ಮುಂಬೈ: ಡಿಸೆಂಬರ್ 20ರಂದು ಮುಕ್ತಾಯವಾಗಲಿರುವ ಮುತ್ತೂಟ್ ಮೈಕ್ರೋಫಿನ್ ಐಪಿಒ (Muthoot Microfin IPO) ಎರಡನೇ ದಿನ ಶೇ.100ರಷ್ಟು ಬುಕ್ಕಿಂಗ್ ಆಗಿದೆ. ಭವಿಷ್ಯದ ಬಂಡವಾಳ ಅಗತ್ಯಗಳನ್ನು (Capital Requirements) ಪೂರೈಸುವುದಕ್ಕಾಗಿ ಕೊಚ್ಚಿ (Kochi-based Company) ಮೂಲದ ಮುತ್ತೂಟ್ ಮೈಕ್ರೋಫಿನ್ ಕಂಪನಿಯು ಐಪಿಒ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಿಂದ 960 ಕೋಟಿ ರೂ. ಸಂಗ್ರಹಿಸಲಿದೆ.
ಈ ವಾರ ಬಿಡುಗಡೆಯಾದ 7 ಐಪಿಒಗಳ ಪೈಕಿ ಮುತ್ತೂಟ್ ಮೈಕ್ರೋಫಿನ್ ಕೂಡ ಒಂದಾಗಿದೆ. ಮುತ್ತೂಟ್ ಮೈಕ್ರೋಫಿನ್ ಜತೆಗೆ, ಮೋತಿಸನ್ ಜುವೆಲ್ಲರ್ಸ್, ಸೂರಜ್ ಎಸ್ಟೇಟ್ ಡೆವಲಪರ್ಸ್, ಹ್ಯಾಪಿ ಫಾರ್ಗಿಂಗ್ಸ್, ಕ್ರೆಡೋ ಬ್ರ್ಯಾಂಡ್ಸ್, ಆರ್ಬಿಜೆಡ್ ಜುವೆಲ್ಲರ್ಸ್, ಅಜಾದ್ ಎಂಜಿನಿಯರಿಂಗ್ ಐಪಿಒಗಳೂ ಬಿಡುಗಡೆಯಾಗಿವೆ. ಈ ಎಲ್ಲ ಐಪಿಒಗಳು ಕ್ರಮವಾಗಿ 151 ಕೋಟಿ, 400 ಕೋಟಿ, 1008 ಕೋಟಿ ರೂ., 550 ಕೋಟಿ, 100 ಕೋಟಿ ಮತ್ತು 700 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿವೆ.
ಡಿಸೆಂಬರ್ 19ರಂದು ಮುತ್ತೂಟ್ ಮೈಕ್ರೋಫಿನ್ ಐಪಿಒ ಲಾಂಚ್ ಆಗಿದ್ದು, ಎರಡನೇ ದಿನಕ್ಕೆ ಪೂರ್ಣ ಪ್ರಮಾಣದಲ್ಲಿ ಬುಕ್ಕಿಂಗ್ ಆಗಿದೆ. ಸುಮಾರು 2.43 ಕೋಟಿ ಷೇರ್ ಕಾಯ್ದಿರಿಸಲಾಗಿದೆ. ಚಿಲ್ಲರೆ ಹೂಡಿಕೆದಾರರು ಷೇರುಗಳ ಹಂಚಿಕೆ ಕೋಟಾಕ್ಕಿಂತ 1.69 ಪಟ್ಟು ಖರೀದಿಯಾಗಿದೆ. ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ ಮೀಸಲಿಡಲಾದ ಭಾಗವು 67 ಪ್ರತಿಶತದಷ್ಟು ಚಂದಾದಾರಿಕೆಯಾಗಿದ್ದು, ಉದ್ಯೋಗಿಗಳಿಗೆ ಮೀಸಲಾಗಿದ್ದ ಷೇರುಗಳು 1.54 ಪಟ್ಟು ಬುಕ್ಕಿಂಗ್ ಕಂಡಿದೆ. ಆದರೆ ಅರ್ಹ ಸಾಂಸ್ಥಿಕ ಖರೀದಿದಾರರು ಕಾಯ್ದಿರಿಸಿದ ಭಾಗದ 0.1 ಶೇಕಡಾ ಷೇರುಗಳನ್ನು ಖರೀದಿಯಾಗಿವೆ.
ಮುತ್ತೂಟ್ ಮೈಕ್ರೋಫಿನ್ ಐಪಿಒ ಬೆಲೆಯನ್ನು 277ರಿಂದ 291 ರೂ.ಗೆ ನಿಗದಿ ಮಾಡಿತ್ತು. ಕಂಪನಿಯು ಒಟ್ಟು 960 ಕೋಟಿ ರೂಪಾಯಿ ಹಣವನ್ನು ಮಾರುಕಟ್ಟೆಯಿಂದ ಎತ್ತಲಿದೆ. ಈ ಪೈಕಿ 760 ಕೋಟಿ ರೂಪಾಯಿಯನ್ನು ಹೊಸ ಐಪಿಒ ಮೂಲಕ ಸಂಗ್ರಹಿಸುವ ಗುರಿಯಿದ್ದರೆ, ಆಫರ್ ಫಾರ್ ಸೇಲ್ ಮೂಲಕ 200 ಕೋಟಿ ರೂಪಾಯಿ ಸಂಗ್ರಹಿಸಲಿದೆ.
ಐಪಿಒ ಲಾಟ್ ಸೈಜ್ ಎಷ್ಟು?
ಮುತ್ತೂಟ್ ಮೈಕ್ರೋಫಿನ್ ಐಪಿಒ ಲಾಟ್ ಸೈಜ್ 51 ಷೇರು ಇರಲಿದ್ದು, ಡಿಸೆಂಬರ್ 21ಕ್ಕೆ ಲಾಟ್ ಅಲಾಟ್‌ಮೆಂಟ್ ಆಗಲಿದೆ. ಮುತ್ತೂಟ್ ಮೈಕ್ರೋಫಿನ್ ರಾಷ್ಟ್ರೀಯ ಷೇರು ಪೇಟೆ ಮತ್ತು ಮುಂಬೈ ಷೇರು ಪೇಟೆ ಎರಡರಲ್ಲೂ ಲಿಸ್ಟ್ ಆಗಲಿದೆ. ಡಿಸೆಂಬರ್ 26ಕ್ಕೆ ಲಿಸ್ಟ್ ಆಗಲಿದೆ.
ಈ ಸುದ್ದಿಯನ್ನೂ ಓದಿ: Year Ender 2023: ಈ ವರ್ಷ ಭಾರೀ ಸದ್ದು ಮಾಡಿದ ಟಾಪ್ 10 ಐಪಿಒಗಳು! ನೀವು ಯಾವುದು ಖರೀದಿಸಿದ್ದೀರಿ?