Site icon Vistara News

National Population Policy: ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆ; ರಾಷ್ಟ್ರೀಯ ಜನಸಂಖ್ಯಾ ನೀತಿಗೆ ಆರ್‌ಎಸ್‌ಎಸ್‌ ಮುಖವಾಣಿ ʼಆರ್ಗನೈಸರ್ʼ ಒತ್ತಾಯ

National Population Policy

ಆರ್‌ಎಸ್‌ಎಸ್ (rss) ಬೆಂಬಲಿತ ಸಾಪ್ತಾಹಿಕ ಆರ್ಗನೈಸರ್ ( Organiser ) ತನ್ನ ಇತ್ತೀಚಿನ ಕವರ್ ಸ್ಟೋರಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೀತಿಗೆ (national population policy) ಒತ್ತಾಯಿಸಿದೆ. ಅದು ಹಿಂದೂಗಳ (hindu) ಜನಸಂಖ್ಯೆ ಎದುರು “ಹೆಚ್ಚುತ್ತಿರುವ ಮುಸ್ಲಿಂ(muslim) ಜನಸಂಖ್ಯೆ” ಮತ್ತು “ಜನಸಂಖ್ಯೆಯ ಅಸಮತೋಲನ” ವಿಷಯದ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಮೂರನೇ ಅವಧಿಯಲ್ಲಿ ಡಿಲಿಮಿಟೇಶನ್ ಸಂಭವಿಸುವ ನಿರೀಕ್ಷೆಯಿದೆ. ಡಿಲಿಮಿಟೇಶನ್ ಎನ್ನುವುದು ಪಂಚಾಯತ್ ಮತ್ತು ಪುರಸಭೆಗಳನ್ನು ಕ್ಷೇತ್ರ ಅಥವಾ ವಾರ್ಡ್‌ಗಳಾಗಿ ವಿಭಜಿಸುವ ಪ್ರಕ್ರಿಯೆಯಾಗಿದೆ. ದಕ್ಷಿಣದ “ಅನುಕೂಲತೆ”ಯ ಬಗ್ಗೆ ಬೆಳಕು ಚೆಲ್ಲಿರುವ ವಾರಪತ್ರಿಕೆಯು, ಚುನಾವಣಾ ಗಡಿಗಳನ್ನು ಮರುಹೊಂದಿಸುವುದು ಉತ್ತರ ಭಾರತದಲ್ಲಿ ತನ್ನ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಹಾಯ ಮಾಡುವ ಸಾಧ್ಯತೆಯಿದೆ ಎಂದು ಹೇಳಿದೆ.

ದೇಶದ ಜನಸಂಖ್ಯೆಯಲ್ಲಿ ಉಂಟಾಗುವ ಬದಲಾವಣೆಗಳು ಯಾವುದೇ ಧಾರ್ಮಿಕ ಸಮುದಾಯ ಅಥವಾ ಪ್ರದೇಶದ ಮೇಲೆ ಅಸಮಾನವಾಗಿ ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಆರ್‌ಎಸ್‌ಎಸ್ ಸಂಯೋಜಿತ ಮ್ಯಾಗಜೀನ್ ಆರ್ಗನೈಸರ್‌ನ ಸಂಪಾದಕೀಯವು ರಾಷ್ಟ್ರೀಯ ಜನಸಂಖ್ಯಾ ನೀತಿಗೆ ಕರೆ ನೀಡಿದೆ. ಇಲ್ಲವಾದರೆ ಸಾಮಾಜಿಕ- ಆರ್ಥಿಕ ಅಸಮಾನತೆಗಳು ಮತ್ತು ರಾಜಕೀಯ ಸಂಘರ್ಷಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.

ಜುಲೈ 8ರಂದು ಪ್ರಕಟವಾದ ಲೇಖನದಲ್ಲಿ ʼಆರ್ಗನೈಸರ್ʼ, ಜನಸಂಖ್ಯೆಯ ಅಸಮತೋಲನದ ಸಮಸ್ಯೆಯನ್ನು “ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆ” ಮತ್ತು ಹಿಂದೂಗಳ ಕಡಿಮೆ ಜನನ ಪ್ರಮಾಣದ ದಿಶೆಯಲ್ಲಿ ವಿಶ್ಲೇಷಣೆ ನಡೆಸಿದೆ. ವಿಪಕ್ಷಗಳು, ವಿಶೇಷವಾಗಿ ದಕ್ಷಿಣ ಭಾರತದ ವಿಪಕ್ಷ ರಾಜಕಾರಣಿಗಳು ಸಂಸತ್ತಿನಲ್ಲಿ ಡಿಲಿಮಿಟೇಶನ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನು ಪ್ರತಿಧ್ವನಿಸುತ್ತಾ ಪತ್ರಿಕೆಯ ಸಂಪಾದಕ ಪ್ರಫುಲ್ಲ ಕೇತ್ಕರ್, ಪ್ರಾದೇಶಿಕ ಅಸಮತೋಲನವು ಭವಿಷ್ಯದಲ್ಲಿ ಸಂಸತ್ತಿನ ಕ್ಷೇತ್ರಗಳ ವಿಂಗಡಣೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಮತ್ತೊಂದು ನಿರ್ಣಾಯಕ ಆಯಾಮವಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಮೂರನೇ ಅವಧಿಯಲ್ಲಿ ಡಿಲಿಮಿಟೇಶನ್ ಆಗುವ ನಿರೀಕ್ಷೆಯಿದೆ. ಚುನಾವಣಾ ಗಡಿಗಳನ್ನು ಪುನರ್ ರಚಿಸುವುದು ಬಿಜೆಪಿಗೆ ಸಹಾಯ ಮಾಡುವ ಸಾಧ್ಯತೆ ಇದೆ ಎಂದು ಎಂದು ವಾರಪತ್ರಿಕೆ ಹೇಳಿದೆ.


“ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ಭವಿಷ್ಯ” ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ ಪ್ರಫುಲ್ಲ ಕೇತ್ಕರ್ ಹೀಗೆ ಬರೆದಿದ್ದಾರೆ: ಪ್ರಾದೇಶಿಕ ಅಸಮತೋಲನವು ಮತ್ತೊಂದು ನಿರ್ಣಾಯಕ ಆಯಾಮವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಜನಸಂಖ್ಯೆಯನ್ನು ಸ್ಥಿರಗೊಳಿಸಿದ್ದರೂ ಇದು ಎಲ್ಲಾ ಧರ್ಮಗಳು ಮತ್ತು ಪ್ರದೇಶಗಳಲ್ಲಿ ಒಂದೇ ಆಗಿಲ್ಲ ಎಂದು ಹೇಳಿದೆ. ಪಶ್ಚಿಮ ಮತ್ತು ದಕ್ಷಿಣದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಕ್ರಮಗಳ ಬಗ್ಗೆ ತುಲನಾತ್ಮಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಜನಗಣತಿಯ ಅನಂತರ ಮೂಲ ಜನಸಂಖ್ಯೆಯನ್ನು ಬದಲಾಯಿಸಿದರೆ ಸಂಸತ್ತಿನಲ್ಲಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಬರೆದಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಗಮನಾರ್ಹವಾಗಿ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ಇದೆ. ಪ್ರಜಾಪ್ರಭುತ್ವದಲ್ಲಿ ಪ್ರಾತಿನಿಧ್ಯ ಮತ್ತು ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಸಂಖ್ಯೆಗಳು ನಿರ್ಣಾಯಕವಾಗಿವೆ. ನಾವು ಈ ಪ್ರವೃತ್ತಿಯ ಬಗ್ಗೆ ಇನ್ನಷ್ಟು ಜಾಗರೂಕರಾಗಿರಬೇಕು ಎಂದು ಕೇತ್ಕರ್ ಹೇಳಿದ್ದಾರೆ.

ಇದನ್ನೂ ಓದಿ: Soldier Death: ಉಗ್ರರ ದಾಳಿ; ಭಾರತೀಯ ಸೇನೆಯಲ್ಲಿದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ

Exit mobile version