Site icon Vistara News

Anti terrorism day: ಭಯೋತ್ಪಾದನೆ ವಿರುದ್ಧ ನಿತ್ಯ ಸಮರ, ರಾಜೀವ್‌ ಹತ್ಯೆ ಸ್ಮರಣೆಯಲ್ಲಿ ವಿಶೇಷ ದಿನ

ಆ್ಯಂಟಿ ಟೆರರಿಸಂ ಡೆ

ಭಯೋತ್ಪಾದನೆ ಈಗ ಜಗತ್ತಿಗೆ ಆಪತ್ಕಾರಿಯಾಗಿ ಎದ್ದು ನಿಂತಿರುವ ಪೀಡೆ. ಹಂತ ಹಂತವಾಗಿ ಪ್ರಪಂಚವನ್ನು ವ್ಯಾಪಿಸುತ್ತಿರುವ ಈ ಪಿಡುಗನ್ನು ನಿಯಂತ್ರಿಸದೇ ಹೋದರೆ ಸಮಾಜದ ಸಮತೋಲನ ಕೆಡುತ್ತದೆ. ವಿಶ್ವದ ವಿನಾಶಕ್ಕೆ ದಾರಿ ಮಾಡುತ್ತದೆ. ಇಂಥ ಅಪಾಯಕಾರಿ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವ ಉದ್ದೇಶದಿಂದ ಭಾರತದಲ್ಲಿ ಮೇ 21ರಂದು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಿನ (Anti terrorism day) ಆಚರಿಸಲಾಗುತ್ತದೆ. ದೇಶದ ಯುವಜನರು ಭಯೋತ್ಪಾದನೆ ವಿರುದ್ಧ ಎಚ್ಚೆತ್ತುಕೊಳ್ಳಬೇಕು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ ದಿನದಂದು ಮಾಡಲಾಗುತ್ತದೆ.

ಏನು ಈ ದಿನದ ಇತಿಹಾಸ?

ಭಾರತದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಮೇ 21ರಂದು ಹತ್ಯೆ ಮಾಡಲಾಗಿತ್ತು. ರಾಜೀವ್‌ ಗಾಂಧಿ ತಮಿಳುನಾಡಿನಲ್ಲಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬರ್‌ ದಾಳಿ ಮೂಲಕ ಅವರ ಹತ್ಯೆ ಮಾಡಲಾಗಿತ್ತು. ಅವರ ಜತೆ 14 ಮಂದಿ ಮರಣ ಹೊಂದಿದ್ದರು.

ಮುಂದೆ ವಿ.ಪಿ. ಸಿಂಗ್‌ ಸರಕಾರ ಆಡಳಿತದಲ್ಲಿದ್ದಾಗ ಈ ದಿನವನ್ನು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಎಂದು ಆಚರಿಸಲು ತೀರ್ಮಾನಿಸಲಾಯಿತು.

ಏನು ಈ ದಿನದ ಮಹತ್ವ?

ಭಯೋತ್ಪಾದನೆ ದೇಶದ ಒಗ್ಗಟ್ಟನ್ನು ಮುರಿಯುವುದರಿಂದ ವಿರುದ್ಧ ದೇಶದ ಜನತೆಯಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ದೇಶದಲ್ಲಿ ಶಾಂತಿ., ಮಾನವೀಯತೆ, ಸಮತೋಲನ ಹಾಗೂ ಏಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಟೆರರಿಸಂ ಎಂಬ ಜಾಲಕ್ಕೆ ಸಿಲುಕಿ ಜೀವನ ನಷ್ಟ ಮಾಡಿಕೊಂಡವರ ಬಗ್ಗೆ ತಿಳಿಸುವ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಮೇ 21ರಂದು ಪ್ರಮುಖವಾಗಿ ಕೇಂದ್ರ ಗೃಹಸಚಿವಾಲಯದ ವತಿಯಿಂದ ʼಪ್ರತಿಜ್ಞೆ ʼ ಸ್ವೀಕರಿಸುವ ಸಮಾರಂಭವನ್ನು ಆಯೋಜಿಸಲಾಗಿತ್ತದೆ.

ಹೀಗಿದೆ ಪ್ರತಿಜ್ಞೆ: ಭಾರತೀಯರಾದ ನಾವು, ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಸಂಪ್ರದಾಯದ ಬಗ್ಗೆ ಅಪಾರ ಗೌರವ ಹಾಗೂ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ದೇಶದ ಮೇಲೆ ಯಾವುದೇ ರೀತಿ ಹಿಂಸಾತ್ಮಕ ದಾಳಿಯ ವಿರುದ್ಧ ನಾವು ಹೋರಾಡುತ್ತೇವೆ. ನಮ್ಮ ಸರ್ವ ಶಕ್ತಿಯಿಂದ ಭಯೋತ್ಪಾದನೆ ವಿರುದ್ಧ ನಿಲ್ಲುತ್ತೇವೆ. ದೇಶದಲ್ಲಿ ಶಾಂತಿ, ಮಾನವೀಯತೆಯನ್ನು ಕಾಪಾಡುವಲ್ಲಿ ನಾವು ಶ್ರಮಿಸುತ್ತೇವೆ. ಮಾನವ ಸಮಾಜಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ.

ಇದನ್ನೂ ಓದಿ: ಇಂದು ರಾಷ್ಟ್ರೀಯ ಡೆಂಗ್ಯೂ ದಿನ: ರಾಜಧಾನಿಯಲ್ಲಿ ಹೆಚ್ಚುತ್ತಿದೆ ಪ್ರಕರಣ

Exit mobile version