ನವ ದೆಹಲಿ: ಭಾರತ ನರೇಂದ್ರ ಮೋದಿ ಹಾಗೂ ಮೋಹನ ಭಾಗವತ್ ಅವರಿಗೆ ಎಷ್ಟು ಸೇರಿದೆಯೋ ಅಷ್ಟೇ ಮಹಮ್ಮದ್‌ಗೂ ಸೇರಿದೆ ಎಂದು ಜಮೈತ್ ಉಲಮಾ ಇ ಹಿಂದ್ ಸಂಘಟನೆಯ ಮುಖ್ಯಸ್ಥ ಮಹಮೂದ್ ಮದನಿ ಹೇಳಿದ್ದಾರೆ.
ಸಂಘಟನೆಯ 34ನೇ ಸಮಾವೇಶದಲ್ಲಿ ಮಾತನಾಡಿದ ಅವರು ಇದನ್ನು ಹೇಳಿದ್ದಾರೆ. ಭಾರತ ನಮ್ಮ ದೇಶ. ಈ ದೇಶ ನರೇಂದ್ರ ಮೋದಿ ಹಾಗೂ ಆರೆಸ್ಸೆಸ್‌ನ ಮೋಹನ ಭಾಗವತ್ ಅವರಿಗೆ ಎಷ್ಟು ಸೇರಿದೆಯೋ ಅಷ್ಟೇ ಮಹಮ್ಮದ್‌ಗೂ ಸೇರಿದೆ. ಮಹಮದ್ ಇವರಿಗಿಂತ ಒಂದಿಂಚು ಹೆಚ್ಚಲ್ಲ, ಹಾಗೇ ಇವರೂ ಮಹಮದ್‌ಗಿಂತ ಒಂದಿಂಚು ಹೆಚ್ಚಲ್ಲ ಎಂದಿದ್ದಾರೆ.
ಇಸ್ಲಾಂ ಜಗತ್ತಿನ ಅತಿ ಪ್ರಾಚೀನವಾದ ಧರ್ಮ. ಭಾರತ ಮುಸ್ಲಿಮರ ಮೊತ್ತ ಮೊದಲ ಮಾತೃನೆಲ. ಇಸ್ಲಾಂ ಇಲ್ಲಿಗೆ ಹೊರಗಿನಿಂದ ಬಂತು ಎಂಬ ವಾದ ಹುರುಳಿಲ್ಲದ್ದು ಮತ್ತು ತಪ್ಪು. ಹಿಂದಿ ಮುಸ್ಲಿಮರಿಗೆ ಭಾರತ ಅತ್ಯುತ್ತಮ ದೇಶ.
ಇಸ್ಲಾಂನ ಕುರಿತು ಹೆಚ್ಚುತ್ತಿರುವ ಭಯ, ದ್ವೇಷಭಾವನೆ ತಪ್ಪು. ಇದನ್ನು ತಡೆಯಲು ಸೂಕ್ತ ಕಾನೂನು ತರಬೇಕು. ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಹಿಂಸೆಯನ್ನು ತಡೆಯಲು ನಿರ್ದಿಷ್ಟ ಕಾನೂನು ರಚನೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಟಿವಿ ಚಾನೆಲ್ ಚರ್ಚೆಗಳಲ್ಲಿ ಭಾಗವಹಿಸಬೇಡಿ ಎಂದ ಮುಸ್ಲಿಂ ಕಾನೂನು ಮಂಡಳಿ