ಬಾಲಿ: ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ (ನವೆಂಬರ್ 14) ಸಾಂಪ್ರದಾಯಿಕ ಸ್ವಾಗತ ದೊರೆತಿತ್ತು. ಮಂಗಳವಾರ (ನವೆಂಬರ್ 15) ವಿಶ್ವದ ಹಲವು ನಾಯಕರನ್ನು ಭೇಟಿಯಾದ ಮೋದಿ, ಸಾಂಪ್ರದಾಯಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದಾರೆ. ಹಾಗೆಯೇ, ಬಾಲಿಯಲ್ಲಿ ಇಂಡೋನೇಷ್ಯಾದ ಸಾಂಪ್ರದಾಯಿಕ ಸಂಗೀತ ಸಾಧನವೊಂದನ್ನು ಮೋದಿ ಬಾರಿಸಿದ್ದು, ಈ ವಿಡಿಯೊ ಈಗ ವೈರಲ್ (Viral Video) ಆಗಿದೆ.
ಸಂಗೀತ ಸಾಧನ ಬಾರಿಸಿರುವ ವಿಡಿಯೊವನ್ನು ನರೇಂದ್ರ ಮೋದಿ ಅವರೇ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ. ‘ಬಾಲಿಯಲ್ಲಿ ಕೆಲ ವಿಶೇಷ ಕ್ಷಣಗಳು’ ಎಂಬ ಒಕ್ಕಣೆಯೊಂದಿಗೆ ವಿಡಿಯೊ ಶೇರ್ ಮಾಡಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿ ಹಲವು ನಾಯಕರನ್ನು ಮೋದಿ ಭೇಟಿಯಾದರು.
ಇದನ್ನೂ ಓದಿ | G20 Summit | ಜಿ20 ಶೃಂಗದಲ್ಲಿ ಇಂಡಿಯನ್ ಪಿಎಂ ಮೋದಿ- ಬ್ರಿಟನ್ ಪಿಎಂ ರಿಷಿ ಪರಸ್ಪರ ಭೇಟಿ, ಔಪಚಾರಿಕ ಮಾತುಕತೆ