Site icon Vistara News

ರಿಲಯನ್ಸ್‌ ರಿಟೇಲ್‌ ಅಧ್ಯಕ್ಷರಾಗಿ ಮುಕೇಶ್‌ ಅಂಬಾನಿ ಪುತ್ರಿ ಇಶಾ ಅಂಬಾನಿ ನೇಮಕ

Isha ambani

ಮುಂಬಯಿ: ರಿಲಯನ್ಸ್‌ ರಿಟೇಲ್‌ ಕಂಪನಿಯ ಅಧ್ಯಕ್ಷರಾಗಿ ಮುಕೇಶ್‌ ಅಂಬಾನಿಯವರ ಪುತ್ರಿ ಇಶಾ ಅಂಬಾನಿ ಅವರು ನೇಮಕವಾಗಿದ್ದಾರೆ. ಇದರೊಂದಿಗೆ ಮುಕೇಶ್‌ ಅಂಬಾನಿ ತಮ್ಮ ಮಕ್ಕಳಿಗೆ ಅಧಿಕಾರ ಹಸ್ತಾಂತರದ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.

ಮುಕೇಶ್‌ ಅಂಬಾನಿ ಅವರು ರಿಲಯನ್ಸ್‌ ಜಿಯೊದ ಅಧ್ಯಕ್ಷರಾಗಿ ಪುತ್ರ ಆಕಾಶ್‌ ಅಂಬಾನಿ ಅವರನ್ನು ನೇಮಕ ಮಾಡಿದ ಬೆನ್ನಲ್ಲೇ, ಪುತ್ರಿ ಇಶಾ ಅಂಬಾನಿ ಅವರನ್ನು ರಿಲಯನ್ಸ್‌ ರಿಟೇಲ್‌ಗೆ ಅಧ್ಯಕ್ಷರನ್ನಾಗಿಸಿದ್ದಾರೆ.

ಇಶಾ ಅಂಬಾನಿ ರಿಲಯನ್ಸ್‌ ರಿಟೇಲ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಶಾ ಅಂಬಾನಿ (೩೦) ಹಾಗೂ ಆಕಾಶ್‌ ಅಂಬಾನಿ ಅವಳಿ ಮಕ್ಕಳಾಗಿದ್ದಾರೆ. ಇವರ ತಮ್ಮ ಅನಂತ್‌ ಅಂಬಾನಿ (೨೭). ಮುಕೇಶ್‌ ಅಂಬಾನಿ- ನೀತಾ ಅಂಬಾನಿ ಅವರ ಈ ಮೂವರು ಮಕ್ಕಳಿಗೆ ರಿಲಯನ್ಸ್‌ ಗ್ರೂಪ್‌ನ ಅಧಿಕಾರ ಹಸ್ತಾಂತರ ಮುಂದುವರಿಯಲಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಕಚ್ಚಾ ತೈಲ ಸಂಸ್ಕರಣೆ, ರಿಟೇಲ್‌, ಟೆಲಿಕಾಂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಹಿವಾಟು ನಡೆಸುತ್ತಿದೆ. ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ಒಡೆತನ ಹೊಂದಿರುವ ಮನೆತನಗಳಲ್ಲಿ ರಿಲಯನ್ಸ್‌ ಒಂದಾಗಿದೆ. ಹೀಗಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಭಾರಿ ಮಹತ್ವ ಗಳಿಸಿದೆ.

ಇದನ್ನೂ ಓದಿ: Reliance jio ಅಧ್ಯಕ್ಷರಾಗಿ ಆಕಾಶ್‌ ಅಂಬಾನಿ ನೇಮಕ, ಮಗನಿಗೆ ಪಟ್ಟಾಭಿಷೇಕ ಮಾಡಿದ ಮುಕೇಶ್‌

Exit mobile version