ಮುಂಬೈ: ಭಾರತವು ಸರ್ವಧರ್ಮಗಳ ನೆಲೆವೀಡಾಗಿರುವ ಕಾರಣ ಇಲ್ಲಿ ಸಾಮರಸ್ಯಕ್ಕೇನೂ ಕೊರತೆ ಇಲ್ಲ. ಎಲ್ಲ ಜಾತಿ, ಮತ, ಪಂಥಗಳ ಜನರು ಒಗ್ಗಟ್ಟಾಗಿ, ಪರಸ್ಪರ ಸಹಕಾರದೊಂದಿಗೆ ಜೀವನ ಸಾಗಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಹಿಂದುಗಳ ಧಾರ್ಮಿಕ ‘ಶಿವ ಪುರಾಣ ಕಥಾ’ ಕಾರ್ಯಕ್ರಮ ಆಯೋಜನೆಗೆ ಮುಸ್ಲಿಂ ಕುಟುಂಬವೊಂದು ಭೂಮಿ ಬಿಟ್ಟುಕೊಡುವ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶ ರವಾನಿಸಿದೆ.
ಔರಂಗಾಬಾದ್‌ನ ಪರ್ಭಾನಿಯಲ್ಲಿ ಜನವರಿ 15ರಂದು ಶಿವ ಪುರಾಣ ಕಥಾ ಆಯೋಜಿಸಲಾಗಿದೆ. ಸುಮಾರು 60 ಎಕರೆ ಪ್ರದೇಶದಲ್ಲಿ ಪುರಾಣ ಕಥಾ ನಡೆದಿದ್ದು, ಲಕ್ಷಾಂತರ ಜನ ಭಾಗವಹಿಸಿದ್ದಾರೆ. ಆದರೆ, ಇದಕ್ಕೂ ಮೊದಲು ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ಸೈಯದ್ ಕುಟುಂಬವು ಕೆಲ ದಿನಗಳವರೆಗೆ ಭೂಮಿ ನೀಡಿದೆ. ಇದಕ್ಕಾಗಿ ಯಾವುದೇ ಬಾಡಿಗೆಯನ್ನೂ ಪಡೆದಿಲ್ಲ.
ಮುಸ್ಲಿಂ ಕುಟುಂಬದ ಜಾಗದಲ್ಲಿ ಹಿಂದುಗಳ ಧಾರ್ಮಿಕ ಕಾರ್ಯಕ್ರಮ ನಡೆದಿರುವುದಕ್ಕೆ ಸುತ್ತಮುತ್ತಲಿನ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಕುಟುಂಬದ ಹೃದಯ ವೈಶಾಲ್ಯತೆಯನ್ನು ಕೊಂಡಾಡಿದ್ದಾರೆ. ಅಲ್ಲದೆ, ಸೈಯದ್ ಕುಟುಂಬಸ್ಥರನ್ನು ಸ್ಥಳೀಯ ಜನ ಸನ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Yogi Adityanath Temple | ಅಯೊಧ್ಯೆಯಲ್ಲಿ ಸಿಎಂ ಯೋಗಿಗಾಗಿ ಬೃಹತ್ ದೇವಾಲಯ ನಿರ್ಮಾಣ, ಮುಸ್ಲಿಮರಿಂದಲೂ ಕೊಡುಗೆ