ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited) ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರು ಮತ್ತೆ ಏಷ್ಯಾದಲ್ಲೇ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಅಷ್ಟೇ ಅಲ್ಲ, ಅವರು 100 ಶತಕೋಟಿ ಡಾಲರ್ ಕ್ಲಬ್ ಕೂಡ ಸೇರಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಗೌತಮ್ ಅದಾನಿ (Gautam Adani) ಅವರು ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿದ್ದರು. ಈಗ ಈ ಸ್ಥಾನವನ್ನು ಮುಕೇಶ್ ಅಂಬಾನಿ ಮತ್ತೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ರಿಲಯನ್ಸ್ ಕಂಪನಿಯು ಹೆಚ್ಚು ಲಾಭ ಗಳಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ಮುಕೇಶ್ ಅಂಬಾನಿ ಅವರು 8.7 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಜಗತ್ತಿನಲ್ಲೇ 11ನೇ ಶ್ರೀಮಂತ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ ಎಂದು ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಸ್ ಪಟ್ಟಿ ಬಿಡುಗಡೆ ಮಾಡಿದೆ. ಅಲ್ಲದೆ, ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನಲ್ಲಿ 100 ಶತಕೋಟಿ ಡಾಲರ್ ಆಸ್ತಿ ಹೊಂದಿದ 12 ಉದ್ಯಮಿಗಳಿದ್ದು, ಇವರಲ್ಲಿ ಮುಕೇಶ್ ಅಂಬಾನಿಯೂ ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
After 6% rally in just 2 days shri Mukesh ambani again become richest man in asia / india .
— SRU. ALLAHBADIA 👸 (@sru_Virat) January 12, 2024
Mukesh Ambani : $102 billion
Gautam adani : $ 97 billion#nifty #reliance
ಮುಕೇಶ್ ಅಂಬಾನಿ ಅವರು 2021ರಲ್ಲಿಯೇ 100 ಶತಕೋಟಿ ಡಾಲರ್ ಆಸ್ತಿ ಹೊಂದಿದ ಉದ್ಯಮಿ ಎನಿಸಿದ್ದರು. ಆದರೆ, ನಂತರದಲ್ಲಿ ಅವರ ಆಸ್ತಿಯ ಮೌಲ್ಯ ಕುಸಿದಿತ್ತು. ಇನ್ನು 240.9 ಶತಕೋಟಿ ಡಾಲರ್ ಆಸ್ತಿ (ಸುಮಾರು 20 ಲಕ್ಷ ಕೋಟಿ ರೂ.) ಹೊಂದಿರುವ ಎಲಾನ್ ಮಸ್ಕ್ ಅವರು ಫೊರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಬರ್ನಾರ್ಡ್ ಅರ್ನಾಲ್ಟ್, ಜೆಫ್ ಬೆಜೋಸ್, ಲ್ಯಾರಿ ಎಲಿಸನ್ ಹಾಗೂ ಮಾರ್ಕ್ ಜುಕರ್ ಬರ್ಗ್ ಇದ್ದಾರೆ. ಗೌತಮ್ ಅದಾನಿ ಅವರು ಜಗತ್ತಿನ 16ನೇ ಶ್ರೀಮಂತ ಎನಿಸಿದ್ದಾರೆ. ಇವರ ಆಸ್ತಿಯ ಮೌಲ್ಯ 79.4 ಶತಕೋಟಿ ಡಾಲರ್ (6.59 ಲಕ್ಷ ಕೋಟಿ ರೂ.) ಇದೆ.
ಇದನ್ನೂ ಓದಿ: Gujarat Summit: ಮೋದಿಯನ್ನು ಶ್ಲಾಘಿಸಿದ ಅಂಬಾನಿ; ಭಾರತದ ಮೊದಲ UAVಗೆ ಚಾಲನೆ
ರಿಲಯನ್ಸ್ ಇಂಡಸ್ಟ್ರೀಸ್ 2005ರಲ್ಲಿ ಚಿಲ್ಲರೆ (ರೀಟೇಲ್) ವಲಯವನ್ನು ಪ್ರವೇಶಿಸಿತು ಮತ್ತು ಈಗ ದೇಶದಲ್ಲಿ ಕಿರಾಣಿ ಅಂಗಡಿಗಳು, ಹೈಪರ್‌ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ಚಿಲ್ಲರೆ ವ್ಯಾಪಾರದ ಅತಿದೊಡ್ಡ ಆಪರೇಟರ್ ಆಗಿದೆ. 2016ರಲ್ಲಿ ಇದು ಟೆಲಿಕಾಂ ಸೇವೆ ಜಿಯೋವನ್ನು ಪ್ರಾರಂಭಿಸಿತು, ಇದು ಶೀಘ್ರವಾಗಿ ಭಾರತದಲ್ಲಿ ಅತಿದೊಡ್ಡ ಆಪರೇಟರ್ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆಪರೇಟರ್ ಆಯಿತು. ಇವತ್ತಿಗೆ ರಿಲಯನ್ಸ್ ಹೊಸ ಇಂಧನ ವ್ಯವಹಾರಗಳಿಗಾಗಿ ಗಿಗಾ-ಸ್ಕೇಲ್ (ಬೃಹತ್ ಪ್ರಮಾಣದ) ಕಾರ್ಖಾನೆಗಳನ್ನು ನಿರ್ಮಿಸುತ್ತಿದೆ ಮತ್ತು ಹಣಕಾಸು ಸೇವೆ ಕ್ಷೇತ್ರದಲ್ಲೂ ಮುನ್ನುಗ್ಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ