Site icon Vistara News

Narendra Modi: ಅಯೋಧ್ಯೆಯಲ್ಲಿಂದು ಪ್ರಧಾನಿ ಮೋದಿ ರೋಡ್‌ಶೋ; ರಾಮಲಲ್ಲಾನಿಗೆ ವಿಶೇಷ ಪೂಜೆ

Narendra Modi

ನವದೆಹಲಿ:ಲೋಕಸಭಾ ಚುನಾವಣೆ(Lok Sabha Election 2024) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮ ಜನ್ಮಭೂಮಿ(Ram Janmbhoomi)ಯಲ್ಲಿ ಶ್ರೀರಾಮ ಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ವಿಶೇಷ ಪೂಜೆ ಬಳಿಕ ಸುಮಾರು ಎರಡು ಕಿಲೋಮೀಟರ್‌ ರೋಡ್‌ ಶೋ(Roadshow) ನಡೆಸಲಿದ್ದಾರೆ. ಶನಿವಾರವೇ ಉತ್ತರಪ್ರದೇಶಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ, ಸಮಾಜವಾದಿ ಪಕ್ಷ(SP)ದ ಭದ್ರಕೋಟೆ ಇಟವಾದಲ್ಲಿ ಮಧ್ಯಾಹ್ನ ಸಾರ್ವಜನಿಕ ಸಭೆ ಹಾಗೂ ಧೌರಹರದಲ್ಲಿ ಸಂಜೆ ರ್ಯಾಲಿ ಕೈಗೊಳ್ಳಲಿದ್ದಾರೆ.

ಇದಾದ ಬಳಿಕ ನೇರವಾಗಿ ಅಯೋಧ್ಯೆಗೆ ತೆರಳಿರುವ ಪ್ರಧಾನಿ ಮೋದಿ, ಸಂಜೆ 7ಗಂಟೆಗೆ ರಾಮಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಸುಮಾರು 2 ಕಿಲೋ ಮೀಟರ್‌ ರೋಡ್‌ಶೋ ನಡೆಸಲಿದ್ದಾರೆ. ಇನ್ನು ಈ ರೋಡ್‌ ಸುಗ್ರೀವ ಕೋಟೆಯಿಂದ ಪ್ರಾರಂಭವಾಗಿ ಲತಾ ಚೌಕ್‌ವರೆಗೆ ಸಾಗಲಿದೆ. ಈ ಬೃಹತ್‌ ರೋಡ್‌ಶೋದಲ್ಲಿ ಸಿಂಧಿ, ಪಂಜಾಬಿಗಳು ಮತ್ತು ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗಿಯಾಗಲಿದ್ದಾರೆ. ದಾರಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು ರಾಮಮಂದಿರದ 11ನೇ ಗೇಟ್‌ನ ಎದುರು ಹೂವುಗಳು ಮತ್ತು ಧ್ವಜಗಳಿಂ ಸಿಂಗರಿಸಲಾಗಿದೆ. ಪೊಲೀಸರ ಜೊತೆಗೆ ಭಯೋತ್ಪಾದಕಾ ನಿಗ್ರಹ ದಳ(ATS) ಕಮಾಂಡೋಗಳು ಭದ್ರತಾ ವ್ಯವಸ್ಥೆಯನ್ನು ಪರಿಶೋಲಿಸುತ್ತಿದ್ದಾರೆ. ಅಲ್ಲದೇ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಸಕಲ ಸಿದ್ದತೆ ನಡೆಸಲಾಗಿದೆ. ರಾಮಲಲ್ಲಾ ದರ್ಶನ ಮಾರ್ಗದ ಗೇಟ್‌ ನಂಬರ್‌ 11ರಲ್ಲಿ ಹೂಗಳಿಂದ ಸಿಂಗರಿಸಲಾಗಿದೆ. ರಸ್ತೆಯುದ್ಧಕ್ಕೂ ಪ್ರಧಾನಿ ಮೋದಿಯ ಕಟೌಟ್‌ ನಿರ್ಮಿಸಲಾಗಿದೆ. ಪ್ರಧಾನಿ ಮೋದಿಯವರ ಸ್ವಾಗತಕ್ಕೆ ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಅಯೊಧ್ಯೆಗೆ ಭೇಟಿ ಕೊಡುತ್ತಿದ್ದಾರೆ. ಅವರ ರೋಡ್‌ಶೋದಲ್ಲಿ ಅನೇಕ ಸಾಧು ಸಂತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಮೂರನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, 10 ಲೋಕಸಭಾ ಕ್ಷೇತ್ರದಲ್ಲಿ ಮೇ 7 ಮತದಾನ ನಡೆಯಲಿದೆ. ಅಯೋಧ್ಯೆಯಲ್ಲಿ ಮೇ 20ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ: Covishield Vaccine: ಮಗಳ ಸಾವಿಗೆ ಕೋವಿಶೀಲ್ಡ್ ಲಸಿಕೆ ಕಾರಣ: ಆಸ್ಟ್ರಾಜೆನಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ತಂದೆ

ಮೇ 14ರಂದು ನಾಮಪತ್ರ ಸಲ್ಲಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ಮೇ 14 ರಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಭಾನುವಾರ ಈ ವಿಷಯ ತಿಳಿಸಿದ ವಾರಣಾಸಿ ಬಿಜೆಪಿ ನಗರಾಧ್ಯಕ್ಷ ವಿದ್ಯಾಸಾಗರ್ ರೈ, ಮೇ 13 ರಂದು ಮೋದಿ ಅವರು ಕ್ಷೇತ್ರದಲ್ಲಿ ರೋಡ್‌ಶೋ ನಡೆಸಲಿದ್ದು, ಅದಕ್ಕೆ ಸಿದ್ಧತೆಗಳು ನಡೆಯುತ್ತಿರುವುದಾಗಿ ತಿಳಿಸಿದರು. “ರೋಡ್‌ಶೋಗೆ ಮಾರ್ಗವನ್ನು ಅಂತಿಮಗೊಳಿಸಲಾಗಿದೆ, ಮೇ 14 ರಂದು ಪ್ರಧಾನಿ ಮೋದಿ ವಾರಣಾಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ” ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು. ವಾರಣಾಸಿಯಲ್ಲಿ ಕಾಂಗ್ರೆಸ್ ತನ್ನ ಉತ್ತರ ಪ್ರದೇಶದ ಮುಖ್ಯಸ್ಥ ಅಜಯ್ ರೈ ಮತ್ತು ಬಿಎಸ್ ಪಿ ಅಥರ್ ಜಮಾಲ್ ಲಾರಿ ಅವರನ್ನು ಕಣಕ್ಕಿಳಿಸಿದೆ. ವಾರಣಾಸಿಯಲ್ಲಿ ಜೂನ್ 1 ರಂದು ಏಳನೇ ಮತ್ತು ಕೊನೆಯ ಸುತ್ತಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಚುನಾವಣೆ ನಡೆಯಲಿದೆ

Exit mobile version