Site icon Vistara News

Central Vista | ಕರ್ತವ್ಯ ಪಥ ಲೋಕಾರ್ಪಣೆ, ಸೆಂಟ್ರಲ್‌ ವಿಸ್ಟಾ ಅವೆನ್ಯೂಗೆ ಪ್ರಧಾನಿ ಮೋದಿ ವಿಧ್ಯುಕ್ತ ಚಾಲನೆ

Kartavya

ನವದೆಹಲಿ: ಸೆಂಟ್ರಲ್‌ ವಿಸ್ಟಾ (Central Vista) ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ಸೆಂಟ್ರಲ್‌ ವಿಸ್ಟಾ ಅವೆನ್ಯೂಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಮೂರು ಕಿಲೋಮೀಟರ್‌ ಉದ್ದದ “ರಾಜಪಥ”ವೀಗ “ಕರ್ತವ್ಯ ಪಥ” ಹೆಸರಿನಲ್ಲಿ ಲೋಕಾರ್ಪಣೆಯಾಗಿದೆ.

ಇಡೀ ಕರ್ತವ್ಯ ಪಥವು ವಿಸ್ತಾರವಾದ ಹುಲ್ಲುಹಾಸುಗಳು, ಎಂಟು ಸುಧಾರಿತ ಸಾರ್ವಜನಿಕ ಸೌಕರ್ಯಗಳ ಬ್ಲಾಕ್‌ಗಳನ್ನು ಹೊಂದಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ಮಾರ್ಗದುದ್ದಕ್ಕೂ 133ಕ್ಕೂ ಹೆಚ್ಚು ದೀಪದ ಕಂಬಗಳಿವೆ. 4,087 ಮರಗಳು, 114 ಮಾಡರ್ನ್ ಸೈನ್‌ಬೋರ್ಡ್‌ಗಳು, ಸ್ಟೆಪ್ಡ್ ಗಾರ್ಡನ್ಸ್ ಮತ್ತು 987 ಕಾಂಕ್ರೀಟ್ ಗೂಟಗಳಿವೆ.‌ ಸುತ್ತ ಹಸಿರಿನೊಂದಿಗೆ 1.1 ಲಕ್ಷ ಚ.ಕಿ.ಮೀ ವಾಕ್‌ವೇಯನ್ನು ಗ್ರಾನೈಟ್‌ನೊಂದಿಗೆ ಮರು ರೂಪಿಸಲಾಗಿದೆ.

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಇರುವ ಸೆಂಟ್ರಲ್ ವಿಸ್ಟಾ ಅವೆನ್ಯೂವನ್ನು ರಿಪಬ್ಲಿಕ್ ಡೇ ಪರೇಡ್ ಮತ್ತು ಇತರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತದೆ. ಪ್ರಾಜೆಕ್ಟ್‌ನ ಭಾಗವಾಗಿ ಸೆಂಟ್ರಲ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿ ಪ್ರಾಜೆಕ್ಟ್ ಕೆಲಸವು 2021ರ ಫೆಬ್ರವರಿ 4ರಿಂದ ಶುರುವಾಯಿತು. ಇಂಡಿಯಾ ಗೇಟ್ ಸುತ್ತ ಇದ್ದ ಹುಲ್ಲುಹಾಸು ತೆಗೆಯಲಾಯಿತು. ಮೂಲ ಸೆಂಟ್ರಲ್ ವಿಸ್ಟಾ ಅವೆನ್ಯೂ ಪಟ್ಟಿಯು ಅನೇಕ ಬದಲಾವಣೆಗೊಳಪಡಲಿದೆ.

ಸೆಂಟ್ರಲ್ ವಿಸ್ಟಾಗೆ 2019ರಲ್ಲಿ ಚಾಲನೆ ನೀಡಲಾಗಿದ್ದು, 2026ರಲ್ಲಿ ಇಡೀ ಪ್ರಾಜೆಕ್ಟ್ ಪೂರ್ಣಗೊಳ್ಳಲಿದೆ. ರಾಷ್ಟ್ರಪತಿ ಭವನ, ಹೊಸ ಪಾರ್ಲಿಮೆಂಟ್ ಭವನ, ಮರು ಬಳಕೆಯಾಗಲಿರುವ ನಾರ್ಥ್ ಮತ್ತು ಸೌಥ್ ಬ್ಲಾಕ್, ಹಳೆ ಪಾರ್ಲಿಮೆಂಟ್ ಹಾಗೂ ಇಂಡಿಯಾ ಗೇಟ್ ಸೆಂಟ್ರಲ್ ವಿಸ್ಟಾ ಆಕರ್ಷಣೆಗಳಾಗಿರಲಿವೆ. ಸೆಂಟ್ರಲ್ ವಿಸ್ಟಾ 3.2 ಕಿ.ಮೀ. ಉದ್ದ ಜಾಗದಲ್ಲಿ ಹರಡಿಕೊಂಡಿದೆ. ಒಟ್ಟು 13,450 ಕೋಟಿ ರೂ. ವೆಚ್ಚದಲ್ಲಿ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗಿದೆ.

ಇದನ್ನೂ ಓದಿ | Central Vista | ಇಂಡಿಯಾ ಗೇಟ್‌ನಲ್ಲಿ ನೇತಾಜಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

Exit mobile version