Site icon Vistara News

Narendra Modi: ಗುರುದ್ವಾರದಲ್ಲಿ ಅಡುಗೆ ಮಾಡಿ ಭಕ್ತರಿಗೆ ಬಡಿಸಿದ ಪ್ರಧಾನಿ; ವಿಡಿಯೋ ವೈರಲ್‌

Narendra Modi

ಪಾಟ್ನಾ: ಲೋಕಸಭಾ ಚುನಾವಣೆ(Lok Sabha Election 2024)ಯ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬ ನಾಯಕನೂ ತನ್ನದೇ ವಿಭಿನ್ನ ಶೈಲಿಯಲ್ಲಿ ಜನರ ಮನಸ್ಸು ಗೆಲ್ಲಲು ಹಲವು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಲೋಕಲ್‌ ಟ್ರೈನ್‌ನಲ್ಲಿ ಪ್ರಯಾಣಿಸುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಗಮನ ಸೆಳೆದಿದ್ದರು. ಇದಾದ ಬಳಿಕ ಸ್ಕೂಟರ್‌ನಲ್ಲಿ ತೆರಳಿ ಸ್ಮೃತಿ ಇರಾನಿ(Smriti Irani) ಪ್ರಚಾರ ಮಾಡಿದ್ದರು. ಅತ್ತ ಅಸಾದುದ್ದೀನ್‌ ಓವೈಸಿ ಕೂಡ ಭರ್ಜರಿ ಬೈಕ್‌ ರೈಡ್‌ ಮಾಡುವ ಮೂಲಕ ಜನರ ಗಮನ ಸೆಳೆದಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿ(Narendra Modi)ಯಂತೂ ಸಾಮಾನ್ಯರಲ್ಲಿ ಸಾಮಾನ್ಯ ಜನರಲ್ಲಿ ಬೆರೆಯುವ ಮೂಲಕ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಅಂತಹದ್ದೇ ಮತ್ತೊಂದು ವಿಡಿಯೋ ವೈರಲ್‌(Viral Video) ಆಗಿದೆ.

ಬಿಹಾರದ ಪಾಟ್ನಾದಲ್ಲಿರುವ ಐತಿಹಾಸಿಕ ಗುರುದ್ವಾರ ಪಾಟ್ನಾ ಸಾಹಿಬ್‍ಗೆ ಭೇಟಿ ನೀಡಿದ ಪಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ, ಬಳಿಕ ಹರಿಮಂದಿರ್ ಜಿ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದರು. ಅಲ್ಲಿ ಭಕ್ತರಿಗೆ ಅನ್ನ ಸಂಪರ್ತಣೆ ಮಾಡಿದ್ದಾರೆ. ಅಲ್ಲಿ ಸ್ವತಃ ಅಡುಗೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಳಿಕ ಅಲ್ಲಿನ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನಲೆ ಬಿಹಾರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ ಅವರು ಸಿಖ್ ಪೇಟವನ್ನು ಧರಿಸಿ ಸೋಮವಾರ ಸಾಹಿಬ್ ಗುರುದ್ವಾರದಲ್ಲಿ ಆಹಾರ ಸೇವೆಯಲ್ಲಿ ಪಾಲ್ಗೊಂಡರು. ಮೋದಿ ಅವರು ಸ್ಟೀಲ್ ಬಕೆಟ್ ಹಿಡಿದು ಸಿಖ್ಖರಿಗೆ ಆಹಾರ ಬಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಹಾರ ಪ್ರವಾಸದಲ್ಲಿರುವ ಮೋದಿ ಅವರು, ಇಂದು ಹಾಜಿಪುರ, ಮುಜಾಫರ್‍ಪುರ, ಮತ್ತು ಸರನ್ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರ ನಡೆಸಲಿದ್ದಾರೆ.

ಪಾಟ್ನಾ ಸಾಹಿಬ್ ಗುರುದ್ವಾರದ ಇತಿಹಾಸ

ಪಾಟ್ನಾ ಸಾಹಿಬ್ ಸಿಖ್ಖರ ಐದು ತಖತ್‍ಗಳಲ್ಲಿ ಒಂದಾಗಿದೆ. ಇದು ಬಿಹಾರದ ರಾಜಧಾನಿ ಪಾಟ್ನಾದಲ್ಲಿದೆ. ಮಹಾರಾಜ ರಂಜಿತ್ ಸಿಂಗ್ ಅವರು 18ನೇ ಶತಮಾನದಲ್ಲಿ ಗುರುದ್ವಾರ ಮತ್ತು ತಖತ್ ಅನ್ನು ನಿರ್ಮಿಸಿದ್ದರು. ಇದು ಸಿಖ್ಖರ 10ನೇ ಗುರು ಗೋವಿಂದ್‌ ಸಿಂಗ್‌ ಅವರ ಜನ್ಮ ಸ್ಥಳವೆಂದೇ ಪೂಜಿಸಲಾಗುತ್ತದೆ. 1666ರಲ್ಲಿ ಪಾಟ್ನಾದಲ್ಲಿ ಜನಿಸಿದ ಗುರು ಗೋವಿಂದ್‌ ಸಿಂಗ್‌ ಆನಂದ್‌ಪುರ ಸಾಹೀಬ್‌ಗೆ ತೆರಳುವ ಮುನ್ನ ಕೆಲ ವರ್ಷಗಳ ಕಾಲ ಈ ಸ್ಥಳದಲ್ಲಿ ಕಾಲ ಈ ಪುಣ್ಯ ಸ್ಥಳದಲ್ಲಿ ಕಳೆದಿದ್ದರು ಎನ್ನಲಾಗಿದೆ.

ಇದನ್ನೂ ಓದಿ:CBSE 12th Results 2024: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ, 87.98% ಪಾಸ್‌

Exit mobile version