ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜಕೀಯ, ಸೈದ್ಧಾಂತಿಕ ನಿಲುವನ್ನು ಮೀರಿ ಕಾಂಗ್ರೆಸ್(Congress) ನಾಯಕರಾದ ಸೋನಿಯಾ ಗಾಂಧಿ(Sonia Gandhi) ಮತ್ತು ರಾಹುಲ್ ಗಾಂಧಿ(Rahul Gandhi) ಗೆ ತಾವು ಸಹಾಯಹಸ್ತ ಚಾಚಿರುವ ಘಟನೆಗಳನ್ನು ನೆನಪಿಸಿಕೊಂಡರು. ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆಯಾದ ನೇಹಾ ಹಿರೇಮಠ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(J P Nadda) ಭೇಟಿ ಬಗೆಗಿನ ಟೀಕೆಗೆ ಸ್ಪಷ್ಟನೆ ನೀಡಿದರು. ಒಬ್ಬ ರಾಜಕೀಯ ನಾಯಕನಾದವನು ರಾಜಕೀಯದ ಹೊರತಾಗಿಯೂ ಕೆಲವೊಂದು ವಿಚಾರಗಳು ಯೋಚನೆ ಮಾಡಬೇಕು. ಅದೇ ನಿಜವಾದ ರಾಜಕೀಯ ಧರ್ಮ ಎಂದರು.
ಇದೇ ವೇಳೆ ಕೆಲವೊಂದು ಹಳೆಯ ವಿಚಾರಗಳನ್ನು ನೆನಪಿಸಿಕೊಂಡ ಮೋದಿ, ನಾನು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಾಮನ್‌ನಲ್ಲಿ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಸುದ್ದಿ ಬಂದಿತ್ತು. ತಕ್ಷಣ ನಾನು ಸ್ಥಳಕ್ಕೆ ಏರ್ ಆಂಬ್ಯುಲೆನ್ಸ್ ಕಳುಹಿಸುವಂತೆ ಸೂಚನೆ ನೀಡಿದ್ದೆ. ಆಗ ಪಟೇಲ್ ಅವರು ತಾವು ಸುರಕ್ಷಿತವಾಗಿದ್ದೇವೆ ಏರ್ ಆಂಬ್ಯುಲೆನ್ಸ್ ಅವಶ್ಯಕತೆ ಇಲ್ಲ ಎಂದು ಕರೆ ಮಾಡಿದ್ದರು. ಮತ್ತೊಮ್ಮೆ ಕಾಶಿಯಲ್ಲಿ ಚುನಾವಣಾ ಪ್ರಚಾದಲ್ಲಿ ತೊಡಗಿದ್ದ ವೇಳೆ ಸೋನಿಯಾ ಗಾಂಧಿ ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ತಕ್ಷಣ ನಾನು ನಮ್ಮ ಕಚೇರಿಯ ಒಂದಷ್ಟು ಜನರನ್ನು ಕಳುಹಿಸಿ ಅವರಿಗೆ ವಿಮಾನ ವ್ಯವಸ್ಥೆಯ ಅವಶ್ಯಕತೆ ಏನಾದರೂ ಇದೆಯೇ ಎಂಬುದನ್ನು ವಿಚಾರಿಸುವಂತೆ ಸೂಚಿಸಿದ್ದೆ ಎಂದು ಹೇಳಿದರು.
ಇದನ್ನೂ ಓದಿ:PM Narendra Modi: ಪುಕ್ಕಲ ನಾಯಕ ದೇಶ ಆಳಬಲ್ಲನೇ? ರಾಹುಲ್ ಗಾಂಧಿಗೆ ಮೋದಿ ಟಾಂಗ್!
ಇನ್ನು ಯಾವುದೋ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷವುಂಟಾಗಿತ್ತು. ತಕ್ಷಣ ನಾನು ಅವರಿಗೆ ಕರೆ ಮಾಡಿ ಏನಾದರೂ ಸಹಾಯ ಬೇಕಿತ್ತೆ ಎಂದು ವಿಚಾರಿಸಿದ್ದೆ. ಇದನ್ನು ಯಾವ ಕಾರಣಕ್ಕೆ ಹೇಳುತ್ತಿದ್ದೇನೆ ಎಂದರೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಕರ್ನಾಟಕದಲ್ಲಿ ವಿದ್ಯಾರ್ಥಿನಿಯೊಬ್ಬಳ ಬರ್ಬರ ಕೊಲೆಯಾಗಿತ್ತು. ಕಾಂಗ್ರೆಸ್‌ನ ಕಾರ್ಪೋರೇಟರ್ ಮಗಳನ್ನು ಧಾರುಣವಾಗಿ ಹತ್ಯೆ ಮಾಡಲಾಗಿತ್ತು. ನಡ್ಡಾ ಜೀ ಅಲ್ಲಿಯೇ ಇದ್ದ ಕಾರಣ ಅವರು ತಕ್ಷಣ ಪಕ್ಷ ಬೇಧ ಮರೆತು ಮೃತಳ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದ್ದರು. ಇಲ್ಲಿ ಯಾವ ಪಕ್ಷ? ಯಾವ ಪಕ್ಷದ ವ್ಯಕ್ತಿಯ ಮಗಳು ಎಂಬ ವಿಚಾರ ನಮಗೆ ಬೇಕಿಲ್ಲ. ಇಲ್ಲಿ ಬೇಕಾಗಿದ್ದಿದ್ದು ಮಾನವೀಯತೆ. ಚುನಾವಣೆ ಒತ್ತಡದ ನಡುವೆಯೂ ಜೆ.ಪಿ. ನಡ್ಡಾ ಅವರ ಮನೆಗೆ ತೆರಳಿದ್ದು ಕೂಡ ಮಾನವೀಯತೆ ದೃಷ್ಟಿಯಿಂದ ಎಂದು ಪ್ರಧಾನಿ ಸ್ಪಷ್ಟಪಡಿಸಿದರು. ಇದೇ ವೇಳೆ ಅವರು ಕಾಂಗ್ರೆಸ್ ಸರ್ಕಾರ ವಿರುದ್ಧ ಹರಿಹಾಯ್ದ ಪ್ರಧಾನಿ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಗಲಭೆ, ಕೊಲೆಗಳು ಆಗಾಗ ನಡೆಯುತ್ತಲೇ ಇವೆ. ಇನ್ನು ರಾಜ್ಯ ಆರ್ಥಿಕ ದಿವಾಳಿತನ ಎದುರಿಸುತ್ತಿದೆ. ಅವರು ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದು ದೂರಿದ್ದಾರೆ.