ವರದಿಯಲ್ಲಿ ಒತ್ತಿ ಹಳಲಾಗಿದೆ.

ವರದಿಯ ಪ್ರಕಾರ, ಉತ್ತರ ಪ್ರದೇಶ ಭಾರತದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯಕ್ಕೆ ಮಹತ್ವದ ಕೊಡುಗೆಯಾಗಿ ಭಾರತದ ಅಗ್ರ ಮೂರು ರಾಜ್ಯಗಳಲ್ಲಿ ಹೊರಹೊಮ್ಮಿದೆ. ದೇಶದ ಒಟ್ಟು ಎಂಎಸ್ಎಇ ಅಭಿವೃದ್ಧಿಯಲ್ಲಿ ಶೇ.9ರಷ್ಟು ಪಾಲನ್ನು ಉತ್ತರ ಪ್ರದೇಶವು ಹೊಂದಿದೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಒಟ್ಟಾರೆಯಾಗಿ ದೇಶದ ಎಂಎಸ್‌ಎಂಇಗಳ ಅಭಿವೃದ್ದಿಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಿವೆ ಎಂಬುದನ್ನು ಈ ವರದಿಯಲ್ಲಿ ತಿಳಿಸಲಾಗಿದೆ.

ದೇಶದ ಎಂಎಸ್‌ಎಂಇಗಳ ಅಭಿವೃದ್ಧಿಯಲ್ಲಿ ಈ ಮೂರೂ ರಾಜ್ಯಗಳ ಪಾಲು ಶೇ.40ರಷ್ಟಿದೆ. ಇದು ದೇಶಾದ್ಯಂತ ವೈವಿಧ್ಯಮಯ ಹಂಚಿಕೆಯ ಮಹತ್ವ ಹೇಳುತ್ತದೆಯಲ್ಲದೇ ಈ ವಲಯದ ಒಟ್ಟಾರೆ ಬೆಳವಣಿಗೆ ಮತ್ತು ಆರ್ಥಿಕ ಪ್ರಭಾವಕ್ಕೆ ಈ ರಾಜ್ಯಗಳ ಮಹತ್ವದ ಕೊಡುಗೆಯ ಬಗ್ಗೆ ತಿಳಿಸುತ್ತದೆ.

ಉತ್ತರ ಪ್ರದೇಶದಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಗಳಿಗೆ ಉತ್ತೇಜನ ನೀಡಲು ಅಲ್ಲಿನ ಸರ್ಕಾರವು ಉದ್ಯಮ್ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಉಪಕ್ರಮವೂ ಉತ್ತರ ಪ್ರದೇಶದ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ ಎಂದು ವರದಿಯಲ್ಲಿ ತಿಳಿಸಿದೆ. ತಾಂತ್ರಿಕ ಪ್ರಗತಿಗಳು ಮತ್ತು ಸಹಯೋಗದ ಪಾಲುದಾರಿಕೆಗಳಿಂದ ನಡೆಸಲ್ಪಡುವ ಭಾರತದ ಎಂಎಸ್ಎಂಇ‌ಗಳಿಂದ ಹಣಕಾಸು ಕ್ಷೇತ್ರದಲ್ಲಾಗುತ್ತಿರುವ ಗಮನಾರ್ಹ ಬದಲಾವಣೆಗಳನ್ನು ವರದಿಯು ಪರಿಶೀಲಿಸಿದೆ.

ಉತ್ತರ ಪ್ರದೇಶ ಆಗ್ರಾ, ಕಾನ್ಪುರ್, ವಾರಾಣಸಿ, ಲಕ್ನೋ, ಮೀರುತ್ ಮತ್ತು ಘಾಜಿಯಾಬಾದ್ ನಗರಗಳು ಅತಿ ಸಣ್ಣ, ಸಣ್ಣ ಮತ್ತು ಮಧ್ಯ ಉದ್ಯಮಗಳ ಕ್ಲಸ್ಟರ್‌ಗಳಾಗಿ ಬದಲಾಗುತ್ತಿವೆ. ಈ ಎಲ್ಲ ನಗರಗಳು ಉದ್ಯಮ್ ಸ್ಕೀನ್‌ನಡಿ ನೋಂದಣಿ ಕೂಡ ಮಾಡಿಕೊಂಡಿವೆ. ಉದ್ಯಮ್ ಸ್ಕೀಮ್ ಜತೆಗೆ ಉತ್ತರ ಪ್ರದೇಶವು ಸರ್ಕಾರವು ಸಣ್ಣ ಉದ್ಯಮಗಳ ಉತ್ತೇಜನಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಎಲ್ಲ ಕಾರಣದಿಂದ ದೇಶದಲ್ಲಿ ಈ ವಲಯದಲ್ಲಿ ಉತ್ತರ ಪ್ರದೇಶ ಸರ್ಕಾರವು ನೀಡುವಂತಾಗಿದೆ.

ಈ ಸುದ್ದಿಯನ್ನೂ ಓದಿ: Stray Cows In UP: ಉತ್ತರ ಪ್ರದೇಶದಲ್ಲಿ ವಿಧವೆಯರು, ಬಡವರಿಗಿಂತ ಬೀದಿ ಹಸುಗಳಿಗೆ ಹೆಚ್ಚು ಹಣ ಖರ್ಚು!

Exit mobile version