ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ನಾಯಕರು, ಜನ ‘ಫಕೀರ’ ಎಂದು ಕರೆಯುತ್ತಾರೆ. ಅವರು ಆಸ್ತಿ ಮಾಡದಿರುವುದು ಸೇರಿ ಹಲವು ಕಾರಣಗಳಿಂದಾಗಿ ಫಕೀರ ಎಂದು ಕರೆಯುತ್ತಾರೆ. ಇಂತಹ ನರೇಂದ್ರ ಮೋದಿ ಅವರಿಗೆ ಮಧ್ಯಪ್ರದೇಶದ ಮಹಾ ತಾಯಿಯೊಬ್ಬರು ತಮ್ಮ ಹೆಸರಿನಲ್ಲಿರುವ 15 ಎಕರೆ ಜಮೀನನ್ನು ನೀಡಲು ಮುಂದಾಗಿದ್ದಾರೆ. ಸುಮಾರು 100 ವರ್ಷ ವಯಸ್ಸಾಗಿರುವ ಅಜ್ಜಿಯು ಮೋದಿ (Narendra Modi) ಮೇಲೆ ಇಟ್ಟಿರುವ ಅಭಿಮಾನದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಮಧ್ಯಪ್ರದೇಶದ ರಾಜಗಢ ಜಿಲ್ಲೆಯಿಂದ 65 ಕಿಲೋಮೀಟರ್ ದೂರದಲ್ಲಿರುವ ಹರಿಪುರ ಜಾಗೀರ್ ಗ್ರಾಮದಲ್ಲಿ ವಾಸಿಸುತ್ತಿರುವ, 14 ಮಕ್ಕಳ ತಾಯಿಯಾಗಿರುವ ಶತಾಯುಷಿ ಮಂಗಿಬಾಯಿ ತನ್ವಾರ್ ಅವರು ಮೋದಿ ಅವರಿಗೆ ತಮ್ಮ ಹೆಸರಿನಲ್ಲಿರುವ 15 ಎಕರೆ ಜಮೀನನ್ನು ನೀಡಲು ತೀರ್ಮಾನಿಸಿದ್ದಾರೆ. ಇವರು ಮೋದಿ ಬಗ್ಗೆ ಮಾತನಾಡಿರುವ ವಿಡಿಯೊವನ್ನು ಮಧ್ಯಪ್ರದೇಶ ಬಿಜೆಪಿ ಘಟಕ ಶೇರ್ ಮಾಡಿದೆ.
ವೈರಲ್ ಆದ ವಿಡಿಯೊ ಇಲ್ಲಿದೆ
"कोई कुछ भी कहे, वोट तो मोदी जी को ही दूँगी"
— BJP MadhyaPradesh (@BJP4MP) June 23, 2023
राजगढ़ की लगभग 90 वर्षीय मांगीबाई तंवर जी का प्रधानमंत्री श्री @narendramodi जी के प्रति स्नेह और विश्वास देखिए… pic.twitter.com/5nc3Qfqwoh
ಮೋದಿ ನನ್ನ ಮಗನಿದ್ದಂತೆ
“ನನಗೆ 14 ಮಕ್ಕಳಿದ್ದಾರೆ. ಆದರೆ, ನರೇಂದ್ರ ಮೋದಿ ಕೂಡ ನನ್ನ ಮಗನಿದ್ದಂತೆ. ಮೋದಿ ನನಗೆ ಮನೆ ಕೊಟ್ಟಿದ್ದಾರೆ. ಉಚಿತವಾಗಿ ಮೆಡಿಕಲ್ ಸೇವೆಗಳನ್ನು ನೀಡಿದ್ದಾರೆ. ವಿಧವಾ ವೇತನ ನೀಡುತ್ತಿದ್ದಾರೆ. ಅವರಿಂದಾಗಿಯೇ ನಾನು ತೀರ್ಥಯಾತ್ರೆಗೆ ಹೋಗಲು ಸಾಧ್ಯವಾಗಿದೆ. ಅವರು ಯಾವಾಗಲೂ ದೇಶಕ್ಕಾಗಿ ದುಡಿಯುತ್ತಾರೆ. ಹಾಗಾಗಿ, ಮೋದಿ ಅವರಿಗೆ ನನ್ನ ಹೆಸರಿನಲ್ಲಿರುವ 25 ಬಿಗಾಸ್ (15) ಎಕರೆ ಭೂಮಿಯನ್ನು ನೀಡುತ್ತೇನೆ” ಎಂದು ಮಂಗಿಬಾಯಿ ಹೇಳಿದ್ದಾರೆ.
ಇದನ್ನೂ ಓದಿ: PM Modi Visit US: ಮೋದಿ ಅಮೆರಿಕ ಪ್ರವಾಸದ ಎಫೆಕ್ಟ್, ಅಗ್ಗವಾಗಲಿವೆ ಕಡಲೆ, ಬೇಳೆಕಾಳು, ಸೇಬು!
ನನ್ನ ವೋಟು ಮೋದಿಗೆ ಮಾತ್ರ
ನರೇಂದ್ರ ಮೋದಿ ಅವರ ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಜೆಪಿ ಮುಖಂಡರು ಹರಿಪುರ ಜಾಗೀರ್ ಗ್ರಾಮಕ್ಕೆ ತೆರಳಿದ್ದಾರೆ. ಮೋದಿ ಸರ್ಕಾರದ ಸಾಧನೆಗಳುಳ್ಳ ಕರಪತ್ರಗಳನ್ನು ಗ್ರಾಮದಲ್ಲಿ ಹಂಚಿದ್ದಾರೆ. ಇದೇ ವೇಳೆ ಬಿಜೆಪಿ ಮುಖಂಡರೊಂದಿಗೆ ಮಾತನಾಡಿದ ಮಂಗಿಬಾಯಿ, “ನನ್ನ ವೋಟು ಮೋದಿಗೆ ಮಾತ್ರ. ಮೋದಿ ಅವರ ಕರಪತ್ರವಾಗಿದ್ದರೆ ಮಾತ್ರ ಕೊಡಿ, ಬೇರೆಯವರದ್ದಾಗಿದ್ದರೆ ಬೇಡ” ಎಂದು ಅಜ್ಜಿ ಖಂಡತುಂಡವಾಗಿ ಹೇಳಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ