Site icon Vistara News

Narendra Modi: “ದಿವ್ಯಾಂಗ ಸಹೋದರಿಯರಿಗೆ ವ್ಯವಸ್ಥೆ ಮಾಡಿ.. ಅಲ್ಲಿವರೆಗೆ ಭಾಷಣ ಮುಂದುವರೆಸಲ್ಲ”; ಪ್ರಧಾನಿ ಮೋದಿ ವಿಡಿಯೋ ವೈರಲ್

Narendra Modi

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ(Narendra Modi) ತಮ್ಮ ಚುನಾವಣಾ ಪ್ರಚಾರ(Lok Sabha Elction 2024)ದ ವೇಳೆ, ರ್ಯಾಲಿಗಳಲ್ಲಿ ಅದೆಷ್ಟು ಅಬ್ಬರದ ಭಾಷಣದಲ್ಲಿ ತೊಡಗಿದ್ದರೂ ಎದುರಿಗೆ ನೆರೆದಿರುವ ಜನರ ಮೇಲೆ ಪ್ರತ್ಯೇಕ ಗಮನ ಇದ್ದೇ ಇರುತ್ತದೆ. ಕೆಲವೊಮ್ಮೆ ಸಭಿಕರ ನಡುವೆ ಏನಾದರೂ ವಿಚಾರಗಳು ಕಂಡು ಬಂದಲ್ಲಿ ತಕ್ಷಣ ಅಲ್ಲೇ ಅದಕ್ಕೆ ಪ್ರತಿಕ್ರಿಯಿಸಿ ಗಮನ ಸೆಳೆದದ್ದೂ ಇದೆ. ಇದೀಗ ಮತ್ತೆ ಅಂತಹದ್ದೇ ಒಂದು ಘಟನೆ ತೆಲಂಗಾಣದಲ್ಲಿ ನಡೆದಿದೆ. ನೆಚ್ಚಿನ ನಾಯಕನ್ನು ಕಾಣಲೆಂದು ಬಂದಿದ್ದ ದಿವ್ಯಾಂಗ ಸಹೋದರಿಯರನ್ನು ವೇದಿಕೆ ಮೇಲಿದ್ದ ಪ್ರಧಾನಿ ಗಮನಿಸಿ ಅವರಿಗೆ ಕೂರಲು ಸರಿಯಾದ ವ್ಯವಸ್ಥೆ ಮಾಡಿಕೊಡುವಂತೆ ಕಾರ್ಯಕರ್ತರಿ(BJP Workers)ಗೆ ಸೂಚನೆ ನೀಡಿದ್ದಾರೆ.

ತೆಲಂಗಾಣದ ಮೆಹಬೂಬ್ ನಗರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಚೇತನ ಮಹಿಳೆಯರಿಗಾಗಿ ಮಾಡಿದ ಕಾರ್ಯ ಎಲ್ಲರ ಹೃದಯ ಗೆದ್ದಿದೆ. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮನ್ನು ಆಶೀರ್ವದಿಸಲು ಅಲ್ಲಿಗೆ ಬಂದಿದ್ದ ದಿವ್ಯಾಂಗ ಸಹೋದರಿಯರಿಗೆ ದಾರಿ ಮಾಡಿಕೊಡುವಂತೆ ನೆರೆದಿದ್ದ ಜನರಿಗೆ ಮನವಿ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್‌ ಆಗಿದೆ.

ಇದನ್ನೂ ಓದಿ:K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

ದಿವ್ಯಾಂಗ ಸಹೋದರಿಯರು ನನ್ನನ್ನು ಆಶೀರ್ವದಿಸಲು ಬರುತ್ತಿದ್ದಾರೆ, ಅವರು ಮುಂದೆ ಬರಲಿ.ಈ ಮಹಿಳೆಯರಿಗೆ ಸರಿಯಾದ ವ್ಯವಸ್ಥೆ ಮಾಡುವವರೆಗೂ ತಾವು ಭಾಷಣವನ್ನ ಮುಂದುವರಿಸುವುದಿಲ್ಲ ಎಂದು ಪ್ರಧಾನಿ ಹೇಳಿದರು. ಅವರು ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಲಾರೆ, ದಯವಿಟ್ಟು ಅವರಿಗೆ ವ್ಯವಸ್ಥೆ ಮಾಡಿ” ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಆಗ ಅಲ್ಲಿ ನೆರದಿದ್ದ ಜನರು ವಿಶೇಷ ಚೇತನ ಮಹಿಳೆಯರನ್ನ ಎತ್ತಿಕೊಂಡು ಜನಸಮೂಹದ ಮುಂದಿನ ಸಾಲಿನಲ್ಲಿ ಕೂರಿಸಿದರು. ಬಳಿಕ ಪ್ರಧಾನಿ ಭಾಷಣ ಮುಂದುವರೆಸಿದರು. ಪ್ರಧಾನಿ ಮೋದಿಯವರ ಈ ಕಾರ್ಯಕ್ಕೆ ನೆರೆದಿದ್ದ ಸಾವಿರಾರು ಜನ ಚಪ್ಪಾಳೆ ಮೂಲಕ ಮೆಚ್ಚುಗೆ ಸೂಚಿಸಿದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿದ್ದು, ಅನೇಕ ಜನ ಪ್ರಶಂಸೆ ವ್ಯಕ್ತಪಡಿದ್ದಾರೆ. ಇನ್ನು ಕೆಲವರು ಇದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವುದು ಎಂದು ಕಮೆಂಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ನಿನ್ನೆ ತೆಲಂಗಾಣದ ಹೈದರಾಬಾದ್‌ ಮತ್ತು ಮೆಹಬೂಬ್‌ ನಗರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಈ ವೇಳೆ ಮಾತನಾಡಿದ ಅವರು, ತೆಲಂಗಾಣದ ಜನರಿಗೆ ಈ ಚುನಾವಣೆ ದೇಶದ ಭವಿಷ್ಯ ನಿರ್ಧರಿಸುತ್ತದೆ ಎಂಬುದು ತಿಳಿದಿದೆ ಎಂದರು. ಇದೇ ವೇಳೆ ಅವರು ಕಾಂಗ್ರೆಸ್‌ ಮತ್ತು ಬಿಆರ್‌ ಎಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

Exit mobile version