ಮುಂಬೈ, ಮಹಾರಾಷ್ಟ್ರ: ಸೈಬರ್ ವಂಚನೆಗಳು (Cyber Crime) ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಸೈಬರ್ ಕರೆಗಳ ಜಾಲಕ್ಕೆ ಬೀಳಬೇಡಿ ಎಂದು ಬ್ಯಾಂಕುಗಳು(Banks), ಸರ್ಕಾರಗಳು(Governments), ಪೊಲೀಸರು (Police) ಎಷ್ಟೇ ಪ್ರಯತ್ನಿಸಿದರೂ, ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಮುಂಬೈನ ವ್ಯಕ್ತಿಯೊಬ್ಬ ಈ ಜಾಲಕ್ಕೆ ಹೊಸ ಬಲಿಯಾಗಿದ್ದಾರೆ. ಒಟ್ಟು 1.3 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ! ಸೈಬರ್ ವಂಚಕರು ಅತ್ಯಾಕರ್ಷಕ ಸಂಬಳ ಆಮಿಷ ತೋರಿಸಿ, ಮುಂಬೈ ವ್ಯಕ್ತಿಯ (Mumbai Man) ಪೂರ್ತಿ ಹಣವನ್ನು ಲಪಟಾಯಿಸಿದ್ದಾರೆ.
ಸೈಬರ್ ವಂಚಕರು, ಮುಂಬೈ ವ್ಯಕ್ತಿಗೆ ಆಕರ್ಷಕ ಸಂಬಳದ ಅರೆಕಾಲಿಕ ಉದ್ಯೋಗದ ಆಮಿಷ ಒಡ್ಡಿದ್ದರು. ಫೆಬ್ರವರಿ 9ರಂದು ತನಗೆ ಅರೆಕಾಲಿಕ ಉದ್ಯೋಗದ ಕುರಿತು ಟೆಲಿಗ್ರಾಮ್‌ನಲ್ಲಿ ಮಹಿಳೆಯ ಸಂದೇಶ ಬಂದಿದೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಮಹಿಳೆ ತಾನು ಚಲನಚಿತ್ರಗಳು ಮತ್ತು ಹೋಟೆಲ್‌ಗಳ ಲಿಂಕ್‌ಗಳನ್ನು ಹಂಚಿಕೊಳ್ಳುತ್ತೇನೆ ಮತ್ತು ಅವನು ಅವರಿಗೆ ರೇಟಿಂಗ್‌ಗಳನ್ನು ನೀಡಬೇಕು. ಸ್ಕ್ರೀನ್‌ಶಾಟ್ ತೆಗೆದುಕೊಂಡು ಮಹಿಳೆಗೆ ಫೋಟೋ ಕಳುಹಿಸಬೇಕು ಎಂದು ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಉದ್ಯೋಗದಲ್ಲಿ ಮುಂಬೈ ವ್ಯಕ್ತಿಗೆ ಆರಂಭದಲ್ಲಿ ಲಿಂಕ್ ಕ್ಲಿಕ್ ಮಾಡಿದ್ದಕ್ಕೆ ಏಳು ಸಾವಿರ ರೂ. ಗಳಿಸಿದ್ದಾರೆ. ಇದರಿಂದ ಉತ್ತೇಜಿತರಾದ ಅವರು ಮತ್ತಷ್ಟು ಹೊಟೇಲ್ ರಿವ್ಯೂ ಮಾಡಿದ್ದಾರೆ. ಆದರೆ, 1.27 ಕೋಟಿ ಕಳೆದುಕೊಂಡಿದ್ದಾನೆ. ಇಷ್ಟು ಹಣವನ್ನು ಮುಂಬೈ ವ್ಯಕ್ತಿ ಸೈಬರ್ ವಂಚಕ ಖಾತೆಗೆ ಎರಡು ದಿನದಲ್ಲಿ ಟ್ರಾನ್ಸಪರ್ ಮಾಡಿದ್ದಾನೆ.
ವಂಚಕರು ಆರಂಭದಲ್ಲಿ ಜನರಿಗೆ ಮನವರಿಕೆ ಮಾಡಲು ಮತ್ತು ತಮ್ಮ ವಂಚನೆ ಯೋಜನೆಗಳಲ್ಲಿ ನಂಬಿಕೆ ಇಡಲು ಸಣ್ಣ ಮೊತ್ತವನ್ನು ಸಂತ್ರಸ್ತರಿಗೆ ಪಾವತಿಸುತ್ತಾರೆ. ಆದರೆ ನಂತರ ಸಂತ್ರಸ್ತರಿಂದ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿಸಿಕೊಂಡು ಪರಾರಿಯಾಗುತ್ತಾರೆಂದು ಪೊಲೀಸರು ತಿಳಿಸಿದ್ದಾರೆ.
ಹೇಗೆ ಯಾಮಾರಿಸುತ್ತಾರೆ?
ಆಕರ್ಷಕ ಸಂಬಳದ ಅರೆಕಾಲಿಕ ಉದ್ಯೋಗದ ಆಸೆ ಬಿದ್ದ ಮುಂಬೈ ವ್ಯಕ್ತಿಗೆ ಮಹಿಳೆಯೊಬ್ಬಳು ವೆಬ್ ಲಿಂಕ್ ಕಳುಹಿಸಿದ್ದಾಳೆ. ಬಳಿಕ ಸಂತ್ರಸ್ತ ವ್ಯಕ್ತಿಗೆ ಆತನ ಬ್ಯಾಂಕ್ ಡಿಟೇಲ್ಸ್ ಕೇಳಿದ್ದಾಳೆ. ಅಲ್ಲದೇ, ಆತನ ಇ ವಾಲೆಟ್ ನೋಡುವುದಕ್ಕಾಗಿ ಲಾಗಿನ್ ಮತ್ತು ಪಾಸ್ವರ್ಡ್ ಪಡೆದುಕೊಂಡಿದ್ದಾಳೆ. ಬಳಿಕ ಆತನಿಗೆ ಹತ್ತು ಸಾವಿರ ಡಿಪಾಸೆಟ್ ಮಾಡುವಂತೆ ತಿಳಿಸಿದ್ದಾರೆ. ಬಳಿಕ ಆತನ ಇ ವ್ಯಾಲೆಟ್‌ಗೆ ಹೆಚ್ಚಿನ ಹಣವನ್ನು ಹಾಕಿದ್ದಾರೆ. ಹೀಗೆ ಆತನಿಗೆ ನಂಬಿಕೆ ಬರುವಂತೆ ಮಾಡಿ, ಬಳಿಕ ಆತನಿಂದ ಬೃಹತ್ ಮೊತ್ತದ ಹಣವನ್ನು ಡಿಪಾಸೆಟ್ ಮಾಡಿಸುತ್ತಲೇ ಸುಮಾರು 2.27 ಕೋಟಿ ರೂ. ಪಡೆದುಕೊಂಡಿದ್ದಾರೆ. ಬಳಿಕ ಆತನೊಂದಿಗೆ ಎಲ್ಲ ಸಂಪರ್ಕಗಳನ್ನು ಕಡಿದುಕೊಂಡಿದ್ದಾರೆ. ಆಗಲೇ ಆತನಿಗೆ, ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾನೆ.