Site icon Vistara News

Narendra Modi: ನರೇಂದ್ರ ಮೋದಿ ಪ್ರಮಾಣವಚನ ಕಾರ್ಯಕ್ರಮ ದಿಢೀರ್‌ ಮುಂದೂಡಿಕೆ?

Narendra Modi

Election Results 2024

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯ ಫಲಿತಾಂಶ ಹೊರಬಿದ್ದಿದ್ದು, ಸ್ಪಷ್ಟ ಬಹುಮತದ ಮೂಲಕ ಎನ್‌ಡಿಎ ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಮೂರನೇ ಬಾರಿ ಗದ್ದುಗೆ ಏರಲಿರುವ ನರೇಂದ್ರ ಮೋದಿ(Narendra Modi) ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಒಂದು ದಿನ ಮುಂದೂಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜೂ.8ರಂದು ನರೇಂದ್ರ ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ಮೊದಲಿಗೆ ಮಾಹಿತಿ ನೀಡಿದ್ದವು. ಇದಾದ ಬಳಿಕ ಈ ಬಗ್ಗೆ ಬಿಗ್‌ ಅಪ್ಡೇಡ್‌ವೊಂದನ್ನು ನೀಡಿರುವ ಮೂಲಗಳು ಪ್ರಮಾಣವಚನ ಕಾರ್ಯಕ್ರಮ ಜೂ.9ರಂದು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಈ ಮಹತ್ವದ ಬದಲಾವಣೆಗೆ ಕಾರಣ ಏನೆಂಬುದರ ಬಗೆ ಯಾವುದೇ ಮಾಹಿತಿ ಇಲ್ಲ.

ಚುನಾವಣಾ ಫಲಿತಾಂಸ ಹೊರಬೀಳುತ್ತಿದ್ದಂತೆ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಮತ್ತು ಇಂಡಿಯಾ ಒಕ್ಕೂಟ ತಮ್ಮ ತಮ್ಮ ಮೈತ್ರಿ ನಾಯಕರೊಂದಿಗೆ ಚುನಾವಣಾ ಫಲಿತಾಂಶಗಳನ್ನು ಪರಿಶೀಲಿಸಲು ಮತ್ತು ಸರ್ಕಾರ ರಚನೆಗೆ ಕಾರ್ಯತಂತ್ರವನ್ನು ರೂಪಿಸಲು ಸಭೆ ನಡೆಸಿವೆ. ಬುಧವಾರ, ಎನ್‌ಡಿಎ ತನ್ನ ಮಿತ್ರಪಕ್ಷಗಳಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಚಿರಾಗ್ ಪಾಸ್ವಾನ್, ಜಯಂತ್ ಚೌಧರಿ, ಅನುಪ್ರಿಯಾ ಪಟೇಲ್ ಸೇರಿದಂತೆ ಇತರರೊಂದಿಗೆ ಪ್ರಮುಖ ಸಭೆ ನಡೆಸಿತು, ಈ ಸಂದರ್ಭದಲ್ಲಿ ಅವರು ತಮ್ಮ ಮೈತ್ರಿಕೂಟದ ನಾಯಕರಾಗಿ ಪಿಎಂ ಮೋದಿ ಹೆಸರನ್ನು ಅನುಮೋದಿಸಿದರು.

ಗಣ್ಯರ ಉಪಸ್ಥಿತಿ

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಚುನಾಯಿತರಾಗುತ್ತಿದ್ದಂತೆ ದೇಶ ವಿದೇಶಗಳ ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದುಬಂದಿತ್ತು. ಹೀಗಾಗಿ ಅವರು ಇದೀಗ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ದಕ್ಷಿಣ ಏಷ್ಯಾದ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ. ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಾಯಕರು ಶನಿವಾರದ ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯನ್ನು ಈಗಾಗಲೇ ಪ್ರಧಾನಿ ಮೋದಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ ದೃಢಪಡಿಸಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಕಚೇರಿಯ ಮಾಧ್ಯಮ ವಿಭಾಗವು ಶನಿವಾರದ ಕಾರ್ಯಕ್ರಮಕ್ಕೆ ಹಾಜರಾಗಲು ಅವರು ಆಹ್ವಾನವನ್ನು ಸ್ವೀಕರಿಸಿದ್ದಾರೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಮೋದಿಯವರನ್ನು ಅಭಿನಂದಿಸಿದ ಮೊದಲ ವಿದೇಶಿ ನಾಯಕರಲ್ಲಿ ಒಬ್ಬರು, ಬಾಂಗ್ಲಾದೇಶ ಮಾಧ್ಯಮಗಳ ಪ್ರಕಾರ, ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿ ಅವರು ಶುಕ್ರವಾರ ದೆಹಲಿಗೆ ಆಗಮಿಸುತ್ತಾರೆ.

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಭೂತಾನ್ ಪ್ರಧಾನಿ ಟ್ಶೆರಿಂಗ್ ಟೋಬ್ಗೇ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರಿಗೆ ಔಪಚಾರಿಕ ಆಹ್ವಾನಗಳನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:Hinduism Beliefs: ಸತ್ತ ವ್ಯಕ್ತಿಯ ದೇಹವನ್ನು ಏಕಾಂಗಿಯಾಗಿ ಬಿಡಬಾರದು ಅನ್ನೋದು ಯಾಕೆ ಗೊತ್ತೇ?

Exit mobile version