Site icon Vistara News

Global Leader | ಜಾಗತಿಕ ಜನಪ್ರಿಯ ನಾಯಕರ ಪಟ್ಟಿ ಪ್ರಕಟ, ಮೋದಿ ಅವರ ಸ್ಥಾನವೆಷ್ಟು? ಇಲ್ಲಿದೆ ಪಟ್ಟಿ

Narendra Modi

ನವದೆಹಲಿ: ಕೊರೊನಾ ಬಿಕ್ಕಟ್ಟಿನ ಸಂದರ್ಭವೇ ಇರಲಿ, ಬೆಲೆಯೇರಿಕೆ ವಿರುದ್ಧ ಆಕ್ರೋಶವೇ ವ್ಯಕ್ತವಾಗಲಿ. ಇಲ್ಲವೇ ಪೆಗಾಸಸ್‌ ಪ್ರಕರಣ, ರೈತರ ಪ್ರತಿಭಟನೆ ಸೇರಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಲಿ, ಪ್ರಧಾನಿ ನರೇಂದ್ರ ಮೋದಿ ಅವರ ಖ್ಯಾತಿಗೆ ಮಾತ್ರ ಸ್ವಲ್ಪವೂ ಕುಂದಾಗುವುದಿಲ್ಲ. ಈ ಮಾತಿಗೆ ಪುಷ್ಟಿ ನೀಡುವಂತೆ, ನರೇಂದ್ರ ಮೋದಿ ಅವರು ಮತ್ತೆ ಜಗತ್ತಿನಲ್ಲೇ (Global Leader) ಹೆಚ್ಚು ಖ್ಯಾತಿ ಹೊಂದಿರುವ ನಾಯಕ ಎನಿಸಿದ್ದಾರೆ.

https://twitter.com/MorningConsult/status/1563052123415187457?s=20&t=BmaoyIK9IEMQk8GlEb9opA

ಮಾರ್ನಿಂಗ್‌ ಕನ್ಸಲ್ಟ್‌ ಸಮೀಕ್ಷೆ ಪ್ರಕಟವಾಗಿದ್ದು, ನರೇಂದ್ರ ಮೋದಿ ಅವರು ಶೇ.೭೫ರಷ್ಟು ರೇಟಿಂಗ್‌ನೊಂದಿಗೆ ಜಾಗತಿಕವಾಗಿ ಅಗ್ರ ಸ್ಥಾನದಲ್ಲಿದ್ದಾರೆ. ಮೆಕ್ಸಿಕೊ ಅಧ್ಯಕ್ಷ ಮ್ಯಾನುಯೆಲ್‌ ಲೋಪೆಜ್‌ ಓಬ್ರಾಡೊರ್‌ ಶೇ.೬೩ರಷ್ಟು ರೇಟಿಂಗ್‌ನೊಂದಿಗೆ ದ್ವಿತೀಯ ಹಾಗೂ ಇಟಲಿ ಪ್ರಧಾನಿ ಮಾರಿಯೊ ದ್ರಾಘಿ ಅವರು ಶೇ.೫೪ರಷ್ಟು ರೇಟಿಂಗ್‌ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ. ಜಗತ್ತಿನ ೨೨ ನಾಯಕರು ಮಾರ್ನಿಂಗ್‌ ಕನ್ಸಲ್ಟ್‌ ಸಮೀಕ್ಷೆಯ ಪಟ್ಟಿಯಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಶೇ.೪೧ರಷ್ಟು ರೇಟಿಂಗ್‌ ಪಡೆದು ಐದನೇ ಸ್ಥಾನದಲ್ಲಿದ್ದಾರೆ.

ಸಮೀಕ್ಷೆ ನಡೆಸಿದ್ದು ಹೇಗೆ?

ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ ಜಾಗತಿಕ ನಾಯಕರ ಖ್ಯಾತಿ ಕುರಿತು ಸಮೀಕ್ಷೆ ನಡೆಸುತ್ತದೆ. ನಿತ್ಯವೂ ಇದು ಸುಮಾರು ೨೦ ಸಾವಿರ ಜನರನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತದೆ. ಇತ್ತೀಚೆಗೆ ಅಂದರೆ, ಆಗಸ್ಟ್‌ ೧೭ರಿಂದ ಆ.೨೩ರವರೆಗೆ ಸಾವಿರಾರು ಜನರನ್ನು ಸಂಪರ್ಕಿಸಿ ಸಮೀಕ್ಷಾ ವರದಿ ತಯಾರಿಸಿದೆ. ೨೦೨೧ರ ನವೆಂಬರ್‌ ಹಾಗೂ ೨೦೨೨ರ ಜನವರಿಯಲ್ಲಿ ಪ್ರಕಟವಾದ ಸಮೀಕ್ಷೆಯಲ್ಲೂ ಮೋದಿ ಅಗ್ರ ಸ್ಥಾನದಲ್ಲಿದ್ದರು.

ಇದನ್ನೂ ಓದಿ | `ತಂಗಿʼಗೆ ನರೇಂದ್ರ ಮೋದಿ ಕೊಟ್ಟ 11 ರೂಪಾಯಿ, ಅರ್ಧ ಗಂಟೆಯಲ್ಲಿ 7.5 ಲಕ್ಷವಾಗಿತ್ತು !

Exit mobile version