Site icon Vistara News

Narendra Modi:”ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ…ಅಲ್ಲಿ ಪಾಕಿಸ್ತಾನ ಅಳುತ್ತಾ ಪ್ರಾರ್ಥಿಸುತ್ತಿದೆ”-ಮೋದಿ ಅಟ್ಯಾಕ್‌

pm Narendra Modi

ಗುಜರಾತ್‌: ಸದಾ ಕಾಂಗ್ರೆಸ್‌ ವಿರುದ್ಧ ಒಂದಿಲ್ಲೊಂದು ರೀತಿಯಲ್ಲಿ ಮಾತಿನಲ್ಲೇ ಅಟ್ಯಾಕ್‌ ಮಾಡುವ ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಗುಜರಾತ್‌ನಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿ(Election Rally)ಯಲ್ಲಿ ಕಾಂಗ್ರೆಸನ್ನು ಪಾಕಿಸ್ತಾನ(Pakistan)ದ ಬೆಂಬಲಿಗ ಪಕ್ಷ ಎಂದು ಕರೆದಿದ್ದಾರೆ. ಗುಜರಾತ್‌ನ ಆನಂದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ. ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಭಾರತದಲ್ಲಿ 2014ಕ್ಕಿಂತ ಹಿಂದೆ ಇದ್ದಂತಹ ದುರ್ಬಲ ಸರ್ಕಾರವೇ ಇರಲೆಂದು ಪಾಕಿಸ್ತಾನ ಬಯಸುತ್ತದೆ ಎಂದು ಕುಟುಕಿದರು.

ರಾಹುಲ್‌ ಗಾಂಧಿ ಭಾಷಣವನ್ನು ಪಾಕಿಸ್ತಾನದ ಮಾಜಿ ಸಚಿವ ಫವಾದ್‌ ಹುಸೇನ್‌ (Ch Fawad Hussain) ಮೆಚ್ಚಿಕೊಂಡಿದ್ದನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಪಾಕಿಸ್ತಾನ ಹಾಗೂ ಕಾಂಗ್ರೆಸ್‌ ಮಧ್ಯೆ ಎಷ್ಟೊಂದು ಸ್ನೇಹ ಸಂಬಂಧ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ತಿರುಗೇಟು ಕೊಟ್ಟರು. ಕಾಂಗ್ರೆಸ್‌ ಇಲ್ಲಿ ದುರ್ಬಲಗೊಳ್ಳುತ್ತಿದ್ದರೆ ಅಲ್ಲಿ ಪಾಕಿಸ್ತಾನ ರಾಹುಲ್‌ ಗಾಂಧಿ ಪ್ರಧಾನಿ ಆಗಬೇಕೆಂದು ಪ್ರಾರ್ಥಿಸುತ್ತಿದೆ. ಹೇಗಾದರೂ ಸರಿ ಯುವರಾಜನೇ(ರಾಹುಲ್‌ ಗಾಂಧಿ) ಭಾರತದ ಪ್ರಧಾನಿ ಆದರೆ ಸಾಕೆಂದು ಪಾಕಿಸ್ತಾನ ಬಯಸುತ್ತಿದೆ. ಕಾಂಗ್ರೆಸ್‌ ಮತ್ತು ಪಾಕಿಸ್ತಾನದ ನಡುವಿನ ಸ್ನೇಹ ಸಂಬಂಧ ಈಗಾಗಲೇ ಬಯಲಾಗಿದೆ.

ಪಾಕಿಸ್ತಾನ ತನ್ನ ಬೇಳೆ ಬೇಯಿಸಿಕೊಳ್ಳಬೇಕಾದರೆ ಭಾರತದಲ್ಲಿ ದುರ್ಬಲ ಸರ್ಕಾರ ಇರಬೇಕು. ಈ ಹಿಂದೆ ಇದ್ದ ದುರ್ಬಲ ಸರ್ಕಾರದ ಕಾರಣದಿಂದಾಗಿಯೇ ಪಾಕಿಸ್ತಾನಕ್ಕೆ ಮುಂಬೈ ಭಯೋತ್ಪಾದಕಾ ದಾಳಿ ನಡೆಸಲು ಸಾಧ್ಯವಾಗಿತ್ತು. ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ಪಾಕಿಸ್ತಾನದ ಫಾಲೋವರ್‌ನಂತೆ ವರ್ತಿಸುತ್ತಿದೆ. ಹೀಗಾಗಿಯೇ ಇಲ್ಲಿ ಕಾಂಗ್ರೆಸ್‌ ಅಧಃಪತನ ಆಗುತ್ತಿದ್ದರೆ ಅಲ್ಲಿ ಪಾಕಿಸ್ತಾನ ಕಣ್ಣೀರುಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಇವತ್ತು ನಾನು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುತ್ತೇವೆ ಎಂಬ ಗ್ಯಾರಂಟಿಯನ್ನು ಕೊಡುತ್ತಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಯನ್ನು ಹೊಗಳಿದ ಪಾಕ್‌ ಮಾಜಿ ಸಚಿವ; ತಿರುಗೇಟು ಕೊಟ್ಟ ಬಿಜೆಪಿ

ವೋಟ್‌ ಜಿಹಾದ್‌ ವಿರುದ್ಧ ಕಿಡಿ

ಇದೇ ವೇಳೆ ಪ್ರಧಾನಿ ಮೋದಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ವೋಟ್‌ ಜಿಹಾದ್‌ ಘೋಷಣೆ ವಿಚಾರವನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ನಾವು ಲವ್‌ ಜಿಹಾದ್‌ ಮತ್ತು ಭೂ ಜಿಹಾದ್‌ ಕೇಳಿದ್ದೇವೆ. ಇದೀಗ ಮೊದಲ ಬಾರಿಗೆ ವೋಟ್‌ ಜಿಹಾದ್‌ ಬಗ್ಗೆ ಕೇಳುತ್ತಿದ್ದೇವೆ. ಮುಸ್ಲಿಂರೆಲ್ಲಾ ಒಗ್ಗಟ್ಟಾಗಿ ವೋಟ್‌ ಜಿಹಾದ್‌ ಮಾಡುವಂತೆ ಕರೆ ಕೊಡಲಾಗುತ್ತಿದೆ. ಇದು ಪ್ರತಿಪಕ್ಷಗಳ ನಿಜವಾದ ಮುಖ. ತಮ್ಮ ಮೈತ್ರಿ ಸರ್ಕಾರಗಳು ಅಧಿಕಾರದದಲ್ಲಿರುವ ರಾಜ್ಯಗಳಲ್ಲಿ ಮುಸ್ಲಿಮರಿಗೆ ವಾಮಮಾರ್ಗದಲ್ಲಿ ಮೀಸಲಾತಿ ಘೋಷಿಸುವುದೇ ಕಾಂಗ್ರೆಸ್‌ನ ಪ್ರಮುಖ ಗುರಿ. ಹಾಗೆ ಇಲ್ಲದಿದ್ದರೆ ಕಾಂಗ್ರೆಸ್‌ ಲಿಖಿತ ರೂಪದಲ್ಲಿ ಬರೆದುಕೊಡಲಿ ಎಂದು ಸವಾಲೆಸದರು.

Exit mobile version