Site icon Vistara News

Mukesh Ambani family : ಜಿಯೊ ಅಧ್ಯಕ್ಷ ಆಕಾಶ್‌ ಅಂಬಾನಿ, ಶ್ಲೋಕಾ ಮೆಹ್ತಾ ದಂಪತಿಗೆ ಎರಡನೇ ಮಗು ಜನನ

akash-ambani-shloka-mehta

#image_title

ಮುಂಬಯಿ: ರಿಲಯನ್ಸ್‌ ಜಿಯೊ ಅಧ್ಯಕ್ಷ ಆಕಾಶ್‌ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ದಂಪತಿಗೆ ಎರಡನೇ ಮಗುವಿನ ಜನನವಾಗಿದೆ. ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ದಂಪತಿಗೆ ಮೊದಲ ಮಗ ಪೃಥ್ವಿ ಆಕಾಶ್‌ ಅಂಬಾನಿ ಇದ್ದಾನೆ.

ಕಳೆದ ಏಪ್ರಿಲ್‌ನಲ್ಲಿ ನೀತಾ ಮುಕೇಶ್‌ ಅಂಬಾನಿ ಸಾಂಸ್ಕೃತಿಕ ಕೇಂದ್ರ ( Nita Mukesh Ambani Cultural Centre) ಉದ್ಘಾಟನೆಯ ವೇಳೆ ಶ್ಲೋಕಾ ಗರ್ಭಿಣಿಯಾಗಿರುವುದನ್ನು ಘೋಷಿಸಲಾಗಿತ್ತು.

ಕಳೆದ ಮೇ 24ರಂದು ಮುಕೇಶ್‌ ಅಂಬಾನಿ ಅವರು ಆಕಾಶ್‌, ಶ್ಲೋಕಾ ಮತ್ತು ಮೊಮ್ಮಗ ಪೃಥ್ವಿ ಜತೆ ಮುಂಬಯಿನ ಸಿದ್ದಿವಿನಾಯಕ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ದಂಪತಿ 2019ರಲ್ಲಿ ಮದುವೆಯಾಗಿದ್ದರು.

ಇದನ್ನೂ ಓದಿ: Mukesh Ambani : ಫೋರ್ಬ್ಸ್‌ 2023ರ ಪಟ್ಟಿ ಬಿಡುಗಡೆ, ವಿಶ್ವದ 9ನೇ ಅತಿ ಶ್ರೀಮಂತ ಮುಕೇಶ್‌ ಅಂಬಾನಿ, ಅದಾನಿ 24ಕ್ಕೆ ಕುಸಿತ

ಮುಕೇಶ್‌ ಅಂಬಾನಿಯವರ ಮೂವರು ಮಕ್ಕಳಲ್ಲಿ ಆಕಾಶ್‌ ಮತ್ತು ಇಶಾ ಅಂಬಾನಿ ಅವಳಿ ಮಕ್ಕಳಾಗಿದ್ದರೆ, ಕಿರಿಯ ಪುತ್ರ ಅನಂತ್‌ ಅಂಬಾನಿ. ಆಕಾಶ್‌ ಅಂಬಾನಿ ರಿಲಯನ್ಸ್‌ ಸಮೂಹದ ಟೆಲಿಕಾಂ ಉದ್ದಿಮೆಯ (ರಿಲಯನ್ಸ್‌ ಜಿಯೊ) ಸಾರಥ್ಯವನ್ನು ವಹಿಸಿದ್ದಾರೆ. ಇಶಾ ಅಂಬಾನಿ ರಿಟೇಲ್‌ ಬಿಸಿನೆಸ್‌ ನೇತೃತ್ವ ವಹಿಸಿದ್ದಾರೆ. ಅನಂತ್‌ ಅಂಬಾನಿ ಹೊಸ ಇಂಧನ ಬಿಸಿನೆಸ್‌ ನೇತೃತ್ವ ವಹಿಸಿದ್ದಾರೆ. ಹಾಗೂ ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ ಎಂದು ಮುಕೇಶ್‌ ಅಂಬಾನಿ ಅವರು ನೆಮ್ಮದಿಯಲ್ಲಿದ್ದಾರೆ.

” ನಮ್ಮ ಮುಂದಿನ ಪೀಳಿಗೆಯ ನಾಯಕರು ತಮ್ಮ ಬಿಸಿನೆಸ್‌ ಅನ್ನು ಆತ್ಮವಿಶ್ವಾಸದಿಂದ ನಿರ್ವಹಿಸುತ್ತಿದ್ದಾರೆ. ಆಕಾಶ್‌ ಮತ್ತು ಇಶಾ ಅನುಕ್ರಮವಾಗಿ ರಿಲಯನ್ಸ್‌ ಜಿಯೊ ಮತ್ತು ರಿಲಯನ್ಸ್‌ ರಿಟೇಲ್‌ನಲ್ಲಿ ನಾಯಕತ್ವ ವಹಿಸಿದ್ದಾರೆ. ಅನಂತ್‌ ಕೂಡ ಅತ್ಯಂತ ಉತ್ಸಾಹದಿಂದ ಹೊಸ ಇಂಧನ ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ಮುಕೇಶ್‌ ಅಂಬಾನಿ ಈ ಹಿಂದೆ ಕಂಪನಿಯ ವಾರ್ಷಿಕ ಸಭೆಯಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಧೀರೂಭಾಯಿಯವರ ಉತ್ಸಾಹ

ನಾನು ಧೀರೂಭಾಯಿ ಅವರ ಉತ್ಸಾಹವನ್ನು ಆಕಾಶ್‌, ಇಶಾ ಮತ್ತು ಅನಂತ್‌ ಅವರಲ್ಲಿ ಕಾಣುತ್ತಿದ್ದೇನೆ. ಹೀಗಾಗಿ ಭವಿಷ್ಯದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಪ್ರಬಲ ನಾಯಕರ ಸಾರಥ್ಯದಲ್ಲಿ ಮುನ್ನಡೆಯಲಿದೆ. ಬೆಳೆಯುವ ಯಾವುದೇ ಸಮೂಹಕ್ಕೆ ಇಂಥ ಉತ್ಸಾಹಿ ಯುವ ನಾಯಕತ್ವದ ಅಗತ್ಯ ಇರುತ್ತದೆ. ರಿಲಯನ್ಸ್‌ ಸಮೂಹ ಅಂಥ ಯುವ ನಾಯಕತ್ವದೊಂದಿಗೆ ಭವಿಷ್ಯದಲ್ಲಿ ಮತ್ತಷ್ಟು ಉಜ್ವಲವಾಗಿ ಬೆಳೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅಂದು ಬಣ್ಣಿಸಿದ್ದರು.

Exit mobile version