ನವದೆಹಲಿ: ಆನ್‌ಲೈನ್ ಮೂಲಕ ಆಹಾರ ಸರಬರಾಜು ಮಾಡುವ ಸ್ವಿಗ್ಗಿಯಂತೆ ಜೊಮ್ಯಾಟೊ ಕೂಡ ಫುಡ್ ಬುಕ್ಕಿಂಗ್ ಕುರಿತ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, ದೆಹಲಿಯ ಆಹಾರ ಪ್ರಿಯರೊಬ್ಬರು (Nation’s Biggest Foodie) ಒಂದೇ ವರ್ಷದಲ್ಲಿ 3,330 ಬಾರಿ ಜೊಮ್ಯಾಟೊದಲ್ಲಿ ಫುಡ್ ಆರ್ಡರ್ ಮಾಡಿದ್ದಾರೆ. ನಿತ್ಯ 9ರ ಸರಾಸರಿಯಂತೆ ಫುಡ್ ಆರ್ಡರ್ ಮಾಡಿದ್ದು, ಇವು ದೇಶದಲ್ಲೇ ಅತಿ ಹೆಚ್ಚಿನ ಆಹಾರ ಪ್ರಿಯ ಎನಿಸಿದ್ದಾರೆ.
ದೆಹಲಿ ನಿವಾಸಿಯಾಗಿರುವ ಅಂಕುರ್ ಎಂಬುವರು ಫುಡ್ ಆರ್ಡರ್ ಮಾಡಿದ್ದು, ಇವರನ್ನು ಜೊಮ್ಯಾಟೊ, “ದಿ ನೇಷನ್ಸ್ ಬಿಗ್ಗೆಸ್ಟ್ ಫೂಡಿ” (The Nation’s Biggest Foodie) ಎಂಬ ಬಿರುದು ನೀಡಿದೆ. ಇತ್ತೀಚೆಗೆ ಸ್ವಿಗ್ಗಿ ಕೂಡ ವಾರ್ಷಿಕ ವರದಿ ಬಿಡುಗಡೆ ಮಾಡಿತ್ತು. ಬೆಂಗಳೂರಿನ ವ್ಯಕ್ತಿಯೊಬ್ಬರು ವರ್ಷದಲ್ಲಿ 16 ಲಕ್ಷ ರೂ. ಮೌಲ್ಯದ ಫುಡ್ ಆರ್ಡರ್ ಮಾಡಿ ಗಮನ ಸೆಳೆದಿದ್ದರು.
ಬುಕ್ಕಿಂಗ್‌ನಲ್ಲಿ ಬಿರ್ಯಾನಿಯೇ ಅಗ್ರ, ಪಿಜ್ಜಾ ದ್ವಿತೀಯ
ಸ್ವಿಗ್ಗಿಯಂತೆ ಜೊಮ್ಯಾಟೊದಲ್ಲಿ ಕೂಡ ಬಿರ್ಯಾನಿಯನ್ನೇ ಅತಿ ಹೆಚ್ಚು ಬುಕ್ ಮಾಡಲಾಗಿದೆ. ನಿಮಿಷಕ್ಕೆ ಸರಾಸರಿ 186 ಬಿರ್ಯಾನಿ ಬುಕ್ ಮಾಡಲಾಗಿದೆ ಎಂದು ಜೊಮ್ಯಾಟೊ ತಿಳಿಸಿದೆ. ಎರಡನೇ ಸ್ಥಾನದಲ್ಲಿ ಪಿಜ್ಜಾ ಇದ್ದು, ನಿಮಿಷಕ್ಕೆ ಸರಾಸರಿ 139 ಪಿಜ್ಜಾ ಆರ್ಡರ್ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ | Swiggy App | ಅತಿ ಹೆಚ್ಚು ಆರ್ಡರ್ ಮಾಡಿದ ಫುಡ್ ಯಾವುದು? ಬೆಂಗಳೂರಿಗ 16 ಲಕ್ಷ ಕೊಟ್ಟು ಖರೀದಿಸಿದ್ದೇನು?