Site icon Vistara News

Narendra Modi: “ನಾನು ಇಸ್ಲಾಂ ವಿರೋಧಿ ಅಲ್ಲ, ಆದರೆ ಮುಸ್ಲಿಮರು…”; ಕಾಂಗ್ರೆಸ್‌ ಆರೋಪದ ಬಗ್ಗೆ ಮೋದಿ ಹೇಳಿದ್ದೇನು?

Narendra Modi

Beat Drums, Clang Thalis; PM Narendra Modi Tells Varanasi Women How To Boost Polling

ನವದೆಹಲಿ: ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರನ್ನು ಪ್ರತಿಪಕ್ಷಗಳು ಮುಸ್ಲಿಂ ಮತ್ತು ಇಸ್ಲಾಂ ವಿರೋಧಿ ಎಂದು ಕರೆಯುವುದು ಸರ್ವೇ ಸಾಮಾನ್ಯ ವಿಚಾರ. ಇದೀಗ ಇದೇ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಧಾನಿ ಮೋದಿ, ನಾನು ಇಸ್ಲಾಂ(Islam) ಅಥವಾ ಮುಸ್ಲಿಂ ವಿರೋಧಿ(Anti Muslim) ಅಲ್ಲ. ಮುಸ್ಲಿಂ ಸಮುದಾಯದವರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸಲಿ ಎಂಬುದನಷ್ಟೇ ನಾನು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ಆರೋಪವವನ್ನು ತಳ್ಳಿ ಹಾಕಿದ್ದಾರೆ

ಕಾಂಗ್ರೆಸ್‌ನವರು ನಮ್ಮನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಾ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಇದು ಮಾಜಿ ಪ್ರಧಾನಿ ದಿವಂಗತ ನೆಹರೂ ಕಾಲದಿಂದಲೂ ನಡೆಯುತ್ತಿದೆ. ತಮ್ಮನ್ನು ತಾವು ಮುಸ್ಲಿಮರ ಸ್ನೇಹಿ ಪಕ್ಷ ಎಂದು ಹೇಳುತ್ತಲೇ ಬಂದಿದೆ. ಇದರಿಂದ ಸಾಕಷ್ಟು ಲಾಭ ಪಡೆದಿದೆ. ಹೀಗಾಗಿಯೇ ಅವರು ಅನಾವಶ್ಯಕವಾಗಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಭಯ ಹುಟ್ಟಿಸಿ ರಾಜಕೀಯ ಲಾಭ ಪಡೆಯುವದೇ ಅವರ ಕೆಲಸವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಆದರೆ ಮುಸ್ಲಿಂ ಸಮುದಾಯ ಎಚ್ಚೆತ್ತುಕೊಂಡಿದೆ. ನಮ್ಮ ಸರ್ಕಾರ ತ್ರಿವಳಿ ತಲಾಖ್‌ ರದ್ದುಗೊಳಿಸಿದಾಗ ಅನೇಕ ಮುಸ್ಲಿಂ ಸಹೋದರಿಯರು ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದರು. ಅಲ್ಲದೇ ನನಗೆ ಅವರ ಬಗ್ಗೆ ನಿಜವಾದ ಕಾಳಜಿ ಎಂಬುದು ಅವರಿಗೆ ಅರ್ಥವಾಗಿತ್ತು. ನಾನು ಆಯುಷ್ಮಾನ್‌ ಯೋಜನೆ ಜಾರಿಗೊಳಿಸಿದಾಗ ಎಲ್ಲರೂ ಸಂಸತ ವ್ಯಕ್ತಪಡಿಸದ್ದರು. ಕೋವಿಡ್‌ ಲಸಿಕೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದಾಗ ನಾನು ಯಾರ ಬಗ್ಗೆಯೂ ತಾರತಮ್ಯ ಹೊಂದಿಲ್ಲ ಎಂಬುದು ಎಲ್ಲರಿಗೂ ಮನವರಿಕೆ ಆಗಿತ್ತು. ಪ್ರತಿಪಕ್ಷಗಳ ಸುಳ್ಳು ಬಯಲಾಗಿರೋದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿಯೇ ಅವರು ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಸುಳ್ಳುಗಳ ಮೇಲ್ ಸುಳ್ಳು ಹೇಳುತ್ತಾ ಇದ್ದಾರೆ. ನನ್ನನ್ನು ಮುಸ್ಲಿಂ ವಿರೋಧಿ ಎಂದು ಬ್ರ್ಯಾಂಡ್‌ ಮಾಡುತ್ತಿದ್ದಾರೆ ಎಂದು ಪ್ರಧಾನಿ ಟಾಂಗ್‌ ಕೊಟ್ಟರು.

ಇದನ್ನೂ ಓದಿ:Narendra Modi: ಮತದಾನದ ಬಳಿಕ ಮಗುವನ್ನು ಎತ್ತಿ ಆಡಿಸಿದ ಪ್ರಧಾನಿ ಮೋದಿ; ವಿಡಿಯೋ ನೋಡಿ

ನಾನು ಮಸಲ್ಮಾನರಿಗೆ ಮನವಿ ಮಾಡುವುದು ಇಷ್ಟೇ.. ಸ್ವಯಂ ಅವಲೋಕನ ಮಾಡಿಕೊಳ್ಳಿ. ದೇಶ ಪ್ರಗತಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ಸಮದಾಯಕ್ಕೆ ಏನಾದರೂ ಕೊರತೆ ಕಂಡು ಬಂದಲ್ಲಿ ಅದು ಏನು? ಯಾಕಾಗಿ ಕೊರತೆ ಉಂಟಾಗಿದೆ ? ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿರುವಾಗ ನಮಗೇಕೆ ಸೌಲಭ್ಯಗಳು ಸಿಗುತ್ತಿರಲಿಲ್ಲ ಎಂದು ಯೋಜನೆ ಮಾಡಿ. ನಿಮ್ಮ ಮಕ್ಕಳ ಭವಿಷ್ಯದ ಬಗೆ ಚಿಂತನೆ ಇರಲಿ. ಯಾವ ಸಮುದಾಯದ ಜನರೂ ಕಾರ್ಮಿಕರಂತೆ ಬದುಕುವುದು ನನಗೆ ಇಷ್ಟವಿಲ್ಲ. ದೇಶದಲ್ಲಿರುವ ಎಲ್ಲಾ ಸಮುದಾಯಗಳ ಬಡ ಜನರಿಗೆ ಸರ್ಕಾರದ ಎಲ್ಲಾ ಸವಲತ್ತುಗಳು, ಮೀಸಲಾತಿ ಸಿಗಲೇಬೇಕು ಎಂಬುದು ನನ್ನ ಆಶಯ. ನಾನು ಯಾವುತ್ತೂ ಮುಸ್ಲಿಮರ ಮೀಸಲಾತಿ ಕಿತ್ತು ಹಾಕುತ್ತೇನೆ ಎಂದು ಹೇಳಿಲ್ಲ. ನಾನು ಹೇಳಿರುವುದು ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡುವುದು ಸರಿಯಲ್ಲ ಎಂಬುದಷ್ಟೇ. ಸಾವಿರಾರು ವರ್ಷಗಳಿಂದ ದಲಿತರಿಗೆ ಅನ್ಯಾಯ ಆಗುತ್ತಿದೆ. ಅದಕ್ಕಾಗಿ ಅವರಿಗೆ ನಮ್ಮ ಸಂವಿಧಾನದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ. ಯಾವ ಪಕ್ಷವೂ ಇದನ್ನು ವಿರೋಧಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

Exit mobile version